ರಾಜ್ಯದಲ್ಲಿ ಯಾವ ಜಾತಿಗೆ ಎಷ್ಟು ಸೀಟು? – ಎರಡೂ ಪಕ್ಷಗಳ ಪಟ್ಟಿ ಇಲ್ಲಿದೆ

ರಾಜ್ಯದಲ್ಲಿ ಬಿಜೆಪಿ 20 ಕ್ಷೇತ್ರಗಳು ಹಾಗೂ ಕಾಂಗ್ರೆಸ್‌ 24 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಪ್ರಕಟಿಸುವ ಮೂಲಕ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಹಲವು ಲೆಕ್ಕಾಚಾರ ಹಾಕಿಕೊಂಡು ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ ಜಾತಿ ಲೆಕ್ಕಾಚಾರ ಕೂಡ ಪ್ರಮುಖವಾಗಿದೆ ಎಂದರೆ ತಪ್ಪಾಗಲಾರದು. ಹಾಗಾದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಈ ಬಾರಿ ಯಾವ ಜಾತಿಗಳಿಗೆ ಮಣೆ ಹಾಕಿವೆ? ಅಭ್ಯರ್ಥಿಗಳ ಜಾತಿವಾರು ಲೆಕ್ಕಾಚಾರ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಬಿಜೆಪಿ ಇದುವರೆಗೂ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ 8 ಲಿಂಗಾಯತ, 3 ಒಕ್ಕಲಿಗ, 2 ಎಸ್‌ಸಿ, 2 ಬ್ರಾಹ್ಮಣ, ಕ್ಷತ್ರೀಯ, ಬಂಜಾರ, ವಾಲ್ಮೀಕಿ ನಾಯಕ, ಬಂಟ, ಬಿಲ್ಲವ ಸಮುದಾಯಕ್ಕೆ ತಲಾ ಒಂದು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿದೆ. ಇನ್ನೂ, ಕಾಂಗ್ರೆಸ್‌ ಇದುವರೆಗೂ 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ 6 ಒಕ್ಕಲಿಗ, 5 ಲಿಂಗಾಯತ, 3 ಎಸ್‌’ಸಿ, 2 ಎಸ್‌’ಟಿ, 2 ಕುರುಬ, ಈಡಿಗ, ಬಿಲ್ಲವ, ಬಂಟ, ರೆಡ್ಡಿ, ಮುಸ್ಲಿಂ, ಮರಾಠ ಸಮುದಾಯಕ್ಕೆ ತಲಾ ಒಂದು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿದೆ.

How many seats for which caste in the state?

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ – ಜಾತಿವಾರು ಹಂಚಿಕೆ:

ಕ್ರಮ ಸಂಖ್ಯೆ ಕ್ಷೇತ್ರ ಅಭ್ಯರ್ಥಿ ಜಾತಿ
1 ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್‌ ಒಕ್ಕಲಿಗ
2 ಶಿವಮೊಗ್ಗ ಗೀತಾ ಶಿವರಾಜ್‌ಕುಮಾರ್ ಈಡಿಗ
3 ಹಾವೇರಿ ಆನಂದಸ್ವಾಮಿ ಗಡ್ಡದೇವರಮಠ ವೀರಶೈವ ಲಿಂಗಾಯತ
4 ಮಂಡ್ಯ ಸ್ಟಾರ್‌ ಚಂದ್ರು ಒಕ್ಕಲಿಗ
5 ತುಮಕೂರು ಮುದ್ದಹನುಮೇಗೌಡ ಒಕ್ಕಲಿಗ
6 ಹಾಸನ ಶ್ರೇಯಸ್‌ ಪಟೇಲ್‌ ಒಕ್ಕಲಿಗ
7 ವಿಜಯಪುರ ರಾಜು ಅಲಗೂರು ಎಸ್‌ಸಿ
8 ಕಲಬುರಗಿ ರಾಧಾಕೃಷ್ಣ ದೊಡ್ಮನಿ ಎಸ್‌ಸಿ
9 ಚಿತ್ರದುರ್ಗ ಬಿಎನ್‌ ಚಂದ್ರಪ್ಪ ಎಸ್‌ಸಿ
10 ಬೆಳಗಾವಿ ಮೃಣಾಲ್‌ ಹೆಬ್ಬಾಳ್ಕರ್‌ ಪಂಚಮಸಾಲಿ ಲಿಂಗಾಯತ
11 ಚಿಕ್ಕೋಡಿ ಪ್ರಿಯಾಂಕಾ ಜಾರಕಿಹೊಳಿ ವಾಲ್ಮೀಕಿ ನಾಯಕ
12 ಬಾಗಲಕೋಟೆ ಸಂಯುಕ್ತಾ ಪಾಟೀಲ್ ಲಿಂಗಾಯತ
13 ಹುಬ್ಬಳ್ಳಿ – ಧಾರವಾಡ ವಿನೋದ್‌ ಅಸೂಟಿ ಕುರುಬ
14 ಕೊಪ್ಪಳ ರಾಘವೇಂದ್ರ ಹಿಟ್ನಾಳ್‌ ಕುರುಬ
15 ದಾವಣಗೆರೆ ಡಾ ಪ್ರಭಾ ಮಲ್ಲಿಕಾರ್ಜುನ್‌ ವೀರಶೈವ ಲಿಂಗಾಯತ
16 ಬೀದರ್‌ ಸಾಗರ್‌ ಖಂಡ್ರೆ ವೀರಶೈವ ಲಿಂಗಾಯತ
17 ದಕ್ಷಿಣ ಕನ್ನಡ ಪದ್ಮರಾಜ್‌ ಪೂಜಾರಿ (ಬಿಲ್ಲವ)
18 ಉಡುಪಿ – ಚಿಕ್ಕಮಗಳೂರು ಡಾ ಜಯಪ್ರಕಾಶ್‌ ಹೆಗ್ಡೆ ಬಂಟ
19 ಬೆಂಗಳೂರು ದಕ್ಷಿಣ ಸೌಮ್ಯ ರೆಡ್ಡಿ ರೆಡ್ಡಿ
20 ಬೆಂಗಳೂರು ಕೇಂದ್ರ ಮನ್ಸೂರ್‌ ಅಲಿಖಾನ್‌ ಮುಸ್ಲಿಂ
21 ಬೆಂಗಳೂರು ಉತ್ತರ ಪ್ರೋ. ರಾಜೀವ್‌ ಗೌಡ ಒಕ್ಕಲಿಗ
22 ಮೈಸೂರು ಎಂ ಲಕ್ಷ್ಮಣ್‌ ಒಕ್ಕಲಿಗ
23 ರಾಯಚೂರು ಜಿ ಕುಮಾರ್‌ ನಾಯ್ಕ್‌ ವಾಲ್ಮೀಕಿ ನಾಯಕ
24 ಉತ್ತರ ಕನ್ನಡ ಅಂಜಲಿ ನಿಂಬಾಳ್ಕರ್‌ ಮರಾಠ

How many seats for which caste in the state?

ಬಿಜೆಪಿ ಅಭ್ಯರ್ಥಿಗಳ ಪಟ್ಟಿ – ಜಾತಿವಾರು ಹಂಚಿಕೆ

ಕ್ರಮ ಸಂಖ್ಯೆ ಕ್ಷೇತ್ರ ಅಭ್ಯರ್ಥಿ ಜಾತಿ
1 ಬೆಂಗಳೂರು ಗ್ರಾಮಾಂತರ ಡಾ ಸಿಎನ್‌ ಮಂಜುನಾಥ್‌ ಒಕ್ಕಲಿಗ
2 ಶಿವಮೊಗ್ಗ ಬಿವೈ ರಾಘವೇಂದ್ರ ಲಿಂಗಾಯತ
3 ಹಾವೇರಿ ಬಸವರಾಜ ಬೊಮ್ಮಾಯಿ ಲಿಂಗಾಯತ
4 ಮೈಸೂರು ಯದುವೀರ್‌ ಒಡೆಯರ್‌ ಕ್ಷತ್ರೀಯ
5 ತುಮಕೂರು ವಿ ಸೋಮಣ್ಣ ಲಿಂಗಾಯತ
6 ಬಳ್ಳಾರಿ ಶ್ರೀರಾಮುಲು ಎಸ್‌ಟಿ ವಾಲ್ಮೀಕಿ
7 ವಿಜಯಪುರ ರಮೇಶ್‌ ಜಿಗಜಿಣಗಿ ಎಸ್‌ಸಿ
8 ಕಲಬುರಗಿ ಡಾ ಉಮೇಶ್‌ ಜಾಧವ್‌ ಬಂಜಾರ
9 ಚಾಮರಾಜನಗರ ಎಸ್‌ ಬಾಲರಾಜ್‌ ಎಸ್‌ಸಿ
10 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ ಒಕ್ಕಲಿಗ
11 ಚಿಕ್ಕೋಡಿ ಅಣ್ಣಾ ಸಾಹೇಬ್‌ ಜೊಲ್ಲೆ ಲಿಂಗಾಯತ
12 ಬಾಗಲಕೋಟೆ ಪಿಸಿ ಗದ್ದಿಗೌಡರ್ ಲಿಂಗಾಯತ‌ ಗಾಣಿಗ
13 ಹುಬ್ಬಳ್ಳಿ – ಧಾರವಾಡ ಪ್ರಹ್ಲಾದ್‌ ಜೋಶಿ ಬ್ರಾಹ್ಮಣ
14 ಕೊಪ್ಪಳ ಡಾಬಸವರಾಜ್‌ ಕ್ಯಾವಟೂರು ಲಿಂಗಾಯತ ಪಂಚಮಸಾಲಿ
15 ದಾವಣಗೆರೆ ಗಾಯತ್ರಿ ಸಿದ್ದೇಶ್ವರ್‌ ವೀರಶೈವ ಲಿಂಗಾಯತ
16 ಬೀದರ್‌ ಭಗವಂತ್ ಖೂಬಾ ಲಿಂಗಾಯತ
17 ದಕ್ಷಿಣ ಕನ್ನಡ ಕ್ಯಾ. ಬ್ರಿಜೇಶ್‌ ಚೌಟಾ ಬಂಟ್ಸ್‌
18 ಉಡುಪಿ – ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ
19 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಬ್ರಾಹ್ಮಣ
20 ಬೆಂಗಳೂರು ಕೇಂದ್ರ ಪಿಸಿ ಮೋಹನ್‌ ಒಕ್ಕಲಿಗ (ಬಲಿಜ)

You might also like
Leave A Reply

Your email address will not be published.