ಕುಸ್ತಿ ಫೆಡರೇಷನ್ ಆಫ್ ಇಂಡಿಯಾಕ್ಕೆ ನೂತನ ಅಧ್ಯಕ್ಷರ ಆಯ್ಕೆ – ಕುಸ್ತಿಗೆ ಸಾಕ್ಷಿ ಮಲೀಕ್ ಗುಡ್ ಬೈ?

ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆಯನ್ನು ಹಾಗೂ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು ‘2023ರ ಏಷ್ಯನ್ ಗೇಮ್’ನಲ್ಲಿ ಮಾಡಿದ ಸಾಧನೆಯನ್ನು ಕೂಡಾ ನಾವೆಲ್ಲಾ ನೋಡಿದ್ದೇವೆ.‌ ಈಗ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆಯಾಗಿದ್ದಾರೆ.

ಸಂಜಯ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಅಂದು ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ‌ಕುಸ್ತಿಪಟು ಸಾಕ್ಷಿ ಮಲಿಕ್ ಅವರು, ಒಂದು ವೇಳೆ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಅವರು ಅಧ್ಯಕ್ಷರಾಗಿ ಮುಂದುವರೆಯುವುದಾದರೆ ನಾನು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನೇ ಬಿಡುತ್ತೇನೆ ಎಂದಿದ್ದಾರೆ.

ನಾವು ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಆರಿಸಬೇಕೆಂದು ಕೇಳಿಕೊಂಡಿದ್ದೆವು, ಕುಸ್ತಿ ಫೆಡರೇಶನ್ ಅಧ್ಯಕ್ಷರ ಪಟ್ಟಿ ತೆಗೆದು ನೋಡಿದರೆ‌ ಒಬ್ಬರೇ ಒಬ್ಬ ಮಹಿಳೆ ಇಲ್ಲದಿರುವುದು ಕಾಣುತ್ತದೆ, ಮಹಿಳೆಯರು ಅಧ್ಯಕ್ಷರಾದರೆ ಮಾತ್ರ ನಮ್ಮ ‌ಮೇಲೆ ನಡೆಯುವ ದೌರ್ಜನ್ಯ ನಿಲ್ಲುತ್ತದೆ. ನಮ್ಮ ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ, ಮುಂದಿನ ಪೀಳಿಗೆಯ ಕುಸ್ತಿಪಟುಗಳು ಇದಕ್ಕಾಗಿ ಹೋರಾಡಬೇಕು’ ಎಂದು ಕರೆ ನೀಡಿದ್ದಾರೆ.

 

ಇನ್ನೋರ್ವ ಕುಸ್ತಿಪಟು ವಿನೇಶ್ ಪೋಗಟ್ ಮಾಧ್ಯಮಕ್ಕೆ ಮಾತನಾಡಿ, ಹೊಸ ಅಧ್ಯಕ್ಷರಲ್ಲಿ ನಮ್ಮ ನಿರೀಕ್ಷೆಗಳು ಕಡಿಮೆ ಇದೆ, ನಾವಿನ್ನೂ ರಸ್ತೆಯಲ್ಲಿ ಹೋರಾಟ ನಡೆಸುತ್ತಿದ್ದೇವೆ ನಮ್ಮ ಕಷ್ಟಗಳನ್ನು ಯಾರಿಗೆ ಹೇಳೋಣ? ಕುಸ್ತಿಯ ಭವಿಷ್ಯ ಅಂಧಕಾರದಲ್ಲಿದೆ. ಎಂದು ಹೇಳಿದ್ದಾರೆ.

ಇನ್ನು ಸಾಕ್ಷಿ ಮಲಿಕ್ ಅವರ ಹೇಳಿಕೆಯ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ WFI ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್, ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಕುಸ್ತಿಪಟುಗಳ ಈ ನಿಲುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆಗಳು ನಡೆಯುತ್ತಿವೆ.

You might also like
Leave A Reply

Your email address will not be published.