Ration Card : ಶಾಕ್ ಕೊಟ್ಟ ಆಹಾರ ಇಲಾಖೆ – ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು!

ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ (Ration Card) ಮೂಲ ಮಾನದಂಡವಾಗಿದೆ. ಆದ್ದರಿಂದ, ಅಕ್ರಮ ರೇಷನ್ ಕಾರ್ಡ್ʼಗಳ ನಿಯಂತ್ರಣಕ್ಕೆ ಮುಂದಾಗಿರುವ ಆಹಾರ ಇಲಾಖೆಯು ಕಳೆ 6 ತಿಂಗಳುಗಳಿಂದ ನಿರಂತರವಾಗಿ ರೇಷನ್ ಪಡೆಯದೇ ಇರುವವರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.

ಕಳೆದ 6 ತಿಂಗಳಿನಿಂದ ಪಡಿತರ ಪಡೆಯದ ರೇಷನ್ ಕಾರ್ಡ್ʼಗಳನ್ನು (Ration Card) ರದ್ದು ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದ್ದು, ರಾಜ್ಯಾದ್ಯಂತ ಒಟ್ಟು ಸಕ್ರಿಯವಾಗಿರದ 3.26 ಲಕ್ಷ ರೇಷನ್ ಕಾರ್ಡ್ʼಗಳ ರದ್ದಾಗಲಿವೆ ಎಂದು ವರದಿಯಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 1,35,49,500 ರೇಷನ್ ಕಾರ್ಡ್ʼಗಳಿವೆ. ಇದರಲ್ಲಿ ಬಿಪಿಎಲ್ (BPL Ration Cards) 1,16,88,377 ಹಾಗೂ ಅಂತ್ಯೋದಯ 10,88,030 ಕಾರ್ಡ್ʼಗಳಿವೆ. ರಾಜ್ಯದ 5.1 ಕೋಟಿ ಜನತೆ ರೇಷನ್ ಕಾರ್ಡ್ʼಗಳ ಫಲಾನುಭವಿಗಳಾಗಿದ್ದಾರೆ.

ಪಂಚ ಗ್ಯಾರಂಟಿಗಳಿಗೆ ಮೂಲವಾಗಿರುವ ರೇಷನ್ ಕಾರ್ಡ್ ತಿದ್ದುಪಡಿಗೆ ಈಗಾಗಲೇ ಲಕ್ಷಾಂತರ ಅರ್ಜಿಗಳ ಸರ್ಕಾರದ ಮುಂದಿವೆ. ಅಲ್ಲದೇ, ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಕಷ್ಟು ಜನ ತವಕಿಸುತ್ತಿದ್ದಾರೆ. ಆದರೆ, ಗ್ಯಾರಂಟಿಗಳ ಹಣಕಾಸು ವೆಚ್ಚ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಇದುವರೆಗೂ ನೂತನ ಪಡಿತರ ಚೀಟಿಗೆ (BPL Ration Cards) ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ.

ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ನೇರವಾಗಿ ರೇಷನ್ ಕಾರ್ಡ್ ಜೊತೆ ಸಂಬಂಧವನ್ನೊಂದಿವೆ. ಇವುಗಳಲ್ಲಿ ಯುವನಿಧಿ ಇನ್ನೂ ಜಾರಿಯಾಗಿಲ್ಲ. ಆದರೆ, ಡಿಸೆಂಬರ್ ಕೊನೆಯ ವಾರದಲ್ಲಿ ಯುವನಿಧಿ ಯೋಜನೆಯ ನೋಂದಣಿಗೆ ಅವಕಾಶ ನೀಡಲಾಗಿದೆ.

ರೇಷನ್ ಕಾರ್ಡ್ʼದಾರರು (Ration Card) ತಮ್ಮ ಕಾರ್ಡ್ ರದ್ದಾಗದಂತೆ ಇರಲು ಹಾಗೂ ಕಾರ್ಡ್ ಸಕ್ರಿಯವಾಗಿರಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ರೇಷನ್ ತರಲೇಬೇಕಾಗಿದೆ. ನಗರಗಳಲ್ಲಿನ ಬಹುತೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆರ್ʼಟಿಇ ಅಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಾಗೂ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ (BPL Ration Cards) ಪಡೆದಿದ್ದಾರೆ. ಈ ರೀತಿಯ ಸೌಲಭ್ಯಗಳನ್ನು ಪಡೆಯಲು ಪ್ರತ್ಯೇಕ ಕಾರ್ಡ್ ವಿತರಿಸುವ ಬಗ್ಗೆ ಚಿಂತನ ನಡೆಸಲಾಗುವುದು ಎಂದು ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆ.ಎಚ್. ಮುನಿಯಪ್ಪ ಹೇಳಿಕೆ ನೀಡಿದ್ದರು.

You might also like
Leave A Reply

Your email address will not be published.