ಕಾಂಗ್ರೆಸ್ ಬಳಿ ಸಮೋಸಾ ಕೊಳ್ಳಲೂ ದುಡ್ಡಿಲ್ಲ – I.N.D.I. ಮೈತ್ರಿಕೂಟದಲ್ಲಿ ದಿನಕ್ಕೊಂದು ಬಿಕ್ಕಟ್ಟು

ದಿನದಿಂದ ದಿನಕ್ಕೆ I.N.D.I. ಮೈತ್ರಿಕೂಟದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಬಿರುಕುಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಈಗ ಇನ್ನೊಂದು ವಿಷಯ ಹೊಸ ಸೇರ್ಪಡೆಯಾಗಿದೆ‌.‌

ಭಾರತದ ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರನ್ನು ಅವಹೇಳನ ಮಾಡಿದ ಘಟನೆ ಪ್ರಜಾಪ್ರಭುತ್ವದ ದೇಗುಲ ಎನ್ನಲಾಗುವ ಪಾರ್ಲಿಮೆಂಟಿನ ಮೆಟ್ಟಿಲುಗಳ ಮೇಲೆ ನಡೆಯಿತು. ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್ ಬ್ಯಾನರ್ಜಿ ನಡೆದುಕೊಂಡ ರೀತಿಯನ್ನು ಅದೇ ಪಕ್ಷದ ನಾಯಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಮರ್ಥಿಸಿಕೊಳ್ಳುವ ಭರದಲ್ಲಿ ರಾಹುಲ್ ಗಾಂಧಿಯವರನ್ನು ದೂಷಿಸಿದ್ದಾರೆ. ನಿನ್ನೆ ಮಾಧ್ಯಮದ ಎದುರು ಮಾತನಾಡಿದ ಅವರು ‘ನಾವು ಎಲ್ಲರನ್ನೂ ಗೌರವಿಸುತ್ತೇವೆ, ಯಾರನ್ನೂ ಅವಹೇಳನ ಮಾಡುವ ಉದ್ದೇಶವಿಲ್ಲ. ಕಲ್ಯಾಣ್ ಬ್ಯಾನರ್ಜಿಯವರು ರಾಜಕೀಯದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯ ಹಾಗೆ ಹಾಸ್ಯಾಸ್ಪದವಾಗಿ ಧನಕರ್ ಅವರನ್ನು ಅನುಕರಿಸಿದ್ದರಾಯೇ ಹೊರತು, ದುರುದ್ದೇಶಪೂರಕವಾಗಿ ಅಲ್ಲ ಹಾಗೂ ರಾಹುಲ್ ಗಾಂಧಿಯವರು ಈ ಪ್ರಕರಣವನ್ನು ವಿಡಿಯೋ ಮಾಡಿಲ್ಲವಾಗಿದ್ದರೆ ನಮಗೆಲ್ಲಾ ಈ ಘಟನೆಯ ಕುರಿತು ತಿಳಿಯುತ್ತಲೇ ಇರಲಿಲ್ಲ’ ಎಂದು ಹೇಳಿಕೆ‌ ನೀಡಿದ್ದಾರೆ.

 ಮೊನ್ನೆ ನಡೆದ ಮೈತ್ರಿಕೂಟ ಸಭೆಯಲ್ಲಿ ನಿತೀಶ್ ಕುಮಾರ್ ಅವರ “ಹಿಂದಿ ರಾಷ್ಟ್ರಭಾಷೆ ಅದನ್ನು ಕಲಿಯಿರಿ” ಎಂಬ ಹೇಳಿಕೆಯ ಬಗೆಗೆ ಭುಗಿಲೆದ್ದ ಅಸಮಾಧಾನದ ಬೆನ್ನಲೇ ಇಂಡಿ ಮೈತ್ರಿಕೂಟದ ಸಭೆ ಮುಗಿಯುತ್ತಿದ್ದ ಹಾಗೆ, “ಕಾಂಗ್ರೆಸ್‌ನ ಬಳಿ ಸಮೋಸಾಕ್ಕೆ ಆಗುವಷ್ಟು ಕೂಡಾ ಹಣವಿಲ್ಲ, ನಮ್ಮ ಬಳಿಯೇ ದೇಣಿಗೆ ನೀಡುವಂತೆ ಕೇಳಿದ್ದಾರೆ” ಎಂದು ಜೆಡಿಯುನ‌ ಸಂಸದ ಸುನಿಲ್ ಕುಮಾರ್ ಪಿಂಟು ಅವರು ಮೈತ್ರಿಕೂಟದ ಮೇಲೆ ಅದರಲ್ಲೂ ಕಾಂಗ್ರೆಸ್‌ನ ಮೇಲೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈಗ ಮಮತಾ ಬ್ಯಾನರ್ಜಿಯವರ ಈ ಆರೋಪ ಕಾಂಗ್ರೆಸ್‌ ಮತ್ತು ಮೈತ್ರಿಕೂಟದ ನಡುವೆ ಯಾವುದೂ ಸರಿ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ.

You might also like
Leave A Reply

Your email address will not be published.