ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ರಾಜೀನಾಮೆ – ಯಾಕೆ? ಈ ವರದಿ ಓದಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯದಲ್ಲಿ ಒಂದಿಲ್ಲೊಂದು ಬದಲಾವಣೆಗಳು ಆಗುತ್ತಲೇ ಇವೆ. ರಾಜಕೀಯ ನಾಯಕರ ಪಕ್ಷಾಂತರ, ಪರಸ್ಪರ ಕೆಸರೆರಚಾಟ, ಹೋರಾಟ, ಟೀಕೆಗಳ ನಡುವೆ, ಈಗಾಗಲೇ I.N.D.I ಮೈತ್ರಿಕೂಟದ ಬಹುತೇಕ ಪಕ್ಷಗಳು ಒಕ್ಕೂಟದಿಂದ ಹಿಂದಕ್ಕೆ ಸರಿದಿರುವಂತೆ, ಕೇಂದ್ರದ ಆಡಳಿತಾರೂಢ ಎನ್.ಡಿ.ಎ ಒಕ್ಕೂಟದ ಪಾಳಯದಲ್ಲಿ ಒಂದು ಸಣ್ಣ ಬಿರುಕು ಮೂಡಿದೆ.

ಬಿಹಾರ ಲೋಕಸಭಾ ಚುನಾವಣೆ ಸೀಟು ಹಂಚಿಕೆಯಿಂದ ತಮ್ಮನ್ನು ದೂರವಿಟ್ಟು ತಮ್ಮ ಅಣ್ಣನ ಮಗ ಚಿರಾಗ್‌ ಪಾಸ್ವಾನ್‌ ಜೊತೆ ಬಿಜೆಪಿ ಮೈತ್ರಿಕೊಂಡ ಬೆನ್ನಲ್ಲೇ, ಆರ್‌.ಎಲ್‌.ಜ.ಪಿ ನಾಯಕ ಪಶುಪತಿ ಕುಮಾರ್‌ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಎನ್‌’ಡಿಎ ಮೈತ್ರಿಕೂಟಕ್ಕೆ ನೀಡಿರುವ ಬೆಂಬಲವನ್ನೂ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ, ಪಶುಪತಿ ಕುಮಾರ್‌ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಅದು ಪಶುಪತಿ ಅವರ ಸೋದರ, ಕೇಂದ್ರದ ಮಾಜಿ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರ ಜೊತೆ ಮೈತ್ರಿಕೊಂಡು ಅವರ ಪಕ್ಷಕ್ಕೆ 5 ಸ್ಥಾನ ನೀಡಿದೆ. ಈ ಹಿನ್ನೆಲೆಯಲ್ಲಿ ತಮಗೆ ಎನ್‌ಡಿಎ ಮೈತ್ರಿಕೂಟ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

You might also like
Leave A Reply

Your email address will not be published.