‘ಮೋದಿ ಸೂರ್ಯನಾದರೆ, ನಾವೆಲ್ಲಾ ಅವರ ಸುತ್ತ ತಿರುಗುವ ಚಂದ್ರನಂತೆ’ – ಸಿಎಂ ಹಿಮಂತ ಬಿಸ್ವಾ ಶರ್ಮ!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ‌ಗೆ ಮತ ನೀಡದಂತೆ ಕೇಳಿಕೊಂಡ ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ್ ಬಿಸ್ವಾ ಶರ್ಮ ಅವರು, ಕೊನೆಯದಾಗಿ ಕಾಂಗ್ರೆಸ್‌ನ ಬೆಂಬಲಿಗರು ಬಿಜೆಪಿಯನ್ನೇ ಸೇರುವುದರಿಂದ ಕಾಂಗ್ರೆಸ್‌‌ಗೆ ಬೆಂಬಲಿಸುವ ಉದ್ದೇಶವಾದರೂ ಏನು ಎಂದು ಪ್ರತಿಪಾದಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಹಿಮಂತ್, ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ನಿಮ್ಮ ಅಮೂಲ್ಯವಾದ ಮತವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಿ? ನಾಳೆಯ ದಿನ ಅವರು ಗೆದ್ದರೆ ಸೇರಲಿರುವುದು ಬಿಜೆಪಿಯನ್ನೇ ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡುವುದು ಅರ್ಥಹೀನ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‌ಗೆ ಅವಕಾಶವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಭವಿಷ್ಯದ ಕುರಿತು ಮರೆತು ಬಿಡಿ ಬದಲಾಗಿ ಅಭ್ಯರ್ಥಿಗಳು ಪಕ್ಷದಲ್ಲಿ ಉಳಿಯುತ್ತಾರೋ ಇಲ್ಲವೋ ಎಂಬುದನ್ನು ಮತದಾರರು ಯೋಚಿಸಬೇಕಾಗಿದೆ. ಯಾಕೆಂದರೆ ಓರ್ವ ಅಭ್ಯರ್ಥಿಯನ್ನು ಹೊರತು ಪಡಿಸಿ ಮತ್ತೆಲ್ಲರನ್ನೂ ನಾನೂ ಬಿಜೆಪಿಗೆ ಕರೆ ತರಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'If Modi is the sun, we are like the moon' - CM Himanta Biswa Sharma

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮರು ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ ಹಿಮಂತ್, ಮೋದಿಯವರ ಕ್ರಿಯಾಶೀಲತೆ ಮತ್ತು ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಅಲ್ಲದೇ ಮೋದಿಯವರ ಈ ಗುಣಗಳೇ ಇತರರನ್ನು ಬಿಜೆಪಿಯೆಡೆಗೆ ಆಕರ್ಷಿಸುತ್ತಿದೆ. ಮೋದಿ ಸೂರ್ಯನಾದರೆ ನಾವೆಲ್ಲಾ ಅದರ ಸುತ್ತ ತಿರುಗುವ ಚಂದ್ರನ ಹಾಗೆ ಎಂದು ಹೇಳಿದರು.

ಮೋದಿಯವರು ಹಗಲಿರುಳೆನ್ನದೆ ದೇಶದ ಉನ್ನತಿಗಾಗಿ ಕೆಲಸ‌ ಮಾಡುತ್ತಿದ್ದಾರೆ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಯ ಬಗ್ಗೆಗೂ ನಾವು ಯೋಚಿಸಬೇಕಾಗಿಲ್ಲ ಯಾಕೆಂದರೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವುದು ಮೋದಿಯವರು ನೀಡಿದ ಧ್ಯೇಯವಾಕ್ಯವಾಗಿದೆ. ಮೋದಿಯವರು ಮತ್ತೆ ಪ್ರಧಾನಿಯಾಗುವ ಮೂಲಕ ಎಲ್ಲಾ ಸಮುದಾಯದವರನ್ನೂ ಒಂದಾಗಿ ಕರೆದುಕೊಂಡು ಹೋಗುವ ಕ್ಷಮತೆ‌ ಮೋದಿಯವರಲ್ಲಿದೆ ಎಂದು ಹೇಳಿದ್ದಾರೆ.

You might also like
Leave A Reply

Your email address will not be published.