ಯಾರಾಗ್ತಾರೆ ಉತ್ತರ ಕನ್ನಡದ ಅಭ್ಯರ್ಥಿ – ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ

ಲೋಕಸಭೆ ಚುನಾವಣೆ ಕಾವು ಎಲ್ಲೆಡೆ ಪಸರಿಸಿದೆ. ಬಿಜೆಪಿ ನಮ್ಮ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಹಲವು ಗೊಂದಲಗಳ ನಡುವೆ ನಿರಾಸೆ, ಖುಷಿ ಹೀಗೆ ಎಲ್ಲಾ ಭಾವನೆಗಳು ಮೂಡಿದೆ. ಆದರೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವುದು ಮಾತ್ರ ಇನ್ನೂ ಪ್ರಕಟವಾಗದೆ ಕುತೂಹಲ ಹೆಚ್ಚಿಸಿದೆ. ಹಾಲಿ ಸಂಸದ ಮತ್ತೊಮ್ಮೆ ಟಿಕೆಟ್ ಗಿಟ್ಟಿಸುತ್ತಾರೆಯೇ? ಅಥವಾ ಹೊಸ ಮುಖದ ಪ್ರವೇಶವಾಗುತ್ತದೆಯೇ? ಈ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುವುದು ಯಾವಾಗ? ಎಂಬ ಪ್ರಶ್ನೆಗಳು ಆ ಜಿಲ್ಲೆಯ ರಾಜಕೀಯ ಆಸಕ್ತರಲ್ಲಿ ಮನೆ ಮಾಡಿದೆ.

ಕಳೆದ ಮೂರು ತಿಂಗಳ ಹಿಂದಿನವರೆಗೂ ಹಾಲಿ ಸಂಸದ ಅನಂತ ಕುಮಾರ ಹೆಗಡೆ ಮತ್ತೊಮ್ಮೆ ಚುನಾವಣೆ ಕಣಕ್ಕೆ ಇಳಿಯುವುದಿಲ್ಲ ಎಂಬುದಾಗಿ ಅವರು ನೀಡಿದ್ದ ಹೇಳಿಕೆ, ನಂತರ ಅವರ ಅನಾರೋಗ್ಯ ಮತ್ತು ಮೂರ್ನಾಲ್ಕು ವರ್ಷ ಕಾಲ ಜನಸಂಪರ್ಕದಿಂದ ದೂರವಿದ್ದುದು ಎಲ್ಲವೂ ಇದಕ್ಕೆ ಕಾರಣವಾಯಿತು. ಆದರೆ, ಇತ್ತೀಚೆಗೆ ಸಂಸದ ಅನಂತ ಕುಮಾರ ಹೆಗಡೆ ಮೈ ಕೊಡವಿ ಮೇಲೆದ್ದವರಂತೆ ಹೇಳಿಕೆ ನೀಡಲು ತೊಡಗಿದ್ದು, ಪ್ರತಿದಿನ ಕ್ಷೇತ್ರದ ನಾನಾ ಕಡೆಗಳಲ್ಲಿ ಸಂಚಾರ ಪ್ರಾರಂಭಿಸುತ್ತಿರುವುದು, ಪಕ್ಷದ ಟಿಕೆಟ್’ಗೆ ಪ್ರಯತ್ನಿಸುತ್ತಿದ್ದ ಮತ್ತಷ್ಟು ಆಕಾಂಕ್ಷಿಗಳಲ್ಲಿ ಗೊಂದಲ ಮೂಡಿಸಿದೆ.

ಪಕ್ಷದ ಹಾಲಿ ಸಂಸದ ಕ್ರಿಯಾಶೀಲವಾಗಿಲ್ಲದ ಕಾರಣ ಸಹಜವಾಗಿಯೇ ಇನ್ನಷ್ಟು ಮಂದಿ ಆಕಾಂಕ್ಷಿಗಳು ಚುರುಕಾಗುವಂತಹ ವಾತಾವರಣ ಸೃಷ್ಟಿಯಾಯಿತು. ನಾಲ್ಕೈದು ಮಂದಿ ಈ ಬಗ್ಗೆ ಚಟುವಟಿಕೆ ಪ್ರಾರಂಭಿಸಿದರು. ಕೆಲವರು ಸ್ಥಳೀಯವಾಗಿ ಸಂಚಾರ ಮತ್ತು ಇನ್ನೂ ಕೆಲವರು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸುತ್ತಿದ್ದರು. ಅಲ್ಲಿಯವರೆಗೆ ಎಲ್ಲರೂ ಸಹಜ ಮಾರ್ಗದಲ್ಲಿ ಮುನ್ನಡೆಯುತ್ತಿದ್ದರು.

Who is Uttara Kannada Candidate - Here is the list of aspirants

ಇದೀಗ ಸಂಸದ ಅನಂತ ಕುಮಾರ ಹೆಗಡೆ ನಡವಳಿಕೆ ನೋಡಿದ ಇತರೆ ರಾಜಕಾರಣಿಗಳು, “ಅನಂತ ಕುಮಾರ ಹೆಗಡೆಯೇನೋ ಪಕ್ಷದ ಹೈಕಮಾಂಡ್‌ ಯಾರನ್ನೇ ಘೋಷಣೆ ಮಾಡಿದರೂ ಗೆಲ್ಲಿಸೋಣ ಎಂದು ಭಾಷಣದಲ್ಲಿ ಹೇಳುತ್ತಿದ್ದರೂ ನಂತರ ವಾಸ್ತವದಲ್ಲಿ ಹಾಗಿರುವುದಿಲ್ಲ” ಎಂಬುದಾಗಿ ಮಾತನಾಡಿಕೊಳ್ಳುತ್ತಿರುವುದು ಕೇಳಿಬರುತ್ತಿದೆ.

ಈ ಗೊಂದಲ ಈಗ ಉಲ್ಬಣಗೊಂಡಿದ್ದು ಅಭ್ಯರ್ಥಿ ಘೋಷಣೆ ವಿಷಯವನ್ನು ಕಗ್ಗಂಟಾಗಿಸಿದೆ. ಯಾರಿಗೆ ಟಿಕೆಟ್‌ ನೀಡುವುದು ಮತ್ತು ಯಾರ್ಯಾರನ್ನು ಸಮಾಧಾನಪಡಿಸುವುದು ಎನ್ನುವುದು ಹೈಕಮಾಂಡ್’ಗೆ ಸವಾಲಾಗಿ ಪರಿಣಮಿಸಿದೆ. ಈ ಕಾರಣದಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆ ಮತ್ತಷ್ಟು ವಿಳಂಬ ವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದ ಜಿಲ್ಲಾ ಮುಖಂಡರಲ್ಲಿ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿಯೂ ಗೊಂದಲದ ಚರ್ಚೆ ನಡೆಯುತ್ತಿರುವುದು ಕಂಡುಬರುತ್ತಿದೆ. ಯಾರಲ್ಲಿಯೂ ಈ ಬಗ್ಗೆ ಖಚಿತ ಅಭಿಪ್ರಾಯ ಕೇಳಿ ಬರುತ್ತಿಲ್ಲ. ಕಳೆದ ನಾಲ್ಕೈದು ಅವಧಿಗಳಲ್ಲಿ ಇಲ್ಲಿಯ ಅಭ್ಯರ್ಥಿಯ ಘೋಷಣೆ ಬಗ್ಗೆ ಬಿಜೆಪಿ ಪಾಳಯದಲ್ಲಿ ಇಷ್ಟು ಗೊಂದಲವಿರಲಿಲ್ಲ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿರುವ ಆಕಾಂಕ್ಷಿಗಳು ಯಾರ್ಯಾರು?

1. ಹಾಲಿ ಸಂಸದ ಅನಂತ ಕುಮಾರ ಹೆಗಡೆ
2. ವಿಧಾನಸಭೆ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ
3. ಡಾ.ಜಿ ಜಿ.ಹೆಗಡೆ ಕುಮಟ
4. ಅನಂತ ಮೂರ್ತಿ ಹೆಗಡೆ
5. ಹರಿಪ್ರಕಾಶ ಕೋಣೆಮನೆ
6. ವಾಗ್ಮಿ ಚಕ್ರವರ್ತಿ ಸೂಲಿಬೆಲೆ
7. ವಿಶ್ವ ಹಿಂದೂ ಪರಿಷತ್‌ ಮುಖಂಡ ಗೋಪಾಲ ನಾಗರಕಟ್ಟೆ ಇತ್ಯಾದಿ..

You might also like
Leave A Reply

Your email address will not be published.