ಕಲಬುರ್ಗಿಯಿಂದಲೇ ಲೋಕಸಮರಕ್ಕೆ ಮುನ್ನುಡಿ – ಮೋದಿ ಕಾರ್ಯಕ್ರಮದ ಪೂರ್ಣ ವಿವರ ಇಲ್ಲಿದೆ

ಲೋಕಸಭೆ ಕುರುಕ್ಷೇತ್ರಕ್ಕೆ ವೇದಿಕೆ ಸಿದ್ಧವಾಗಿದೆ. ನೀತಿ ಸಂಹಿತೆ ಜಾರಿಗೆ ಕೆಲವೇ ಕ್ಷಣಗಳ ಮುನ್ನ ಎಐಸಿಸಿ ಅಧ್ಯಕ್ಷ ಖರ್ಗೆ ತವರಾದ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಅಬ್ಬರದ ಪ್ರಚಾರಕ್ಕೆ ಚಾಲನೆ ನೀಡಲಿದ್ದು, ಅವರ ಭಾಷಣದ ಮೇಲೆ ದೇಶದ 140 ಕೋಟಿ ಜನರ ಕಣ್ಣು ಬಿದ್ದಿದೆ. ಇಂದು ನಡೆಯುವ ಕಾರ್ಯಕ್ರಮದ ಪಟ್ಟಿ ಹೇಗಿದೆ?

– ಮಧ್ಯಾಹ್ನ 1 ಗಂಟೆಗೆ ಸೇನಾ ಹೆಲಿಕಾಪ್ಟರ್ ಮೂಲಕ ಡಿಎಆರ್ ಹೆಲಿಪ್ಯಾಡ್ಗೆ ಮೋದಿ ಆಗಮಿಸಲಿದ್ದಾರೆ. ಡಿಎಆರ್ ಮೈದಾನದಿಂದ ಎನ್.ವಿ ಮೈದಾನದವರೆಗೆ ಒಂದೂವರೆ ಕಿಲೋ ಮೀಟರ್ ಅಂದರೆ 13 ರಿಂದ 15 ನಿಮಿಷ ರೋಡ್ ಶೋ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Preparation for Lok Samara from Kalaburgi - Here is the full details of Modi's programme

– ಮಧ್ಯಾಹ್ನ 2 ಗಂಟೆಗೆ ಶುರುವಾಗುವ ಈ ಕಾರ್ಯಕ್ರಮದಲ್ಲಿ ಅಂದಾಜು 2 ಲಕ್ಷ ಜನ ಸೇರಲಿದ್ದಾರೆ. ಇದಕ್ಕಾಗಿ ನಗರದ ಎನ್.ವಿ ಮೈದಾನದಲ್ಲಿ ಭರದ ಸಿದ್ಧತೆ ಸಹ ಮಾಡಲಾಗಿದೆ. ಮಿನಿ ರೋಡ್ ಶೋ ಬಳಿಕ ನೇರ ಎನ್.ವಿ ಮೈದಾನಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

– ಮಧ್ಯಾಹ್ನ 3 ಗಂಟೆಗೆ ಲೋಕಸಮರಕ್ಕೆ ದಿನಾಂಕ ಘೋಷಣೆಯಾಗಲಿದೆ. 140 ಕೋಟಿ ಜನರನ್ನ ಉದ್ದೇಶಿಸಿ ಪ್ರಧಾನಿಯಾಗಿ ಮೋದಿ ತಮ್ಮ 2ನೇ ಅವಧಿಯ ಕೊನೆ ಭಾಷಣ ಮಾಡಲಿದ್ದಾರೆ. ಕಲಬುರಗಿಯಿಂದಲೇ ಮೋದಿ 3.0 ಕಾರ್ಯಕ್ರಮಕ್ಕೆ ಕರೆ ನೀಡಲಿದ್ದಾರೆ. ಹೀಗಾಗಿ ಮೋದಿ ಭಾಷಣದತ್ತ ಇಡೀ ರಾಷ್ಟ್ರದ ಜನರ ಚಿತ್ತ ನೆಟ್ಟಿದೆ.

You might also like
Leave A Reply

Your email address will not be published.