ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ – ಏನೆಲ್ಲ ಬದಲಾಗಲಿದೆ ಗೊತ್ತೇ

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮತದಾನ ನಡೆದರೆ, ಮೂರನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಅಲರ್ಟ್ ಆಗಿದ್ದು, ಮಾದರಿ ನೀತಿಸಂಹಿತೆ ಜಾರಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರ, ತೆಗೆಯಲು ತಿಳಿಸಿದ್ದು, ಮಾದರಿ ನೀತಿ ಸಂಹಿತೆ ಉಲ್ಲಘನೆಗಳ ಮೇಲೆ ನಿಗಾವಹಿಸಲು ಸೂಚಿಸಿದ್ದಾರೆ. ಸರ್ಕಾರಿ ಕಛೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರ ಹಾಗೂ ಜಾಹೀರಾತುಗಳನ್ನ ತೆಗೆಯಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಯಾವುದೇ ಫ್ಲೆಕ್ಸ್, ಪೋಸ್ಟರ್, ಬ್ಯಾನರ್, ಬಿತ್ತಿಪತ್ರಗಳು, ಗೋಡೆ ಬರಹಗಳು ಇರುವಂತಿಲ್ಲ. ಕುಡಿಯುವ ನೀರಿನ ಘಟಕ, ಉದ್ಯಾನವನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಇರುವಂತಿಲ್ಲ.

24 ಗಂಟೆಗಳ ಒಳಗೆ ಸರ್ಕಾರದ ವೆಬ್ ಸೈಟ್ಗಳಲ್ಲಿ ರಾಜಕೀಯ ಪ್ರತಿನಿಧಿಗಳ ಭಾವಚಿತ್ರ ತೆಗೆಯಲು, RO, ARO ಕಚೇರಿಗಳಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆಗೆ, ಎಫ್ಎಸ್ಟಿ, ಎಸ್ಎಸ್ಟಿ ಸೇರಿದಂತೆ ಇನ್ನಿತರೆ ತಂಡಗಳನ್ನ ಸಕ್ರಿಯಗೊಳಿಸುವಂತೆ ಅಧಿಕಾರಿಗಳ ಆಂತರಿಕ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ರಂದು ಮತದಾನ

ರಾಜ್ಯದಲ್ಲಿ 2 ಹಂತದಲ್ಲಿ ಅಂದರೆ ಏಪ್ರಿಲ್ 26ರಂದು ಹಾಗೂ ಮೇ 7ರಂದು ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

Model Code of Conduct implemented from today - do you know what will change?

ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?

1. ಚಿತ್ರದುರ್ಗ
2. ಉಡುಪಿ-ಚಿಕ್ಕಮಗಳೂರು
3. ದಕ್ಷಿಣ ಕನ್ನಡ
4. ಹಾಸನ
5. ತುಮಕೂರು
6. ಚಿಕ್ಕಬಳ್ಳಾಪುರ
7. ಕೋಲಾರ
8. ಮಂಡ್ಯ
9. ಮೈಸೂರು-ಕೊಡಗು
10. ಚಾಮರಾಜನಗರ
11. ಬೆಂಗಳೂರು ಗ್ರಾಮಾಂತರ
12. ಬೆಂಗಳೂರು ದಕ್ಷಿಣ
13. ಬೆಂಗಳೂರು ಉತ್ತರ
14. ಬೆಂಗಳೂರು ಕೇಂದ್ರ

ಮೇ 7ರಂದು ಎಲ್ಲೆಲ್ಲಿ ಮತದಾನ?

1. ಬೆಳಗಾವಿ
2. ಬಳ್ಳಾರಿ
3. ಚಿಕ್ಕೋಡಿ
4. ಹಾವೇರಿ-ಗದಗ
5. ಕಲಬುರಗಿ
6. ಬೀದರ್
7. ಹುಬ್ಬಳಿ – ಧಾರವಾಡ
8. ಕೊಪ್ಪಳ
9. ರಾಯಚೂರು
10. ಉತ್ತರ ಕನ್ನಡ
11. ದಾವಣಗೆರೆ
12. ಶಿವಮೊಗ್ಗ
13. ಬಾಗಲಕೋಟೆ
14. ವಿಜಯಪುರ

You might also like
Leave A Reply

Your email address will not be published.