ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ಇಲ್ಲ – ವಿದೇಶಾಂಗ ಸಚಿವ ಎಸ್. ಜೈಶಂಕರ್

ಪುಣೆಯಲ್ಲಿ ನಡೆದ ‘Why Bharat Matters : Opportunity For Youth and Participation In Global Scenario’ ಕಾರ್ಯಕ್ರಮದಲ್ಲಿ ಯುವಜನತೆಯೊಂದಿಗೆ ಸಂವಾದ ನಡೆಸಿದ ವಿದೇಶಾಂಗ ಸಚಿವ ಎಸ್.ಜೈ.‌ಶಂಕರ್, 2014 ರಿಂದ ದೇಶದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗಿದ್ದು ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದರು. ಗಡಿಯಾಚೆಯಿಂದ ನಡೆಯುವ ಭಯೋತ್ಪಾದನಾ ಕೃತ್ಯದ ವಿರುದ್ಧ ಪ್ರತ್ಯುತ್ತರ ನೀಡುವ ಭಾರತದ ಬದ್ಧತೆ ಮತ್ತು ವಿಧಾನವನ್ನು ‌ಪುನರುಚ್ಛಾರ ಮಾಡಿದ ಅವರು, ಭಯೋತ್ಪಾದಕರಿಗೆ ಉತ್ತರ ನೀಡಲು ದೇಶದಲ್ಲಿ ಯಾವುದೇ ‌ನಿಯಮಾವಳಿಗಳಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಇನ್ನು 26/11 ರ ಮುಂಬೈ ದಾಳಿಯನ್ನು ಉದಾಹರಣೆ ನೀಡಿ ಮಾತನಾಡಿದ ಜೈ ಶಂಕರ್ ಅವರು, ಅಕಸ್ಮಾತ್ ಈಗೇನಾದರೂ ಇಂತಹ ದಾಳಿ ನಡೆದರೆ ಒಂದು ವೇಳೆ ದೇಶ ಅದಕ್ಕೆ ಉತ್ತರಿಸಲಿಲ್ಲ ಎಂದಾದರೆ ಮುಂದಿನ ದಾಳಿಯನ್ನು ಹೇಗೆ ತಡೆಯಲಾದೀತು? ಎಂದರು‌. ಅಲ್ಲದೇ, ಉಗ್ರರಿಗೆ ಉತ್ತರಿಸುವಾಗ ಯಾವುದೇ ನಿಯಮಗಳನ್ನು ಹೊಂದಲು ಸಾಧ್ಯವಿಲ್ಲ. ಯಾಕೆಂದರೆ, ಅವರು ದಾಳಿಯನ್ನು ಯಾವ ನಿಯಮಗಳ ಆಧಾರದ ಮೇಲೂ ಮಾಡವುದಿಲ್ಲ ಎಂದು‌ ಖಡಕ್ ಆಗಿ ಉತ್ತರಿಸಿದರು. ಇನ್ನು ಮುಂದುವರಿದು ಮುಂಬೈ ದಾಳಿಯ ಕುರಿತು ಮಾತನಾಡಿದ ಅವರು, ಆವಾಗಿನ‌ ಕಾಂಗ್ರೆಸ್ ಸರ್ಕಾರ ಈ ದಾಳಿಯ ಕುರಿತು ಹಲವು ಸಭೆಗಳನ್ನು ನಡೆಸಿ, ಪಾಕಿಸ್ತಾನದ ಮೇಲೆ ದಾಳಿ‌ ಮಾಡುವ ವೆಚ್ಚವು ದಾಳಿ ಮಾಡದ ವೆಚ್ಚಕ್ಕಿಂತ ಜಾಸ್ತಿಯಾಗಿದೆ ಎಂಬ ತೀರ್ಮಾನಕ್ಕೆ ಬಂದಿತು. ಉಗ್ರರು ಯಾವಾಗಲೂ ನಾವು ಗಡಿರೇಖೆಯ ಇನ್ನೊಂದು ಭಾಗದಲ್ಲಿ ಇದ್ದೇವೆ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಯೋಚಿಸಬಾರದು, ಹೇಳಿದಂತೆ ಉಗ್ರರಿಗೆ ಯಾವುದೇ ನಿಯಮಗಳಿಲ್ಲ ಉಗ್ರರಿಗೆ ಉತ್ತರಿಸುವಾಗಲೂ ಯಾವುದೇ ನಿಯಮಗಳಿರಬಾರದು ಎಂದಿದ್ದಾರೆ.

S Jaishankar

ಭಾರತದ ನೆರೆಯ ರಾಷ್ಟ್ರಗಳಲ್ಲಿ ಯಾವ ದೇಶದ ಜೊತೆ ಸಂಬಂಧ ಉಳಿಸಿಕೊಳ್ಳಲು ಕಷ್ಟವಾಗಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ ಜೈ ಶಂಕರ್, ಪಾಕಿಸ್ತಾನ ಎಂದರು. ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳನ್ನು ಗಮನಿಸಿದರೆ, 1947 ರಲ್ಲಿ ಪಾಕಿಸ್ತಾನವು ಬುಡಕಟ್ಟು ಆಕ್ರಮಣಕಾರರನ್ನು ಕಾಶ್ಮೀರಕ್ಕೆ ಕಳುಹಿಸಿತು ಆಗ ಸೇನೆ ಅವರನ್ನು ಎದುರಿಸಿತು ಅಂದಿನ ಸರ್ಕಾರ ಅವರನ್ನು‌ ಭಯೋತ್ಪಾದಕರಲ್ಲ ನುಸುಳುಕೋರರು ಎಂದು ಕರೆಯಿತು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದದ್ದು 2014 ರಲ್ಲಿ. ಆದರೆ, ಈ ಸಮಸ್ಯೆ 2014 ರಲ್ಲಿ ಆರಂಭವಾದದ್ದಲ್ಲ, 26/11ರ ಮುಂಬೈದಾಳಿಯ ನಂತರವೂ ಅಲ್ಲ, ಇದು 1947 ರಲ್ಲೇ ಪ್ರಾರಂಭವಾಯಿತು. ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಜನ ಬಂದು ದಾಳಿ ಮಾಡುತ್ತಿದ್ದರು. ಪಾಕಿಸ್ತಾನ ಸೇನೆಯು ಆಕ್ರಮಣಕಾರರ ನೆರವಿಗೆ ನಿಂತಿತ್ತು ಎಂದರು.

1965 ರ ವೇಳೆಯಲ್ಲಿ ಪಾಕಿಸ್ತಾನದ ಸೇನೆಯು ದಾಳಿ‌ಮಾಡುವ ಮೊದಲು ಒಳ ನುಸುಳುಕೋರರನ್ನು ಕಳುಹಿಸಿತು, ನಮ್ಮ ಮನಸ್ಥಿತಿಯಲ್ಲಿ ನಾವು ತುಂಬಾ ಸ್ಪಷ್ಟವಾಗಿ ಇರಬೇಕು ಯಾವುದೇ ಪರಿಸ್ಥಿತಿಯಲ್ಲೂ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ ಎಂದರು.

You might also like
Leave A Reply

Your email address will not be published.