ಬಿಜೆಪಿಯ ನೂತನ ಜಿಲ್ಲಾ ಸಾರಥಿಗಳ ನೇಮಕ – ಆಪ್ತರಿಗೆ ಮಣೆ ಹಾಕಿದ್ರಾ ವಿಜಯೇಂದ್ರ?

ರಾಜ್ಯ ಬಿಜೆಪಿಯ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರು ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳ ನೂತನ ಜಿಲ್ಲಾಧ್ಯಕ್ಷರನ್ನು ಹಾಗೂ ಕೆಲ ಪ್ರಕೋಷ್ಠಗಳ ಸಂಚಾಲಕರನ್ನು ನೇಮಕ ಮಾಡಿ ಭಾನುವಾರ ಆದೇಶ ಹೊರಡಿಸಿದ್ದಾರೆ. 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ 30 ಜಿಲ್ಲೆಗಳ ಅಧ್ಯಕ್ಷ ಸ್ಥಾನವನ್ನು ಹೊಸಬರಿಗೆ ನೀಡಿದರೆ, 9 ಜಿಲ್ಲಾಧ್ಯಕ್ಷರುಗಳನ್ನು ಮುಂದುವರೆಸಲಾಗಿದೆ. ಈ ನೂತನ ನೇಮಕಾತಿಯಲ್ಲಿ ಬಿವೈ ವಿಜಯೇಂದ್ರ ಅವರು ತಮ್ಮ ಆಪ್ತರಿಗೆ ಮಣೆ ಹಾಕಿರುವುದು ಕಂಡುಬರುತ್ತಿದೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯ ದೃಷ್ಠಿಯಿಂದ ಎಲ್ಲಾ ಸಂಘಟನಾತ್ಮಕ ಹುದ್ದೆಗಳ ನೇಮಕಾತಿಯನ್ನು ಬಿಜೆಪಿ ಆರಂಭಿಸಿದೆ. ಬಹುತೇಕ ಸಂಘಟನಾತ್ಮಕ ಹುದ್ದೆಗಳ ನೇಮಕಾತಿ ಪೂರ್ಣಗೊಳಿಸಿದ್ದು, ಲೋಕಸಭಾ ಚುನಾವಣೆಯನ್ನು ಹುಮ್ಮಸ್ಸಿನಿಂದ ಎದುರಿಸಲು ಕೇಸರಿ ಬಣ ಸಿದ್ಧವಾಗಿ ನಿಂತಿದೆ.

ಈ ಬಗ್ಗೆ ಭಾನುವಾರ ಎಕ್ಸ್‌ ವೇದಿಕೆಯ ಮೂಲಕ ಟ್ವೀಟ್‌ ಮಾಡಿ ನೂತನ ಜಿಲ್ಲಾಧ್ಯಕ್ಷರುಗಳ ಪಟ್ಟಿ ಬಿಡುಗಡೆ ಮಾಡಿದ್ದ ವಿಜಯೇಂದ್ರ ಅವರು, ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಹಾಗೂ ವಿವಿಧ ಘಟಕಗಳಿಗೆ ನಿಯುಕ್ತಿಗೊಂಡಿರುವ ನೂತನ ಪದಾಧಿಕಾರಿಗಳಿಗೆ ಆತ್ಮೀಯ ಅಭಿನಂದನೆಗಳು. ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮುಂಬರುವ ಲೋಕಸಮರದಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಿ, ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ಶ್ರಮಿಸುತ್ತೀರೆಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

39 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಪಟ್ಟಿ ಹೀಗಿದೆ :

ಬೆಂಗಳೂರು ಕೇಂದ್ರ – ಸಪ್ತಗಿರಿ ಗೌಡ
ಬೆಂಗಳೂರು ಉತ್ತರ – ಎಸ್. ಹರೀಶ್
ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ
ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ
ಮೈಸೂರು ನಗರ – ಬಿ.ಎಲ್. ನಾಗೇಂದ್ರ
ಮೈಸೂರು ಗ್ರಾಮಾಂತರ – ಎಲ್‌. ಆರ್. ಮಹದೇವ ಸ್ವಾಮಿ
ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್
ಮಂಡ್ಯ- ಇಂದ್ರೇಶ್ ಕುಮಾರ್
ಹಾಸನ- ಸಿದ್ದೇಶ್ ನಾಗೇಂದ್ರ
ಕೊಡಗು- ರವಿ ಕಾಳಪ್ಪ
ಉಡುಪಿ- ಕಿಶೋರ್ ಕುಂದಾಪುರ
ದಕ್ಷಿಣ ಕನ್ನಡ- ಸತೀಶ್ ಕುಂಪಲ
ಚಿಕ್ಕಮಗಳೂರು- ದೇವರಾಜ ಶೆಟ್ಟಿ
ಶಿವಮೊಗ್ಗ- ಟಿ.ಡಿ. ಮೇಘರಾಜ್
ಉತ್ತರ ಕನ್ನಡ- ಎನ್.ಎಸ್. ಹೆಗಡೆ
ಹಾವೇರಿ- ಅರುಣ್ ಕುಮಾರ್ ಪೂಜಾರ
ಹುಬ್ಬಳ್ಳಿ- ಧಾರವಾಡ- ತಿಪ್ಪಣ್ಣ ಮಜ್ಜಗಿ
ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ
ಗದಗ- ರಾಜು ಕುರಡಗಿ
ಬೆಳಗಾವಿ ನಗರ- ಗೀತಾ ಸುತಾರ್
ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್
ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್
ಬಾಗಲಕೋಟೆ- ಶಾಂತಗೌಡ ಪಾಟೀಲ್
ವಿಜಯಪುರ- ಆರ್.ಎಸ್. ಪಾಟೀಲ್
ದಾವಣಗೆರೆ- ರಾಜಶೇಖರ್
ಚಿತ್ರದುರ್ಗ- ಎ. ಮುರಳಿ
ತುಮಕೂರು – ಹೆಚ್.ಎಸ್. ರವಿಶಂಕರ (ಹೆಬ್ಬಾಕ)
ಮಧುಗಿರಿ- ಬಿ.ಸಿ. ಹನುಮಂತೇಗೌಡ
ರಾಮನಗರ- ಆನಂದಸ್ವಾಮಿ
ಚಿಕ್ಕಬಳ್ಳಾಪುರ-ರಾಮಲಿಂಗಪ್ಪ
ಕೋಲಾರ- ಡಾ. ಕೆ.ಎನ್. ವೇಣುಗೋಪಾಲ್
ಬೀದರ್- ಸೋಮನಾಥ‌ ಪಾಟೀಲ್
ಕಲಬುರಗಿ ನಗರ- ಚಂದ್ರಕಾಂತ ಪಾಟೀಲ
ಕಲಬುರಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ
ಯಾದಗಿರಿ- ಅಮೀನ್ ರೆಡ್ಡಿ
ರಾಯಚೂರು- ಡಾ. ಶಿವರಾಜ ಪಾಟೀಲ್
ಕೊಪ್ಪಳ- ನವೀನ್ ಗುಳಗಣ್ಣನವರ್
ಬಳ್ಳಾರಿ- ಅನಿಲ್ ಕುಮಾರ್ ಮೋಕಾ
ವಿಜಯನಗರ- ಚನ್ನಬಸವನಗೌಡ ಪಾಟೀಲ್

ಪ್ರಕೋಷ್ಠಗಳ ನೇಮಕಾತಿ :

ಬಿಜೆಪಿಯ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್.ದತ್ತಾತ್ರಿಯವರನ್ನು ನೇಮಕ ಮಾಡಲಾಗಿದೆ. ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್‌ ಅಂಬೇಕಲ್ಲು ಅವರನ್ನು ಮುಂದುವರೆಸಲಾಗಿದ್ದು, ಸಹ ಕಾರ್ಯದರ್ಶಿಯನ್ನಾಗಿ ಬಿ.ಹೆಚ್.‌ ವಿಶ್ವನಾಥ ಅವರನ್ನು ನೇಮಕ ಮಾಡಲಾಗಿದೆ.

ಶಾಸಕರಿಗೆ ಒಲಿದ ಜಿಲ್ಲಾಧ್ಯಕ್ಷ ಪಟ್ಟ :

ಜಿಲ್ಲಾಧ್ಯಕ್ಷ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಗೆ ರಾಯಚೂರು ನಗರ ಶಾಸಕರಾಗಿರುವ ಡಾ.ಶಿವರಾಜ ಪಾಟೀಲ ಅವರನ್ನು ಹಾಗೂ ಬೆಂಗಳೂರು ದಕ್ಷಿಣ ಸಂಘಟನಾತ್ಮಕ ಜಿಲ್ಲೆಗೆ ಜಯನಗರದ ಶಾಸಕರಾಗಿರುವ ಸಿ.ಕೆ ರಾಮಮೂರ್ತಿಯವರನ್ನು ನೇಮಕ ಮಾಡಲಾಗಿದೆ.

You might also like
Leave A Reply

Your email address will not be published.