ಪ್ಲೇಟ್ ಬದಲಿಸಿದ ಎಐಸಿಸಿ ಅಧ್ಯಕ್ಷರು – ರಾಮಮಂದಿರದ ಬಗ್ಗೆ ಖರ್ಗೆ ಹೇಳಿದ್ದೇನು?

ದೇಶದಾದ್ಯಂತ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಕುರಿತು ಕಾತರ ಹೆಚ್ಚುತ್ತಿರುವಂತೆಯೇ, ನಾವು ರಾಮಮಂದಿರಕ್ಕೆ ಕಾಲಿಡೋದಿಲ್ಲ ಎಂದು ಹೇಳಿಕೆ ನೀಡಿ, ದೇಶದ ಅಸ್ಮಿತೆ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತಂದ ಕಾಂಗ್ರೆಸ್ ನಡೆ ಗೊತ್ತೇ ಇದೆ.

ಕೇವಲ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಅಲ್ಲದೇ, ಸ್ವಪಕ್ಷದಲ್ಲೇ ಈ ನಿರ್ಧಾರದ ಬಗ್ಗೆ ಅಪಸ್ವರ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಂತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಜಾಯಿಷಿ ಹೇಳಿಕೆಯೊಂದನ್ನು ನೀಡಿದ್ದಾರೆ‌.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ಸದಸ್ಯೆ ಸೋನಿಯಾ ಗಾಂಧಿ, ನಮ್ಮ ಪಕ್ಷ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ನಾವು ಹೋಗೋದಿಲ್ಲ. ಇದು ಕೇವಲ ಬಿಜೆಪಿಯ ಕಾರ್ಯಕ್ರಮ. ಪೂರ್ಣವಾಗದ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ನಾವು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿ ‍ದೊ‌ಡ್ಡ ವಿವಾದವನ್ನೇ ಎಬ್ಬಿಸಿದ್ದರು.

ಈ ನಿರ್ಧಾರದ ಕುರಿತು, ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ಎದ್ದಿದ್ದು, ಕೆಲವು ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರು ನಾವು ರಾಮಮಂದಿರದಲ್ಲಿ ಯಾಕೆ ಭಾಗಿಯಾಗಬಾರದು ಎಂದು ಹೇಳಿಕೆ ನೀಡಿ, ಪಕ್ಷದ ನಿರ್ಧಾರಕ್ಕೆ ಸೆಡ್ಡು ಹೊಡಿದಿರುವಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯಾರನ್ನೂ ನೋಯಿಸುವ ಉದ್ದೇಶ ನಮಗಿಲ್ಲ ಎಂದು ತಿಳಿಸಿದರು.

ನಂಬಿಕೆ ಇರುವವರು ರಾಮನ ದೇವಾಲಯಕ್ಕೆ ಹೋಗುತ್ತಾರೆ: ಖರ್ಗೆ

ನಂಬಿಕೆ ಇರುವವರು ರಾಮನ ದೇವಾಲಯಕ್ಕೆ ಇಂದೇ ಹೋಗುತ್ತಾರೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮ್ಮದಲ್ಲ. ಆದರೆ ಬಿಜೆಪಿ, ಆರ್‌.ಎಸ್‌.ಎಸ್ ಉದ್ದೇಶಿತ ಕಾರ್ಯಕ್ರಮವನ್ನು ತಿರಸ್ಕಾರ ಮಾಡುವುದು ಪಕ್ಷದ ಉದ್ದೇಶವಾಗಿದೆ. ಈಗಾಗಲೇ ತನ್ನ ನಿಲುವನ್ನು ಪಕ್ಷ ವಿವರಿಸಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಇದೆಲ್ಲವನ್ನ ಮಾಡುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದವರು ಅಯೋಧ್ಯೆಗೆ ಹೋಗುವುದಾದರೆ ಹೋಗಲಿ:

ಯಾರಾದರೂ ಅಯೋಧ್ಯೆಗೆ ಭೇಟಿ ನೀಡಲು ಬಯಸಿದಲ್ಲಿ, ಅವರು ಯಾವಾಗ ಬೇಕಾದರೂ ಹೋಗಬಹುದು. ಆದರೆ, ನಾವು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ತೆರಳುವುದಿಲ್ಲ ಎನ್ನುವುದನ್ನು ಬಿಜೆಪಿ ತಪ್ಪಾಗಿ ಅರ್ಥೈಸಿಕೊಂಡು ನಮ್ಮನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದೆ. ಇದು ತಪ್ಪು. ನಮಗೆ ಯಾವ ವ್ಯಕ್ತಿಯ ಅಥವಾ ಧರ್ಮದ ಭಾವನೆಗಳನ್ನು ಕದಡುವ ಉದ್ದೇಶ ಇಲ್ಲ’ ಎಂದು ಸಮಜಾಯಿಷಿಯ ಹೇಳಿಕೆ ನೀಡಿದ್ದಾರೆ.

You might also like
Leave A Reply

Your email address will not be published.