ಬಿಜೆಪಿ ಚುನಾವಣಾ ಪ್ರಣಾಳಿಕೆ : ಈಡೇರಿಸಿದ್ದೆಷ್ಟು? ಈಡೇರಿಸಲಾಗದ್ದು ಎಷ್ಟು? ಇಲ್ಲಿದೆ ಫುಲ್‌ ಡೀಟೇಲ್ಸ್

ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ವಿರೋಧದ ನಡುವೆಯೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ಮತ್ತೊಂದು ಭರವಸೆಯನ್ನು ಈಡೇರಿಸುವತ್ತ ಹೆಜ್ಜೆ ಇಟ್ಟಿದೆ. ಅದೂ ಕೂಡಾ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ! ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಂಸತ್ನಲ್ಲಿ ಪಾಸ್ ಆಗಿ ನಾಲ್ಕು ವರ್ಷ ಕಳೆದ ಬಳಿಕ ಇದೀಗ ಅದರ ಜಾರಿಗೆ ಅಧಿಸೂಚನೆ ಪ್ರಕಟವಾಗಿದೆ ಅಂದ್ರೆ ಸುಮ್ನೆನ? ಹಾಗಾದ್ರೆ ಪ್ರಣಾಳಿಕೆ ವೇಳೆ ನೀಡಿದ ಭರವಸೆ ಪೈಕಿ ಎಷ್ಟು ಭರವಸೆಗಳು ಈಡೇರಿವೆ ಮತ್ತು ಯಾವೆಲ್ಲಾ ಭರವಸೆಗಳು ಹಾಗೇ ಉಳಿದಿವೆ ಎಂಬುದನ್ನು ನೋಡೋಣ ಬನ್ನಿ..

ರಾಮ ಮಂದಿರ ಉದ್ಘಾಟನೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ, ಸಿಎಎ ಜಾರಿ, ಎನ್ಆರ್ಸಿ ಜಾರಿ, ತ್ರಿವಳಿ ತಲಾಖ್ ರದ್ದತಿ, ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಸಾಕಷ್ಟು ಭರವಸೆಗಳನ್ನ ಮೋದಿ ಸರ್ಕಾರ 2014ರಲ್ಲಿ ಆಡಳಿತಕ್ಕೆ ಬರುವ ಮುನ್ನವೇ ಹಲವು ಸಾರ್ವತ್ರಿಕ ಚುನಾವಣೆಗಳಲ್ಲಿ ನಿರಂತರವಾಗಿ ನೀಡುತ್ತಲೇ ಬಂದ ವಿಚಾರ ನಮಗೆಲ್ಲರಿಗೂ ತಿಳಿದೆ ಇದೆ. ಇವುಗಳ ಪೈಕಿ ಹಲವು ಭರವಸೆಗಳು ಈಡೇರಿದ್ದು, ಜನರಲ್ಲೂ ಸಖತ್ ಕುತೂಹಲ ಮೂಡಿಸಿದೆ.

BJP Manifesto Details

ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ ಈಡೇರಿದ್ದು ಎಷ್ಟು?

1. 5 ಶತಮಾನಗಳ ಬಳಿಕ ರಾಮ ಮಂದಿರ ಪುನರ್ ನಿರ್ಮಾಣ
2. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ
3. ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವಿಕೆ
4. ಸಿಎಎ ಕಾಯ್ದೆ ಜಾರಿ
5. ಎನ್’ಆರ್’ಸಿ ಜಾರಿ
6. ತ್ರಿವಳಿ ತಲಾಖ್ ರದ್ದತಿ
7. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜಿಎಸ್‌ಟಿ ಜಾರಿ
8. ಭಾರತದ ಆರ್ಥಿಕತೆ ವೃದ್ದಿ
9. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಈಶಾನ್ಯ ರಾಜ್ಯಗಳ ಗಡಿ ಭದ್ರತೆ ಮತ್ತಷ್ಟು ಬಲಿಷ್ಠ
10. ಉಗ್ರವಾದ ನಿಗ್ರಹ ಹಾಗೂ ರಾಷ್ಟ್ರೀಯ ಭದ್ರತೆ
11. ರಸ್ತೆ, ಸೇತುವೆ, ಪುಣ್ಯ ಕ್ಷೇತ್ರಗಳ ಅಭಿವೃದ್ದಿ, ಸ್ಮಾರ್ಟ್‌ ಸಿಟಿ
12. ವಂದೇ ಭಾರತ್ ರೈಲು
13. ಎಕ್ಸ್ ಪ್ರೆಸ್ ವೇ
14. ಸೈನಿಕರಿಗೆ ಒಆರ್’ಒಪಿ ಜಾರಿ
15. ಏಕರೂಪ ನಾಗರಿಕ ಸಂಹಿತೆ ಜಾರಿ (ಏಕರೂಪ ನಾಗರಿಕ ಸಂಹಿತೆ ಅನ್ನೋದು ಕೇಂದ್ರ ಹಾಗೂ ರಾಜ್ಯ ಎರಡಕ್ಕೂ ಸೇರಿದ್ದ ವಿಷಯವಾಗಿದ್ದು ಸಮವರ್ತಿ ಪಟ್ಟಿಯಲ್ಲಿ ಬರುವ ಕಾರಣ ಜಾರಿಗೆ ಹಲವು ಅಡೆತಡೆಗಳಿವೆ.)

ಈಡೇರದ ಭರವಸೆಗಳು ಯಾವುವು?

BJP Manifesto Details

1. ರೈತರ ಆದಾಯ ದ್ವಿಗುಣ ಮಾಡುವುದು: ರೈತರ ಆದಾಯ ದ್ವಿಗುಣ ಮಾಡುವಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನ ಕೈಗೊಂಡಿದೆ. ಆದರೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕನಿಷ್ಟ ಬೆಂಬಲ ಬೆಲೆಗಾಗಿ ಕೃಷಿಕರು ದಿಲ್ಲಿಯಲ್ಲಿ ಪ್ರತಿಭಟನೆ ಕುಳಿತುಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಇಮೇಜ್ಗೆ ಹಿನ್ನೆಡೆ ಆಗ್ತಿದೆ.
2. ಪ್ರಮುಖ ಸಂಗತಿ ಬೆಲೆ ಏರಿಕೆಗೆ ಕಡಿವಾಣ: ಪೆಟ್ರೋಲಿಯಂ ಸೇರಿದಂತೆ ಹಲವು ವಸ್ತುಗಳ ಆಮದಿನ ಮೇಲೆ ಅವಲಂಬನೆ ಹೊಂದಿರುವ ಭಾರತ, ಬೆಲೆ ಏರಿಕೆ ವಿಚಾರದಲ್ಲಿ ಅತ್ತ ದರಿ ಇತ್ತ ಪುಲಿ ಅನ್ನೋ ಸಂಕಷ್ಟದ ಸನ್ನಿವೇಶದಲ್ಲಿದೆ. ಅಚ್ಚೇ ದಿನ್ ಅನ್ನೋದು ಕನ್ನಡಿಯ ಗಂಟೇ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.

bjp manifesto details

ಈ ಹಂತದಲ್ಲಿ ದೇಶದ ಜನತೆಗೆ ಬೆಲೆ ಏರಿಕೆ ಬಿಸಿಯನ್ನು ಕೊಂಚ ಕಡಿಮೆ ಮಾಡಲು ಭಾರತ್ ಆಟಾ, ಭಾರತ್ ರೈಸ್ ಯೋಜನೆಗಳ ಮೂಲಕ ಅಲ್ಪ ಪ್ರಮಾಣದ ಕಡಿವಾಣ ಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ, ಕಪ್ಪು ಹಣ ವಾಪಸಾತಿ ಸೇರಿದಂತೆ ಹಲವು ಬಿಜೆಪಿ ಪ್ರಣಾಳಿಕೆ ಭರವಸೆಗಳು ಇನ್ನೂ ಹಾಗೆಯೇ ಉಳಿದಿವೆ.

ಅದೇನೇ ಇರಲಿ, ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಹಿಂದೆಂದಿಗಿಂತಲೂ ಪ್ರಗತಿಯನ್ನು ಸಾಧಿಸುತ್ತಿದೆ. ಕೇವಲ ಹತ್ತು ವರ್ಷಗಳಲ್ಲಿ ಹಿಂದೆಂದೂ ಕಾಣದಂತಹ ಗಮನಾರ್ಹ ಅಭಿವೃದ್ಧಿಯನ್ನು ಮೋದಿ ಸರ್ಕಾರ ಸಾಧಿಸಿರುವುದರ ಹಿಂದೆ, ಮೋದಿ ಸರ್ಕಾರದ ಸಂಪುಟದ ಸಚಿವರ ಅದ್ಭುತ ಕಾರ್ಯನಿರ್ವಹಣೆ ಹಾಗೂ ಕಾರ್ಯಕ್ಷಮತೆಯನ್ನು ಸ್ಮರಿಸದೇ ಉಳಿಯುವಂತಿಲ್ಲ.

bjp manifesto details

You might also like
Leave A Reply

Your email address will not be published.