ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ನಮ್ಮ ಅವಧಿಯಲ್ಲಾಗಿದೆ – ಮೋದಿ

ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಇವು ಒಟ್ಟಿಗೇ ಆಗುವುದು ಅಪರೂಪ, ಆದರೆ ಇದು ನಮ್ಮ ಅವಧಿಯಲ್ಲಾಗಿದೆ. ಅನೇಕ ತಲೆಮಾರುಗಳು ಕಂಡಿದ್ದ ಕನಸುಗಳು 10 ವರ್ಷಗಳ ಅವಧಿಯಲ್ಲಿ ಸಾಧಿಸಲಾಗಿದೆ. ಇನ್ನೂ 25 ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ನಡೆದ ಅಂತಿಮ ಅಧಿವೇಶನದ ಕೊನೆಯ ದಿನವಾದ ಶನಿವಾರ ಸಂಜೆ ಸುದೀರ್ಘವಾಗಿ ಮಾತನಾಡಿದ ಮೋದಿ, ಸಂವಿಧಾನದ 370ನೇ ಕಲಂ ರದ್ದತಿ, ತ್ರಿವಳಿ ತಲಾಖ್‌ ರದ್ದತಿಗಳು ನಮ್ಮ ಕಾಲದಲ್ಲಿ ಆದವು. ಶಾಸನಸಭೆಗಳಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಯಿತು. ಇಂಥ ಕ್ರಮಗಳನ್ನು ಅನೇಕ ತಲೆಮಾರುಗಳು ನಿರೀಕ್ಷಿಸಿದ್ದವು’ ಎಂದು ಹೇಳಿದರು.

ಹೊಸ ಸಂಸತ್ತಿನ ಕಟ್ಟಡ ಯಶಸ್ವಿ:

ನಮಗೆ ಹೊಸ ಕಟ್ಟಡ ಬೇಕು ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಈ ನಿಟ್ಟಿನಲ್ಲಿ ಎಂದೂ ನಿರ್ಧಾರ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಹೊಸ ಸಂಸತ್ ಕಟ್ಟಡ ನಿರ್ಮಿಸುವ ದಿಟ್ಟ ನಿರ್ಧಾರ ಕೈಗೊಂಡಿತು. ಅದಕ್ಕಾಗಿಯೇ ನಾವು ಇಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದೇವೆ. ಜನರು ಶತಮಾನಗಳಿಂದ ಕಾಯುತ್ತಿದ್ದ ಇಂತಹ ಕೆಲಸಗಳು ಪೂರ್ಣಗೊಂಡಿವೆ ಎಂದು ಬಣ್ಣಿಸಿದರು.

The building of the new parliament was a success

ಜಿ-20 ಅವಧಿಯಲ್ಲಿ ಪಾಲ್ಗೊಳ್ಳುವಿಕೆ:

ಈ ಅವಧಿಯಲ್ಲಿ ನಮಗೆ ಜಿ-20 ಶೃಂಗದ ಅಧ್ಯಕ್ಷತೆ ವಹಿಸುವ ಅವಕಾಶ ಒದಗಿಬಂತು. ಈ ವೇಳೆ ನಾವು ದೇಶದ ಪ್ರತಿ ರಾಜ್ಯಗಳನ್ನೂ ಸೇರ್ಪಡೆ ಮಾಡುವ ಮೂಲಕ ಇಡೀ ವಿಶ್ವದ ಮುಂದೆ ದೇಶದ ಸಾಮರ್ಥ್ಯ ಮತ್ತು ಅದರ ಹೆಗ್ಗುರುತನ್ನು ಪ್ರದರ್ಶನ ಮಾಡುವಲ್ಲಿ ಸಫಲವಾದೆವು’ ಎಂದು ಪ್ರಧಾನಿ ಹೇಳಿದರು.

Participation in the G-20

ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಪರ್ವ:

‘ನಮ್ಮ 10 ವರ್ಷಗಳು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಕಾಲವಾಗಿದೆ. ನಾವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯನ್ನು ಒಟ್ಟಿಗೇ ನೋಡುವುದು ಅಪರೂಪ. ಇದರಲ್ಲಿ 21ನೇ ಶತಮಾನದ ಭಾರತದ ಬಲವಾದ ಅಡಿಪಾಯವನ್ನು ಕಾಣಬಹುದು. ಹೀಗಾಗಿ ಇಂಥ ಸಾಧನೆ ಮಾಡಿದ್ದಕ್ಕಾಗಿ 17ನೇ ಲೋಕಸಭೆಗೆ ಜನರು ಆಶೀರ್ವಾದ ಮಾಡುವುದು ಖಂಡಿತ’ ಎಂದು ಪ್ರಧಾನಿ ಹರ್ಷಿಸಿದರು.

Reform, achievement and transformation are in our times - Modi

ಇತರೆ ಕಾರ್ಯಗಳ ಪ್ರಸ್ತಾಪ

ನಮ್ಮ ಅವಧಿಯಲ್ಲಿ ತೃತೀಯ ಲಿಂಗಿಗಳಿಗೂ ನ್ಯಾಯ ಒದಗಿಸಲಾಯಿತು. ಅವರಿಗೂ ಪದ್ಮ ಪ್ರಶಸ್ತಿಗಳನ್ನು ನೀಡಲಾಯಿತು.

ವಿದ್ಯಾರ್ಥಿಗಳ ಹಿತರಕ್ಷಣೆಗೆ ಪರೀಕ್ಷಾ ಅಕ್ರಮ ತಡೆ ಕಾಯ್ದೆ ಜಾರಿಗೊಳಿಸಲಾಯಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370ನೇ ವಿಧಿಯನ್ನು ರದ್ದುಗೊಳಿಸುವುದು ಅತ್ಯುನ್ನತ ಅಂಶವಾಗಿದೆ. ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ದೂರವಿದ್ದರು. ಅವರಿಗೆ ಇಂದು ನ್ಯಾಯ ಒದಗಿಸಿದ್ದೇವೆ. ಉಗ್ರರ ಹೆಡೆಮುರಿ ಕಟ್ಟಲು ಕಾನೂನು ಬಲಪಡಿಸಿದ್ದೇವೆ.

ಕೋವಿಡ್ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ ಮೋದಿ, ಕಳೆದ ಐದು ವರ್ಷಗಳಲ್ಲಿ, ‘ಶತಮಾನದ ಅತಿದೊಡ್ಡ ಬಿಕ್ಕಟ್ಟು’ ಸೃಷ್ಟಿಯಾಗಿತ್ತು. ಆದರೆ ಅದನ್ನು ಎಲ್ಲ ನಾವು ಮೆಟ್ಟಿ ನಿಂತಿದ್ದೇವೆ.

ರಾಮಮಂದಿರ ಗೊತ್ತುವಳಿಗೆ ಶ್ಲಾಘನೆ:

ಇನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣದ ಪರ ಗೊತ್ತುವಳಿಯು ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದನ್ನು ಶ್ಲಾಘಿಸಿದ ಮೋದಿ, ‘ಈ ಕ್ರಮವು ದೇಶದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಯುವಕರು ಹೆಮ್ಮೆ ಪಡುವಂತೆ ಮಾಡುತ್ತದೆ. ರಾಮ ಮಂದಿರ ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ನ ಪ್ರತೀಕ’ ಎಂದರು. ಇದೇ ವೇಳೆ ರಾಮಮಂದಿರ ನಿರ್ಮಾಣವನ್ನು ಬಲವಾಗಿ ವಿರೋಧಿಸಿದ ವಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ಮೋದಿ, ‘ಇಂಥದ್ದನ್ನೆಲ್ಲಾ ಮಾಡಲು ಎಲ್ಲರಿಗೂ ಧೈರ್ಯ ಇಲ್ಲ ಎಂಬುದನ್ನು ಒಪ್ಪಲೇ ಬೇಕು. ಆದರೆ ಕೆಲವು ವ್ಯಕ್ತಿಗಳು ಇಂಥದ್ದನ್ನೆಲ್ಲಾ ಎದುರಿಸುವ ಶಕ್ತಿ ಹೊಂದಿದ್ದರೆ ಇನ್ನು ಕೆಲವರು ಯುದ್ಧ ಭೂಮಿಯಿಂದ ಪರಾರಿಯಾಗುತ್ತಾರೆ’ ಎಂದರು.

Appreciation for the recognition of Ram Mandir

ಚುನಾವಣೆಯಿಂದ ದೇಶದ ವೈಭವ ಹೆಚ್ಚಳ:

ಈ ಬೇಸಿಗೆಯಲ್ಲಿ ನಡೆಯುವ ಲೋಕಸಭೆ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ‘ಕೆಲವರಿಗೆ ಚುನಾವಣೆ ನಡುಕ ಸೃಷ್ಟಿಸಿರಬಹುದು. ಆದರೆ ನನಗೆ ಸವಾಲುಗಳು ಎಂದರೆ ಬಲು ಇಷ್ಟ. ಚುನಾವಣೆಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಇದರಿಂದ ದೇಶದ ವೈಭವ ಹೆಚ್ಚುವ ಎಲ್ಲ ಸಾಧ್ಯತೆಗಳು ಇವೆ’ ಎಂದರು. ಈ ಮೂಲಕ ತಾವು ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

You might also like
Leave A Reply

Your email address will not be published.