ರಾಹುಲ್ ಗಾಂಧಿಯ ಇಂಡಿ ಒಕ್ಕೂಟಕ್ಕೆ ದಿನಕ್ಕೊಂದು ಹೊಡೆತ – ಕೊನೆಯಲ್ಲಿ ಉಳಿಯುವವರಾರು?

ಪಂಜಾಬ್, ಚಂಡೀಗಢದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಯಾವುದೇ ಮೈತ್ರಿ ಇಲ್ಲ. ಎಎಪಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಮಹಾ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದು, ಇದರಿಂದ ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

A blow a day to Rahul Gandhi's Indi coalition - who will survive in the end?

ಇಂಡಿಯಾ ಒಕ್ಕೂಟ ತೊರೆಯಲು ಆರ್‌.ಎಲ್‌.ಡಿ ನಾಯಕ ಜಯಂತ್ ಚೌಧರಿ ಸಿದ್ಧರಾಗಿದ್ದಾರೆ. ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರಿಗೆ ‘ಭಾರತ ರತ್ನ’ ಮರಣೋತ್ತರ ಪ್ರಶಸ್ತಿ ಘೋಷಿಸಿದ ಬಳಿಕ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದಾರೆ.

ಈ ಮೊದಲು ನಿತೀಶ್ ಕುಮಾರ್ ಮೈತ್ರಿ ತೊರೆದು ಎನ್‌.ಡಿ.ಎ ಒಕ್ಕೂಟ ಸೇರಿದ್ದರು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಮೈತ್ರಿಕೂಟದಿಂದ ಹೊರಬಂದಿದ್ದರು. ಇದೀಗ ಆಮ್‌ ಆದ್ಮಿ ಪಕ್ಷವು ಮಹಾಮೈತ್ರಿಯನ್ನು ತೊರೆದಿದ್ದು, ಆರ್‌.ಎಲ್‌.ಡಿ ನಾಯಕ ಜಯಂತ್ ಚೌಧರಿ ಸಿದ್ಧರಾಗಿದ್ದಾರೆ.

You might also like
Leave A Reply

Your email address will not be published.