25 ವರ್ಷಗಳ ಬಳಿಕ ಜೆಡಿಎಸ್‌ ಪಕ್ಷಕ್ಕೆ ಒಲಿದ ಕೇಂದ್ರ ಮಂತ್ರಿಸ್ಥಾನ – ಕುಮಾರಣ್ಣನಿಗೆ ಒಲಿಯುತ್ತಾ ಇಷ್ಟದ ಖಾತೆ?

ನರೇಂದ್ರ ಮೋದಿ ಅವರ 3ನೇ ಅವಧಿಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಸಂಸದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಂಪುಟ ಸಚಿವ ಸ್ಥಾನ ದೊರೆತಿದೆ. ಈ ಮೂಲಕ 25 ವರ್ಷಗಳ ಬಳಿಕ ಜೆಡಿಎಸ್ ಪಕ್ಷಕ್ಕೆ ಕೇಂದ್ರ ಸಚಿವ ಸ್ಥಾನ ಒಲಿದಂತಾಗಿದೆ.

ಈ ಹಿಂದೆ ಅಂದರೆ, 1996-97ರ ಅವಧಿಯಲ್ಲಿ ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ಗೃಹ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡು ಕಾರ್ಯನಿರ್ವಹಿಸಿದ್ದರು. ಇದೇ ಅವಧಿಯಲ್ಲಿಯೇ, ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕರಾದ ಎಸ್.ಆರ್. ಬೊಮ್ಮಾಯಿ, ಸಿ.ಎಂ. ಇಬ್ರಾಹಿಂ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು. ನಂತರದ ವರ್ಷಗಳಲ್ಲಿ ಹಲವು ಸಂಸದರು ಜೆಡಿಎಸ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರೂ ಯಾರಿಗೂ ಸಚಿವ ಸ್ಥಾನ ಲಭಿಸಿರಲಿಲ್ಲ.

ಈ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, 3 ಸ್ಥಾನಗಳ ಪೈಕಿ 2ರಲ್ಲಿ ಗೆದ್ದಿದೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಮೋದಿ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಶ್ರೀ ಮಲ್ಲೇಶ್‌ ಬಾಬು ಅವರು ಗೆಲುವು ಸಾಧಿಸಿದ್ದರೆ, ಹಾಸನದಲ್ಲಿ ಗೌಡರ ಕುಟುಂಬದ ಕುಡಿ ಪ್ರಜ್ವಲ್‌ ರೇವಣ್ಣ ಸೋಲನ್ನಪ್ಪಿದ್ದಾರೆ.

After 25 years, the JDS party won the central ministership

ಕುಮಾರಸ್ವಾಮಿಯವರು ಭಾನುವಾರದಂದು ಕೇಂದ್ರದ ಕ್ಯಾಬಿನೆಟ್‌ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಇಂದು ಸಂಜೆತ ವೇಳೆಗೆ ಖಾತೆ ಹಂಚಿಕೆಯಾಗುವ ಸಂಭವವಿದೆ. ಕುಮಾರಸ್ವಾಮಿಯವರು ಕೃಷಿ ಖಾತೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ಮೋದಿಯವರು ಯಾವ ಖಾತೆ ನೀಡುತ್ತಾರೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

You might also like
Leave A Reply

Your email address will not be published.