ದೇವರನಾಡಿಗೆ ಮೋದಿ ಭೇಟಿ-ಏನಿದರ ಉದ್ದೇಶ?

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ತಿಂಗಳಲ್ಲೇ ಕೇರಳ ರಾಜ್ಯಕ್ಕೆ ಎರಡನೇ ಭಾರೀ ಬರುತ್ತಿದ್ದು, ಈ ಭಾರೀ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಹಾಗಾದರೆ, ಪ್ರಧಾನಿ ಅವರು ಯಾವ ಉದ್ದೇಶದಿಂದ ಕೇರಳಕ್ಕೆ ಬರುತ್ತಿದ್ದಾರೆ? ಇದು ಲೋಕಸಭೆ ಉದ್ದೇಶಕ್ಕೊ? ಅಥವಾ ಯಾವುದಾದರು ಕಾರ್ಯಕ್ರಮದ ನಿಮಿತ್ತವೋ? ಕೇರಳ ರಾಜ್ಯದಲ್ಲಿ ಅವರು ಕೈಗೊಂಡಿರುವ ಪ್ರವಾಸದ ವಿವರಗಳೇನು? ಎಂಬೆಲ್ಲ ಮಾಹಿತಿಗಳಿಗಾಗಿ ಈ ವರದಿಯನ್ನು ಓದಿ.

ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಅಭಿನಂದಿಸಲು ಬಿಜೆಪಿಯ ರಾಜ್ಯ ಘಟಕವು ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಇದೇ 3 ರಂದು ಕೇರಳ ರಾಜ್ಯಕ್ಕೆ ಬಂದಿದ್ದರು. ಇದೀಗ ಜನವರಿ 16 ರಂದು ಕೇರಳಕ್ಕೆ ಬರಲಿದ್ದು ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.

narendra modi

  •  ಜನವರಿ 16 (ಮಂಗಳವಾರ) ರಂದು ಕೊಚ್ಚಿಗೆ ತಲುಪಲಿದ್ದು, ಸಂಜೆ 5 ಗಂಟೆಗೆ ರೋಡ್ ಶೋ ನಡೆಸಲಿದ್ದಾರೆ.
  • ಜನವರಿ 17 (ಬುಧವಾರ) ರಂದು ಗುರುವಾಯೂರಿಗೆ ತೆರಳಲಿದ್ದು, ಬೆಳಗ್ಗೆ 7 ಗಂಟೆಗೆ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇನ್ನೂ 10 ಗಂಟೆಗೆ ನಟ-ರಾಜಕಾರಣಿ ಸುರೇಶ್ ಗೋಪಿ ಅವರ ಮಗಳ ಮದುವೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಇದರೊಂದಿಗೆ ಲೋಕಸಭೆ ಚುನಾವಣೆಯ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಹಾಗೂ ಕೇರಳದಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಿತ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಬುಧವಾರ ಸಂಜೆ ವೇಳೆಗೆ ಪ್ರಧಾನಿ ವಾಪಸಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ಮತ್ತು ಕೇಂದ್ರ ನಾಯಕರ ಭೇಟಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತೇಜನ ನೀಡಲಿದೆ ಎಂದು ಬಿಜೆಪಿ ನಂಬಿದೆ. ಅಮಿತ್ ಶಾ ಕೂಡ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ.

ಜನವರಿ 27 ರೊಳಗೆ ತನ್ನ ಸ್ಟಾರ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ನಿರ್ಧರಿಸಿದ್ದು, ಪಕ್ಷವು ಹಲವು ಕಡೆ ಪಾದಯಾತ್ರೆಗಳನ್ನು ನಡೆಸಲಿದೆ. ತ್ರಿಶೂರ್‌ನಲ್ಲಿ ಸುರೇಶ್ ಗೋಪಿ, ಅಟ್ಟಿಂಗಲ್‌ನಲ್ಲಿ ವಿ ಮುರಳೀಧರನ್ ಮತ್ತು ಪಾಲಕ್ಕಾಡ್‌ಗೆ ಸಿ ಕೃಷ್ಣಕುಮಾರ್ ಹೆಸರುಗಳು ಈಗಾಗಲೇ ಭಾರೀ ಚರ್ಚೆಯಲ್ಲಿವೆ.

ಇನ್ನೂ ತಿರುವನಂತಪುರಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ಬಿಜೆಪಿಯ ರಾಜ್ಯ ಘಟಕವು ಹೈಕಮಾಂಡ್ ಅನ್ನು ಕೇಳಿದೆ ಎಂದು ವರದಿಯಾಗಿದೆ. ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅನಿಲ್ ಆಂಟೋನಿ ಮಧ್ಯ ಕೇರಳದ ಒಂದು ಕ್ಷೇತ್ರದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತುಸು ಹೆಚ್ಚಾಗಿದೆ.

Nirmala Sitharaman,

You might also like
Leave A Reply

Your email address will not be published.