Lokasabha Election 2024 : ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್’ನಲ್ಲಿ ಪ್ರಚಲಿತದಲ್ಲಿದ್ದ ಚಿಂತನೆಗಳನ್ನೇ ಪ್ರತಿಬಿಂಬಿಸುತ್ತದೆ. ಅದರಲ್ಲಿ ಎಡಪಂಥೀಯರ ಪ್ರಾಬಲ್ಯ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸಹರಾನ್’ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ಅದರಲ್ಲೂ I.N.D.I.A ಮೈತ್ರಿಕೂಟವೂ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳಿಸುವ ಗುರಿ ಹೊಂದಿದೆ. ಆದರೆ NDA ಮತ್ತು ಮೋದಿ ಸರ್ಕಾರವು ಮಿಷನ್’ನಲ್ಲಿದೆ. ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದನ್ನು ತಡೆಯಲು ಪ್ರತಿಪಕ್ಷಗಳು ಹೋರಾಡುತ್ತಿವೆ. ಸಮಾಜವಾದಿ ಪಕ್ಷವು ಪ್ರತಿ ಗಂಟೆಗೆ ಅಭ್ಯರ್ಥಿಗಳನ್ನು ಬದಲಾಯಿಸುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್’ನಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ತನ್ನ ಭದ್ರಕೋಟೆ ಎಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವ ಧೈರ್ಯ ಮಾಡುತ್ತಿಲ್ಲ. I.N.D.I.A ಒಕ್ಕೂಟವು ಅಸ್ಥಿರತೆ ಮತ್ತು ಅನಿಶ್ಚಿತತೆಗೆ ಸಮಾನಾರ್ಥಕವಾಗಿದೆ ಮತ್ತು ದೇಶದ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಕ್ತಿ ವಿರುದ್ಧ ಹೋರಾಡುವ ಬಗ್ಗೆ ವಿರೋಧ ಪಕ್ಷಗಳ ಒಕ್ಕೂಟ ಮಾತನಾಡುತ್ತಿರುವುದು ದೇಶದ ದೌರ್ಭಾಗ್ಯ. ಶಕ್ತಿಯನ್ನು ಆರಾಧಿಸುವುದು ನಮ್ಮ ನೈಸರ್ಗಿಕ ಆಧ್ಯಾತ್ಮಿಕ ಜೀವನದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 19 ರಂದು ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದ 8 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸಹರಾನ್’ಪುರ್, ಕೈರಾನಾ, ಮುಜಾಫರ್’ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್ ಮತ್ತು ಪಿಲಿಭಿತ್ ನಲ್ಲಿ ಚುನಾವಣೆ ನಡೆಯಲಿದೆ.

Lokasabha Election 2024: Congress party manifesto released

ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು

– ದೇಶಾದ್ಯಂತ ಜಾತಿ ಗಣತಿ, ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆ (ರೈಲು ಮತ್ತು ರಸ್ತೆ) ಯಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಮರುಜಾರಿ
– ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು/ಆಸ್ಪತ್ರೆ
– ಆಶಾ,ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಕೇಂದ್ರದ ಪಾಲು ದ್ವಿಗುಣ
– 2500ಕ್ಕಿಂತ ಜನಸಂಖ್ಯೆ ಜಾಸ್ತಿ ಇರುವ ಹಳ್ಳಿಗಳಲ್ಲಿ ಎರಡನೇ ಆಶಾ ಕಾರ್ಯಕರ್ತೆ ನೇಮಕ
– 12ನೇ ತರಗತಿಯವರೆಗೆ ಮಧ್ಯಾಹ್ನದ ಬಿಸಿಯೂಟ
– ರಾಜ್ಯಗಳ ಜೊತೆ ಚರ್ಚಿಸಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಬದಲಾವಣೆ
– ಪಬ್ಲಿಕ್ ಶಾಲೆಗಳಲ್ಲಿ ಸ್ಪೆಷಲ್ ಫೀಸ್ ಗಳು ರದ್ದು
– ಶಿಕ್ಷಕರನ್ನು ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಲ್ಲ
– ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳ ಸಂಖ್ಯೆ ರಾಜ್ಯಗಳ ಜೊತೆ ಚರ್ಚಿಸಿ ಹೆಚ್ಚಳ
– ಪ್ರತಿ ತಾಲೂಕಿನಲ್ಲಿ ಸರ್ಕಾರಿ ಕಮ್ಯುನಿಟಿ ಕಾಲೇಜು (ಹಾಸ್ಪಿಟಾಲಿಟಿ, ಪ್ರವಾಸೋದ್ಯಮ, ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಇತ್ಯಾದಿ ಕಲಿಕೆ)
– 9 ರಿಂದ 12ನೇ ತರಗತಿಯ ಮಕ್ಕಳಿಗೆ ಮೊಬೈಲ್ ಫೋನ್ (ಶಾಲೆ, ಕಾಲೇಜು ಕ್ಯಾಂಪಸ್ನಲ್ಲಿ ಉಚಿತ ಅನ್ ಲಿಮಿಟೆಡ್ ಇಂಟರ್ನೆಟ್)
– 21 ವರ್ಷದೊಳಗಿನ ಕ್ರೀಡಾ ಪ್ರತಿಭೆಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಕ್ರೀಡಾ ಸ್ಕಾಲರ್ ಶಿಪ್
– ಮಹಾಲಕ್ಷ್ಮಿ ಯೋಜನೆಯಡಿ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ.
– ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
– ಮಹಿಳೆಯರು ಇಲ್ಲದಿದ್ದರೆ ಕುಟುಂಬದ ಅತಿ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ
– ವಿವಿಧ ಹಂತಗಳಲ್ಲಿ ಮಹಾಲಕ್ಷ್ಮಿ ಯೋಜನೆ ಜಾರಿ. ಬಡತನ ನಿರ್ಮೂಲನೆಗೆ ಸಹಾಯವಾಗಿದೆಯಾ ಎಂದು ಕಾಲಕಾಲಕ್ಕೆ ಯೋಜನೆಯ ಅವಲೋಕನ
– ಮಹಿಳಾ ಮೀಸಲಾತಿ 2025ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲೇ ಜಾರಿ
– 2025ರಿಂದ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಜಾರಿ
– ಒಂದು ದೇಶ, ಒಂದು ಚುನಾವಣೆ ತಿರಸ್ಕಾರ
– ಇವಿಎಂ ಮೂಲಕವೇ ಮತದಾನ ನಡೆಯಬೇಕು. ಆದರೆ ಬ್ಯಾಲಟ್ ಪೇಪರ್ ನಲ್ಲಿ ಪಾರದರ್ಶಕತೆ. ಮತದಾರನೇ ತನ್ನ ಕೈಯಾರೆ ಇವಿಎಂ ಮತದಾನದ ಬಳಿಕ ಯಂತ್ರವು ನೀಡುವ ವೋಟರ್ ಸ್ಲಿಪ್ ವಿವಿಪ್ಯಾಟ್ ಯೂನಿಟ್ ಗೆ ಹಾಕಲು ವ್ಯವಸ್ಥೆ. ಎಲೆಕ್ಟ್ರಾನಿಕ್ ವೋಟ್ ಮತ್ತು ವಿವಿಪ್ಯಾಟ್ ಸ್ಲಿಪ್ ಟ್ಯಾಲಿ ಆಗಲೇಬೇಕು.
– ಶಾಸಕ ಅಥವಾ ಸಂಸದ ಪಕ್ಷ ಬದಲಾಯಿಸಿದರೆ (ಗೆದ್ದ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋದರೆ) ಆಟೋಮ್ಯಾಟಿಕ್ ಆಗಿ ಶಾಸಕ ಅಥವಾ ಸಂಸದನ ಸ್ಥಾನ ಅನರ್ಹತೆ. ಇದಕ್ಕಾಗಿ 10ನೇ ಶೆಡ್ಯೂಲ್ಗೆ ತಿದ್ದುಪಡಿ.

You might also like
Leave A Reply

Your email address will not be published.