ಕೋಟ ಶ್ರೀನಿವಾಸ್‌ ಪೂಜಾರಿ vs ಜಯಪ್ರಕಾಶ್‌ ಹೆಗ್ಡೆ – ಉಡುಪಿ-ಚಿಕ್ಕಬಳ್ಳಾಪುರದಲ್ಲಿ ಗೆಲ್ಲೋದ್ಯಾರು ಗೊತ್ತೇ?

ಪ್ರಜಾ ಸೋಶಿಯಲಿಸ್ಟ್ ಪಾರ್ಟಿ (ಪಿಎಸ್’ಪಿ), ಕ್ರಾಂತಿ ರಂಗಕ್ಕೂ ಗೆಲುವಿನ ರುಚಿ ತೋರಿಸಿದ್ದ ಕಾಂಗ್ರೆಸ್ ಭದ್ರಕೋಟೆಯಾದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 2004 ರಿಂದ (2013 ಹೊರತು) ನಾಲ್ಕು ಅವಧಿಗೆ ಬಿಜೆಪಿ ಗೆದ್ದಿದೆ. 2024ರ ಲೋಕಸಭೆಯಲ್ಲೂ ಬಿಜೆಪಿ ಪಕ್ಷಕ್ಕೆ ಜಯ ಸಿಗಲಿದೆಯಾ? ಉಡುಪಿ ಜನರ ನಿರ್ಧಾರವೇನು?

2024ರ ಮಹಾಚುನಾವಣೆಗಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್’ನಿಂದ ನಾಲ್ಕನೇ ಬಾರಿ ಹಾಗೂ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಸಂಸತ್ತು ಪ್ರವೇಶದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಉಡುಪಿ ನಗರಸಭೆಯ 35 ಸ್ಥಾನಗಳಲ್ಲಿ 32 ಸ್ಥಾನವನ್ನು ಬಿಜೆಪಿ ಹೊಂದಿದ್ದು ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ವಿವಾದ ಕೋರ್ಟ್ನಲ್ಲಿರುವ ಹಿನ್ನೆಲೆಯಲ್ಲಿ 11 ತಿಂಗಳಿನಿಂದ ಆಡಳಿತ ಪ್ರಭಾರವನ್ನು ಜಿಲ್ಲಾಧಿಕಾರಿ ನಿರ್ವಹಿಸುತ್ತಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 16 ಗ್ರಾ.ಪಂ. ಗಳಿದ್ದು 9 ರಲ್ಲಿ ಬಿಜೆಪಿ ಬೆಂಬಲಿತರಿದ್ದಾರೆ.

2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಿಜೆಪಿಯ ಡಿ.ವಿ.ಸದಾನಂದ ಗೌಡರು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 5,255 ಮತಗಳ ಮುನ್ನಡೆ ಪಡೆದಿದ್ದರು. 2012 ರಲ್ಲಿ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದ ಗೌಡರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು.

ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರಿಗಿಂತ 9,111 ಮತಗಳ ಮುನ್ನಡೆ ಪಡೆದಿದ್ದರು. 2014 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಕಂಡ 32,674 ಮತಗಳ ಹಿನ್ನಡೆ 2019 ರಲ್ಲಿ ಕಾಂಗ್ರೆಸ್/ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜರಿಗೆ 47,276ಕ್ಕೇ ರಿತ್ತು.

ಲೋಕಸಭೆ ಚುನಾವಣೆ – ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವಾರು ಮತ

1. 2009: ಬಿಜೆಪಿ: 56,369, ಕಾಂಗ್ರೆಸ್: 51,114, ಜೆಡಿಎಸ್: 1,521(ಬಿಜೆಪಿ ಮುನ್ನಡೆ: 5,255)
2. 2012 (ಉಪಚುನಾವಣೆ): ಬಿಜೆಪಿ: 54,439, ಕಾಂಗ್ರೆಸ್: 63,550, ಜೆಡಿಎಸ್: 2,108 (ಕಾಂಗ್ರೆಸ್ ಮುನ್ನಡೆ: 9,111)
3. 2014: ಬಿಜೆಪಿ: 87,585, ಕಾಂಗ್ರೆಸ್: 54,911, ಜೆಡಿಎಸ್: 313(ಬಿಜೆಪಿ ಮುನ್ನಡೆ: 32,674)
4. 2019: ಬಿಜೆಪಿ: 1,02,946, ಕಾಂಗ್ರೆಸ್/ಜೆಡಿಎಸ್: 55,670 (ಬಿಜೆಪಿ ಮುನ್ನಡೆ: 47,276)

Kota Srinivas Pujari vs Jayaprakash Hegde - Do you know who will win in Udupi-Chikkaballapur?

ವಿಧಾನಸಭಾ ಚುನಾವಣೆ ಬಲಾಬಲ

1. 2013: ಬಿಜೆಪಿ: 46,878, ಕಾಂಗ್ರೆಸ್: 86,123, ಜೆಡಿಎಸ್: 983 (ಕಾಂಗ್ರೆಸ್ ಗೆಲುವಿನ ಅಂತರ: 39,245)
2. 2018: ಬಿಜೆಪಿ: 84,946, ಕಾಂಗ್ರೆಸ್: 72,902, ಜೆಡಿಎಸ್: 1,361(ಬಿಜೆಪಿ ಗೆಲುವಿನ ಅಂತರ: 12,044)
3. 2023: ಬಿಜೆಪಿ: 97,079, ಕಾಂಗ್ರೆಸ್: 64,303, ಜೆಡಿಎಸ್: 845 (ಬಿಜೆಪಿ ಗೆಲುವಿನ ಅಂತರ: 32,776)

ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರು

1. ಪುರುಷರು: 1,05,984
2. ಮಹಿಳೆಯರು: 1,13,731
3. ತೃತೀಯ ಲಿಂಗ: 02
4. ಒಟ್ಟು ಮತದಾರರು: 2,19,717

ಸೇವಾ ಮತದಾರರು: 51

1. ಯುವ ಮತದಾರರು: 4,477
2. ಹಿರಿಯ ನಾಗರಿಕರು: 3,624
3. ದಿವ್ಯಾಂಗರು: 2,603
4. ಶತಾಯುಷಿಗಳು: 71
5. ಮತಗಟ್ಟೆಗಳು: 226

You might also like
Leave A Reply

Your email address will not be published.