ಕಾಂಗ್ರೆಸ್‌ನ ಪ್ರಣಾಳಿಕೆ ಪಾಕಿಸ್ತಾನದ ಚುನಾವಣೆಗೆ, ಭಾರತಕ್ಕೆ ಅಲ್ಲ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ

ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಈಗಾಗಲೇ ಆರಂಭವಾಗಿದ್ದು, ಎಲ್ಲಾ ಪಕ್ಷದ ನಾಯಕರು ಬಿರುಸಿನಿಂದ ಪ್ರಚಾರ ಕೈಗೊಂಡಿದ್ದಾರೆ. ‌ಈ ಮಧ್ಯೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರ ವಿರುದ್ಧ ಬಿಜೆಪಿ ನಾಯಕ ಮತ್ತು ಅಸ್ಸಾಂನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವ ಶರ್ಮ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ, ಈ ಪ್ರಣಾಳಿಕೆ ಪಾಕಿಸ್ತಾನಕ್ಕೆ ಸರಿಯಾಗಿದ್ದು ಭಾರತಕ್ಕೆ ಅಲ್ಲ ಎಂದು ಖಂಡಿಸಿದ್ದಾರೆ.

ಕಾಂಗ್ರೆಸ್ ಯಾವಾಗಲೂ ತುಷ್ಟೀಕರಣದ ರಾಜಕಾರಣ ಮಾಡಬಯಸುತ್ತಿದೆ. ತ್ರಿವಳಿ ತಲಾಖ್ ಆಗಲಿ, ಬಾಲ್ಯವಿವಾಹವನ್ನಾಗಲಿ ಪುನರಾರಂಭಿಸಲು ಯಾರೂ ಬಯಸುವುದಿಲ್ಲ. 2-3 ಬಾರಿ ಮದುವೆಯಾಗಲು ಯಾರು ಬಯಸುತ್ತಾರೆ? ಹಿಂದೂಗಳಿಗಾಗಲಿ, ಮುಸ್ಲಿಮರಿಗಾಗಲಿ ಇದು ಬೇಕಾಗಿಲ್ಲ. ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯದ ಭಾಗವೇ ಹೊರತು ಬೇರೆನಲ್ಲ, ನಾನು ಇದನ್ನು ಖಂಡಿಸುತ್ತೇನೆ. ಈ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಪಾಕಿಸ್ತಾನದ ಚುನಾವಣೆಗಾಗಿ ರಚನೆ‌ ಮಾಡಿದೆಯೇ ಹೊರತು ಭಾರತಕ್ಕೆ ಅಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ಇನ್ನು, ಹಿಮಂತ ಬಿಸ್ವ ಶರ್ಮ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಕಾಂಗ್ರೆಸ್, ಹಿಮಂತ ಬಿಸ್ವ ಶರ್ಮ ಹಲವಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದರು. ಆದರೂ ಅವರಿಗೆ ಪಕ್ಷದ ಮುಖ್ಯ ತತ್ತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗಾಗಿಯೇ ಅವರು ಬಿಜೆಪಿಗೆ ಹೋಗಿದ್ದಾರೆ.‌ ಬಿಜೆಪಿ ಪಕ್ಷಕ್ಕೆ ತನ್ನ ನಿಷ್ಠೆ ತೋರಿಸುವ ಬರದಲ್ಲಿ ಕಾಂಗ್ರೆಸ್‌ಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದೆ.

Congress manifesto is for Pakistan elections, not for India: Assam CM Himanta Biswa Sharma

ಇನ್ನು 2024 ರ ಲೋಕಸಭಾ ಚುನಾವಣೆಯ ಮತದಾನವು ಏಪ್ರಿಲ್ 16 ರಿಂದ ಆರಂಭವಾಗಲಿದ್ದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ, ಹಾಗೂ ಕೊನೆಯ ಹಂತದ ಮತದಾನವು ಜೂನ್ 1 ರಂದು ನಡೆಯಲಿದೆ ಹಾಗೂ ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ತನ್ನ ಪ್ರಣಾಳಿಕೆಯಲ್ಲಿ ಲವ್ ಜಿಹಾದ್, ಗೋ ಮಾಂಸ ಭಕ್ಷಣೆ, ತನಿಖಾ ಸಂಸ್ಥೆಗಳ ನಿಯಂತ್ರಣ ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖ ಮಾಡಿದೆ.

You might also like
Leave A Reply

Your email address will not be published.