ಮತದಾರ ಪ್ರಭು ಯಾರಿಗೆ ನೀಡಲಿದ್ದಾನೆ ದಾವಣಗೆರೆ ಬೆಣ್ಣೆದೋಸೆ…!?

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಳೆಯ ರಾಜಕೀಯ ನಾಯಕರು ಈಗ ತಮ್ಮ ಮನೆಯ ಮಹಿಳೆಯರನ್ನು ಲೋಕಸಭೆಗೆ ಕಳಿಸಲು ಮುಂದಾಗಿದ್ದಾರೆ.

ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದ್ದರೆ, ಈಗಾಗಲೇ ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಹೆಂಡತಿ ಹಾಗೂ ಶಾಮನೂರು ಕುಟುಂಬದ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರನ್ನು ಸ್ಪರ್ಧೆಗಿಳಿಸಿದ್ದಾರೆ. ಇವರಿಬ್ಬರ ನಡುವೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಕೂಡ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಮೂವರ ಪೈಕಿ ದಾವಣಗೆರೆ ಜನ ಕೈಹಿಡಿದು ಅಧಿಕಾರ ಪಟ್ಟ ಕೊಡೋದು ಯಾರಿಗೆ ಎಂಬುದನ್ನು‌ ಕಾದು ನೋಡಬೇಕಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಳೆಯ ರಾಜಕೀಯ ನಾಯಕರು ಈಗ ತಮ್ಮ ಮನೆಯ ಮಹಿಳೆಯರನ್ನು ಲೋಕಸಭೆಗೆ ಕಳಿಸಲು ಮುಂದಾಗಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ವಿವರ:

#ಒಟ್ಟು ಅಭ್ಯರ್ಥಿಗಳು: 30
#ಒಟ್ಟು ಮತದಾರರು: 17,09,244
#ಪುರಷ ಮತದಾರರು – 851990
#ಮಹಿಳಾ ಮತದಾರರು – 857117
#ಇತರೆ -137
#ಒಟ್ಟು ಮತಗಟ್ಟೆಗಳು 1,946

You might also like
Leave A Reply

Your email address will not be published.