ಚುನಾವಣಾ ಪ್ರಚಾರ : ತನ್ನನ್ನು ದ್ರೌಪದಿಯೊಂದಿಗೆ ಹೋಲಿಸಿಕೊಂಡ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅವರ ಹುಟ್ಟೂರಾದ ಮಂಡಿಯಿಂದ ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿಯು ಟಿಕೆಟ್ ನೀಡಿದ್ದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರಾಗಿರುವ ಕಂಗನಾ ಕೂಡಾ ಅದಕ್ಕೆ ಬೇಕಾದ ತಯಾರಿಯಲ್ಲಿದ್ದಾರೆ. ಕಂಗನಾರನ್ನು ಕಣಕ್ಕಿಳಿಸಿದ ಒಂದು ದಿನದ ನಂತರ ಕಾಂಗ್ರೆಸ್‌ʼನ ಸುಪ್ರಿಯಾ ಶ್ರೀನಾತ್‌ ಅವರು ಕಂಗನಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದು ಭಾರೀ ಸುದ್ದಿ ಮಾಡಿತ್ತು.

ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲಿ ಚುನಾವಣಾ ತಯಾರಿಯ, ಪ್ರಚಾರದ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ ಸುಪ್ರಿಯಾ ಅವರ ಕುರಿತು ಮಾಡಿದ ಅವಹೆಳನಕಾರಿ ಆಪಾದನೆ ಹಾಗೂ ಇತರ ತುಣುಕಗಳೂ ಒಳಗೊಂಡಿವೆ. ಆ ವಿಡಿಯೋಗೆ ತನ್ನದೇ ಚಿತ್ರದ ಡೈಲಾಗ್ ಒಂದನ್ನು BGM ಆಗಿ ಬಳಸಿದ್ದು ತನ್ನನ್ನು ದ್ರೌಪದಿಗೆ ಹೋಲಿಸಿಕೊಂಡಿದ್ದಾರೆ. ‘ಆಜ್ ತು ನೇ ಜೈಸೇ ಭಾರಿ ಸಭಾ ಮೇ ಅಪ್‌ಮಾನ್ ಕಿಯಾ ಹೈ, ವೈಸಾಹೈ ಚೀರ್ಹರನ್ ಕೌರವೋ ನೇ ದ್ರೌಪದಿ ಕಾ ಕಿಯಾ ತಾ, ವೋ ಸತ್ತಾ ಕಿ ಲಡಾಯಿ ಭೀ ವೋ ಜೀತೀ ತೀ, ಯೇ ಸತ್ತಾ ಕಿ ಲಡಾಯಿ ಭೀ ಮೇ ಜೀತೂಂಗಿ’ ಅಂದರೆ ಇವತ್ತು ಹೇಗೆ ತುಂಬಿದ ಸಭೆಯಲ್ಲಿ ನೀನು‌ ನನ್ನನ್ನು ಅವಮಾನ ಮಾಡಿದೆಯೋ‌ ಅಂದು ದ್ರೌಪದಿಗೂ ಕೌರವರು ಅದೇ ಮಾಡಿದ್ದರು. ಆ ರಾಜಕೀಯದ ಯುದ್ಧವನ್ನು ದ್ರೌಪದಿ ಗೆದ್ದಳು, ಈ ರಾಜಕೀಯದ ಯುದ್ಧವನ್ನು‌ ನಾನೂ ಗೆಲ್ಲುತ್ತೇನೆ’ ಎಂದಾಗಿದೆ.‌ ಹಾಗೂ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಈ ಯುದ್ದ ಕೇವಲ ನನ್ನದಲ್ಲ, ನಮ್ಮೆಲ್ಲರದು.. ಮಹಿಳೆಯರ ಹಾಗೂ ಹಿಮಾಚಲ ಪ್ರದೇಶದ ಗೌರವದ್ದು ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Kangana Ranaut (@kanganaranaut)

ಇನ್ನು ಸುಪ್ರಿಯಾ ಅವರು ಕಂಗನಾ ಅವರ ಬಗ್ಗೆ ಮಾಡಿದ ಅವಹೆಳನಕಾರಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಿಂದ ತೆಗೆಯಲಾಗಿದ್ದು, ತನ್ನ ಸೋಷಿಯಲ್ ಮಿಡಿಯಾದ ಯಾವುದೋ ಒಬ್ಬ ಉದ್ಯೋಗಿ ಮಾಡಿದ್ದು ಇದು ತಾನಲ್ಲ ಎಂದು ಸುಪ್ರಿಯಾ ಸಮಜಾಯಿಷಿ ನೀಡಿದ್ದರು.

You might also like
Leave A Reply

Your email address will not be published.