ಕಾಂಗ್ರೆಸ್‌ ಗೊತ್ತು ಗುರಿಯಿಲ್ಲದೆ ಸಾಗುತ್ತಿದೆ – ಖರ್ಗೆಗೆ ರಾಜೀನಾಮೆ ಪತ್ರ ಬರೆದ ಗೌರವ್‌ ವಲ್ಲಭ್

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಮುನ್ನವೇ ಕಾಂಗ್ರೆಸ್‌ನ ನಾಯಕ ಗೌರವ್ ವಲ್ಲಭ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಎರಡು ಪುಟಗಳ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ ಬರೆದಿದ್ದಾರೆ.

ಇನ್ನು, ತಾನು ಪಕ್ಷ ತ್ಯಜಿಸಿದ ಉದ್ದೇಶ ತಿಳಿಸಿದ ಗೌರವ್ ವಲ್ಲಭ್, ಕಾಂಗ್ರೆಸ್ ಪಕ್ಷವು ಒಂದು ಗುರಿಯಿಲ್ಲದ ದಾರಿಯಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಇದರಿಂದ ನನಗೆ ಸಮಾಧಾನವಿಲ್ಲದ ಕಾರಣ ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮುಂದುವರೆದು, ಅಲ್ಲದೇ ನಾನು ಸನಾತನ ಧರ್ಮದ ವಿರುದ್ಧದ ಘೋಷಣೆಗಳನ್ನು ಕೂಗಲು ಸಾಧ್ಯವಿಲ್ಲ. ಅಲ್ಲದೇ ಈ ದೇಶದ ಸಂಪತ್ತನ್ನು ಸೃಷ್ಟಿದವರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಾನು ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

Congress knows it is moving aimlessly - Gaurav Vallabh has written a resignation letter to Kharge

ಕಾಂಗ್ರೆಸ್‌ ಪಕ್ಷದ ನೀತಿಗಳ ವಿರುದ್ಧ, ಹಿಂದೂ ವಿರೋಧಿ ಧೋರಣೆಯನ್ನು ಪ್ರತಿಭಟಿಸಿ ಕಾಂಗ್ರೆಸ್‌ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಗೆ ಸೇರ್ಪಡೆಯಾಗುತ್ತಿರುವುದು ಕೆಲತಿಂಗಳುಗಳಿಂದ ನಿರಂತರವಾಗಿ ವರದಿಯಾಗುತ್ತಿದೆ.

You might also like
Leave A Reply

Your email address will not be published.