ಅಬಕಾರಿ ನೀತಿ ಹಗರಣ : ಬಿಜೆಪಿ ಸೇರ್ಪಡೆ ಆಫರ್‌ ಎಂದ ಎಎಪಿ ನಾಯಕಿ ಅತೀಶಿಗೆ ತಿರುಗೇಟು

ಆಮ್ ಆದ್ಮಿ ಪಾರ್ಟಿಯ ನಾಯಕಿ ಅತೀಶಿ ಅವರು ತನಗೆ ಬಿಜೆಪಿ ಸೇರಲು ಆಹ್ವಾನ ಬಂದಿದ್ದಾಗಿ ಹೇಳಿಕೆ‌ ನೀಡಿದ ಬೆನ್ನಲ್ಲೇ ‌ಅದಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಜನತಾ ಪಾರ್ಟಿಯ ನಾಯಕ ಹರ್ದೀಪ್ ಸಿಂಗ್ ಪುರಿ ಅವರು ಬಿಜೆಪಿಯಲ್ಲಿ ವೇಕೇನ್ಸಿ (ಜಾಗ) ಖಾಲಿ ಇಲ್ಲ ಎಂದು ಹೇಳುವ ಮೂಲಕ‌ ತಿರುಗೇಟು ನೀಡಿದ್ದಾರೆ.

ಲಿಕ್ಕರ್ ಪಾಲಿಸಿ ಕೇಸ್‌ನ ಮೂಲಕ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ‌ ಕೇಜ್ರಿವಾಲ್ ಸೇರಿದಂತೆ ಇತರ ಆಪ್ ನಾಯಕರ ಬಗ್ಗೆ ಮಾತನಾಡಿದ ಪುರಿ, ಇಡೀ ಆಪ್ ಪಕ್ಷವೇ ಈ ಹಗರಣದಲ್ಲಿ ಸಿಲುಕಿರುವ ಸಮಯದಲ್ಲಿ ನಾವು ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತಪ್ಪನ್ನು ಮಾಡುವುದಿಲ್ಲ, ನಮ್ಮ ಪಕ್ಷದಲ್ಲಿ ಅತೀಶಿಯಂತವರಿಗೆ ಯಾವುದೇ ಹುದ್ದೆ ಖಾಲಿ‌ ಇಲ್ಲ ಎಂದಿದ್ದಾರೆ.

ಕೇಸರಿ ಪಾಳಯ ಸೇರಿ ಇಲ್ಲವೇ ಲಿಕ್ಕರ್ ಪಾಲಿಸಿ ಹಗರಣದಲ್ಲಿ ಇ.ಡಿ. ವಿಚಾರಣೆಯ ನೆಪದಲ್ಲಿ ನಿಮ್ಮನ್ನೂ ಪೋಲಿಸ್ ಬಂಧಿಸುತ್ತಾರೆ ಎಂದು ಬಿಜೆಪಿ ತನ್ನನ್ನು ಬೆದರಿಸುತ್ತಿದೆ ಎಂದು ಅತೀಶಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಹರ್ದೀಪ್ ಸಿಂಗ್ ಪುರಿಯವರು ಮಾತನಾಡಿದ್ದಾಗಿ ತಿಳಿದು ಬಂದಿದೆ‌. ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅತೀಶಿ, ಬಿಜೆಪಿಗೆ ಸೇರುವಂತೆ ಬಹಳ ಆಪ್ತ ವ್ಯಕ್ತಿಯ ಮೂಲಕ ಸಂಪರ್ಕ ಮಾಡಿದೆ, ಅಥವಾ ಒಂದು ತಿಂಗಳ ಒಳಗೆ ಇ.ಡಿ.ಯಿಂದ ಬಂಧನಗೊಳ್ಳಲು ಸಜ್ಜಾಗುವಂತೆ ಹೇಳಿದೆ. ತನ್ನನ್ನು ಮಾತ್ರವಲ್ಲದೆ, ದೆಹಲಿ ಸರ್ಕಾರದಲ್ಲಿ ಸಚಿವರಾಗಿರುವ, ಸೌರಭ್ ಭಾರದ್ವಾಜ್, ಶಾಸಕ ದುರ್ಗೇಶ್ ಪಾಠಕ್ ಮತ್ತು ರಾಜ್ಯ ಸಭಾ ಸಂಸದ ರಾಘವ್ ಚಡ್ಡಾ ಅವರನ್ನೂ ಕೂಡಾ ಬಂಧಿಸಲಾಗುವುದು ಎಂದಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯವು ತನ್ನ ನಿವಾಸ ಹಾಗೂ ತನ್ನ ಸಂಬಂಧಿಕರ ನಿವಾಸದ ಮೇಲೂ ದಾಳಿ ನಡೆಸಲಿದೆ ಎಂದು ತಿಳಿಸಲಾಗಿದೆ ಎಂದು ಅತೀಶಿ ಆರೋಪ‌ ಮಾಡಿದ್ದಾರೆ.

Excise policy scam: AAP leader Atishi hits out at BJP joining offer

ಇನ್ನು ಅತೀಶಿಯವರ ಈ ಹೇಳಿಕೆಗಳನ್ನು ಬಿಜೆಪಿಯು ನಿರಾಕರಣೆ ಮಾಡಿದ್ದು, ಅತೀಶಿ ಸುಳ್ಳು ಹೇಳುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಪ್ರತಿಕ್ರಿಯೆ ನೀಡಿದ್ದು, ಮದ್ಯ ಹಗರಣದಲ್ಲಿ ಸಂಪೂರ್ಣ ಆಮ್ ಆದ್ಮಿ ಪಕ್ಷವು ಭಾಗಿಯಾಗಿದ್ದು ಮುಂದಿನ ಬಲಿಪಶು ಯಾರಾಗಬೇಕು ಎಂಬುದರ ಬಗ್ಗೆ ನಾಯಕರು ತಮ್ಮೊಳಗೆ ಜಗಳವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಅಬಕಾರಿ‌ ನೀತಿ ಪ್ರಕರಣದ ಆರೋಪಿ ಮತ್ತು ಜೈಲಿನಲ್ಲಿರುವ ಆಪ್ ನಾಯಕ ವಿಜಯ್ ನಾಯರ್ ಅವರು ಅತಿಶಿ ಹಾಗೂ ಭಾರಧ್ವಜ್ ಅವರಿಗೆ ವರದಿ ಮಾಡುತ್ತಿದ್ದರು ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರಿಂದ ಆಪ್ ನಾಯಕರು ಅವರವರೇ ಜಗಳವಾಡುತ್ತಿದ್ದಾರೆ ಅತೀಶಿ ತಾನು ಬಚವಾಗಲು ಚಡ್ಡಾ ಹಾಗೂ ಪಾಠಕ್ ಅವರನ್ನು ಎಳೆದು ತರುತ್ತಿದ್ದಾರೆ ಎಂದೂ ಹೇಳಿದರು.

ಇನ್ನು ಅತೀಶಿಯ ಬಿಜೆಪಿ ಆಹ್ವಾನ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಾರ್ಖಂಡ್ ಬಿಜೆಪಿ ಘಟಕವು ಇದೊಂದು ಸಂಪೂರ್ಣ ರಾಜಕೀಯ ಸ್ಟಂಟ್ ಆಗಿದೆ ಎಂದು ಕರೆದಿದ್ದಾರೆ.

You might also like
Leave A Reply

Your email address will not be published.