Lokasabha Election 2024 : ಇಂದೇ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ?

ಇಂದು ಸಂಜೆ 6:00 ಗಂಟೆಗೆ ನವ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಭಾರತೀಯ ಜನತಾ ಪಾರ್ಟಿಯ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಲಿದ್ದು, ಆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವಂತೆ ಮಾಧ್ಯಮಗಳಿಗೆ ಕರೆ ನೀಡಲಾಗಿದೆ.

ಈ ಕುರಿತು ಬಿಜೆಪಿ ಸೆಂಟ್ರಲ್ ಮೀಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುದ್ದು ಆ ಟ್ವೀಟ್ ನಲ್ಲಿ ಇಂಪಾರ್ಟೆಂಟ್ ಬಿಜೆಪಿ ಪ್ರೆಸ್ ಕಾನ್ಫರೆನ್ಸ್ ಎಂದು ಹೇಳಲಾಗಿರುವುದರಿಂದ ಇದು ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಲಿಸ್ಟ್ ಅನ್ನು ಇಂದು ಬಿಡುಗಡೆ ಮಾಡುವ ಕುರಿತು ಇರಬಹುದೇ ಎನ್ನುವ ಊಹಾ ಪೋಹಗಳು ಬಿಜೆಪಿ ಬೆಂಬಲಿಗರಲ್ಲಿ ಹರಿದಾಡುತ್ತಿವೆ. ಅದಕ್ಕೆ ಪೂರಕವೆಂಬಂತೆ ನಿನ್ನೆ ತಡರಾತ್ರಿಯ ತನಕ ಅಂದರೆ ಬೆಳಗಿನ ಜಾವ 3.30 ರ ತನಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಿಜೆಪಿಗೆ ಸಂಬಂಧಿಸಿದ ಒಂದು ಮುಖ್ಯ ಚರ್ಚೆಯಲ್ಲಿ ಭಾಗವಹಿಸಿದ್ದು ತಿಳಿದು ಬಂದಿದೆ. ಆ ಮೀಟಿಂಗ್ ನಡೆದ ಮರುದಿನವೇ ಅಂದರೆ ಇಂದು ಬಿಜೆಪಿ ಸೆಂಟ್ರಲ್ ಮೀಡಿಯಾವು ಬಹು ಮುಖ್ಯವಾದ ಪ್ರೆಸ್ ಕಾನ್ಫರೆನ್ಸ್ ಎಂದು ಹೇಳಿರುವುದರಿಂದ ಆ ಊಹಾಪೋಹಗಳಿಗೆ ಬೆಂಬಲ ಸಿಕ್ಕಂತಾಗಿದ್ದು, ಪ್ರಥಮ ಲಿಸ್ಟ್ ನಲ್ಲಿ ಯಾರ್ಯಾರ ಜಾಗ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಬಿಜೆಪಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ತೀರಾ ಗೌಪ್ಯವಾಗಿದ್ದು ಮಾಧ್ಯಮಗಳಿಗೆ ಯಾವುದೇ ರೀತಿಯ ಇತರೆ ಮಾಹಿತಿಗಳು ದೊರಕುತ್ತಿಲ್ಲವಾದ್ದರಿಂದ ಈ ಒಂದು ಮಾಹಿತಿ ಆಧಾರದ ಮೇಲೆ ಚುನಾವಣೆಗೆ ಸಂಬಂಧಿಸಿದಂತೆ ಇಂದಿನ ಪತ್ರಿಕಾ ಘೋಷ್ಠಿಯು ಅಭ್ಯರ್ಥಿಗಳ ಪ್ರಥಮ ಪಟ್ಟಿಯ ಬಿಡುಗಡೆಯೇ ಆಗಿರಬಹುದು ಎಂದು ಅಂದಾಜಿಸಲಾಗಿದೆ.

You might also like
Leave A Reply

Your email address will not be published.