ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿ ಬಿಡುಗಡೆ ಮಾಡಿದ ಭಾರತೀಯ ಜನತಾ ಪಾರ್ಟಿ.

ಇಂದು ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿಯ ಮುಖ್ಯ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ವಿನೋದ್ ತಾವ್ಡೆಯವರು ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ 195 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಇಂದು ಘೋಷಣೆ ಮಾಡಿದ್ದಾರೆ.

ಮೊದಲ ಪಟ್ಟಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸೇರಿದಂತೆ 34 ಜನ ಕೇಂದ್ರ ಮಂತ್ರಿಗಳು, ಕೇಂದ್ರ ರಾಜ್ಯ ಮಂತ್ರಿಗಳು ಹಾಗೂ ಲೋಕಸಭಾ ಸ್ಪೀಕರ್, ಎರಡು ಜ‌ನ ಮಾಜಿ ಮುಖ್ಯಮಂತ್ರಿಗಳು ಕೂಡಾ ಸೇರಿದ್ದಾರೆ. ಹಾಗೂ ಈ ಪಟ್ಟಿಯಲ್ಲಿ 28 ಜನ ಅಭ್ಯರ್ಥಿಗಳು ಮಹಿಳೆಯರು, 47 ಜನ 50 ವರ್ಷಕ್ಕಿಂತ ಕಡಿಮೆಯವರಿದ್ದಾರೆ.‌ ಹಾಗೂ ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯ 27 ಮಂದಿ, ಪರಿಶಿಷ್ಟ ಪಂಗಡದ 18, ಇತರೇ ಹಿಂದುಳಿದ ವರ್ಗದ 57 ಸ್ಥಾನಗಳಿವೆ.

ಇನ್ನು ಮೊದಲ ಪಟ್ಟಿಯಲ್ಲಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶದಿಂದ 51 ಸ್ಥಾನ, ಪಶ್ಚಿಮ ಬಂಗಾಳದಿಂದ 20, ಮಧ್ಯಪ್ರದೇಶ 24, ಗುಜರಾತ್ 15, ರಾಜಸ್ಥಾನ 15, ಕೇರಳ 12, ತೆಲಂಗಾಣದಿಂದ 9, ಅಸ್ಸಾಂ 11, ಜಾರ್ಖಂಡ್ 11, ಛತ್ತೀಸ್‌ಗಢ 11, ದೆಹಲಿಯಿಂದ 5, ಜಮ್ಮು ಮತ್ತು ಕಾಶ್ಮೀರದಿಂದ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 2, ಗೋವಾ 1, ತ್ರಿಪುರ 1, ಅಂಡಮಾನ್ ನಿಕೋಬಾರ್ 1, ದಮನ್ & ದಿಯುವಿನಿಂದ 1 ಸ್ಥಾನಗಳನ್ನು ಘೋಷಿಸಲಾಗಿದೆ.

ವಾರಣಾಸಿಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ಪರ್ಧಿಸಲಿದ್ದು, ನವದೆಹಲಿ ಲೋಕಸಭಾ ಕ್ಷೇತ್ರಕ್ಕೆ ಈಗಿರುವ ಸಂಸದೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಕೊಕ್ ನೀಡಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ‌.

ಮುಂಬರುವ ದಿನಗಳಲ್ಲಿ ಬಿಜೆಪಿಯು ಇನ್ನುಳಿದ ಅಭ್ಯರ್ಥಿಗಳ ಮಾಹಿತಿ ನೀಡಲಿದ್ದು ಇವತ್ತಿಗೆ ಈ ಅಭ್ಯರ್ಥಿಗಳ ಪೂರ್ವಾಪರ ಮಾಹಿತಿ ಸಂಗ್ರಹಿಸಲು ನಿಮಗೆ ತಡವಾಗಬಹುದು, ಎಂದು‌ನಗೆ ಚಟಾಕಿ ಹಾರಿಸುತ್ತಾ ವಿನೋದ್ ತಾವ್ಡೆಯವರು ಪತ್ರಿಕಾಗೋಷ್ಠಿಯನ್ನು ಮುಗಿಸಿದ್ದಾರೆ.

You might also like
Leave A Reply

Your email address will not be published.