Breaking News : ಸ್ವತಂತ್ರ ಪಕ್ಷ ಸ್ಥಾಪಿಸಿದ ತಮಿಳುನಟ ವಿಜಯ್!

ತಮಿಳು ನಟ ವಿಜಯ್‌ (Actor Vijay) ಅವರು ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದು, ನೂತನ ಪಕ್ಷ ಸ್ಥಾಪಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯ ಬೆನ್ನಲ್ಲೇ, ತಮಿಳ ವೆಟ್ರಿ ಖಜಂ ಪಕ್ಷವನ್ನು (Tamila Vetri Kalagam Party) ನಟ ವಿಜಯ್‌ ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಖ್ಯಾತಿ ಗಳಿಸಿರುವ ನಟ ವಿಜಯ್‌ ಆಗಾಗ್ಗೆ ರಾಜಕೀಯ ಕಾರಣಗಳಿಗಾಗಿ ಸುದ್ದಿಗೆ ಬರುತ್ತಿದ್ದರು.

ತಮಿಳು ನಟ ವಿಜಯ್ (Actor Vijay) ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷವನ್ನು ಆರಂಭಿಸಿದ್ದು, ಅದಕ್ಕೆ ತಮಿಳ ವೆಟ್ರಿ ಖಜಂ ಎಂದು ಹೆಸರಿಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಟ ವಿಜಯ್‌ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ.

Tamil Vetri Kalagam Party

ನೂತನ ಪಕ್ಷ ಸ್ಥಾಪಿಸಿರುವ ತಮಿಳು ನಟ ವಿಜಯ್‌ (Actor Vijay) ಅವರು, 2024 ರ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಅಸ್ತಿತ್ವದಲ್ಲಿರುವ ಯಾವುದೇ ರಾಜಕೀಯ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪಕ್ಷವು ಉದ್ದೇಶಿಸಿಲ್ಲ ಎಂದು ವಿಜಯ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನಟ ವಿಜಯ್‌ (Actor Vijay) ಅವರ ರಾಜಕೀಯ ಪ್ರವೇಶವು ತಮಿಳುನಾಡು ರಾಜಕೀಯದಲ್ಲಿ ಸಂಚಲನವನ್ನು ಸೃಷ್ಠಿಸಿದೆ. ಲೋಕಸಭಾ ಚುನಾವಣೆಯಲ್ಲಿ ತಮಿಳ ವೆಟ್ರಿ ಕಳಗಂ ಪಕ್ಷದಿಂದ ಪ್ರಾದೇಶಿಕ ಪಕ್ಷಗಳ ಮೇಲೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗುತ್ತಿದೆ.

You might also like
Leave A Reply

Your email address will not be published.