ಸಂವಿಧಾನಕ್ಕೆ ತಿದ್ದುಪಡಿಗೆ ಯತ್ನಿಸಿದರೆ ಇಡೀ ದೇಶವೇ ಬೆಂಕಿ ಬೀಳಲಿದೆ – ರಾಹುಲ್‌ ಗಾಂಧಿ

ಮಾರ್ಚ್ 31 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿದಲ್ಲಿ ನಡೆದ ಲೋಕತಂತ್ರ ಬಚಾವೋ (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿಯಲ್ಲಿ ಮಾತನಾಡುತ್ತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲವು ಮತ ಸೆಳೆಯಲು, ಭಾರತೀಯ ಜನತಾ ಪಾರ್ಟಿಯು ಗೆದ್ದು ಸಂವಿಧಾನ ತಿದ್ದುಪಡಿಗೆ ಯತ್ನಿಸಿದರೆ ದೇಶವೇ ಹೊತ್ತಿ ಉರಿಯಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿವಾದಕ್ಕೆ ಗುರಿಯಾಗಿದ್ದಾರೆ.

ಈ ಚುನಾವಣೆಯಲ್ಲಿ ಇವಿಎಂ, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮಗಳು ಮತ್ತು ಪತ್ರಿಕೆಗಳ/ಮಾಧ್ಯಮಗಳ ಸಹಕಾರವಿಲ್ಲದೆ ಬಿಜೆಪಿ 180 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸುತ್ತಿದ್ದಾರೆ, ಒಂದು ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಿ ಬಿಜೆಪಿ ಗೆದ್ದು ಸಂವಿಧಾನ ಬದಲಾಯಿಸಿದರೆ ಇಡೀ ದೇಶವೇ ಹೊತ್ತಿ ಉರಿಯಲಿದೆ. ಮುಂಬರುವ ಚುನಾವಣೆಯು ಭಾರತದ ಭವಿಷ್ಯ ಮತ್ತು ರೈತರ ಹಕ್ಕುಗಳನ್ನು ಉಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಲಿದೆ ಎಂದರು.

ಇನ್ನು ಮುಂದುವರೆದು ಮಾತನಾಡಿದ ರಾಹುಲ್ ಗಾಂಧಿ, ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಿಟ್ಟು ಮಾಡುವುದು ಯಾವ ರೀತಿಯ ಚುನಾವಣೆ? ಕೆಲವು ಕೋಟ್ಯಾಧಿಪತಿಗಳೊಂದಿಗೆ ಸೇರಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಇದಷ್ಟೂ ಪ್ರಕ್ರಿಯೆ ಬಡವರಿಂದ ಸಂವಿಧಾನವನ್ನು ಕಿತ್ತುಕೊಳ್ಳಲು ನಡೆಸುತ್ತಿರುವ ಹುನ್ನಾರವಾಗಿದೆ. ಸಂವಿಧಾನ ಮುಗಿದ ದಿನವೇ ಈ ದೇಶವೂ ಅಂತ್ಯಗೊಳ್ಳುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಂವಿಧಾನವು ಜನರ ಧ್ವನಿಯಾಗಿದೆ, ಮುಂಬರುವ ಚುನಾವಣೆ ಕೇವಲ ಮತಗಳಿಗಾಗಿ ಅಲ್ಲ, ಇದು ದೇಶ ಮತ್ತು ಸಂವಿಧಾನವನ್ನು ಉಳಿಸಲೋಸುಗವಾಗಿ ನಡೆಯಲಿದೆ ಎಂದರು.

ಇನ್ನು ರಾಮಲೀಲಾ ಮೈದಾನದಲ್ಲಿ ನಡೆದ ಪ್ರಜಾಪ್ರಭುತ್ವ ಉಳಿಸಿ ರ‌್ಯಾಲಿಯಲ್ಲಿ ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರುಕ್ ಅಬ್ದುಲ್ಲಾ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಸೇರಿದಂತೆ ಇಂಡಿ ಮೈತ್ರಿಕೂಟದ ಇತರ ನಾಯಕರು ಭಾಗವಹಿಸಿದ್ದರು.

You might also like
Leave A Reply

Your email address will not be published.