ಮಧ್ಯಂತರ ಬಜೆಟ್ – ಉಚಿತ ವಿದ್ಯುತ್ ಯೋಜನೆಯಡಿ ಒಂದು ಕೋಟಿ ಹೊಸ ಮನೆಗಳಿಗೆ ಸೋಲಾರ್ ಸಂಪರ್ಕ

ಉಚಿತ ವಿದ್ಯುತ್ (Muft Bizli) ಯೋಜನೆಯಡಿ ಒಂದು ಕೋಟಿ ಮನೆಗಳಿಗೆ ಸೋಲಾರ್ ಸಂಪರ್ಕ ಕಲ್ಪಿಸಲು ನೆರವು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ನೆನಪಿಗಾಗಿ ಮೇಲ್ಛಾವಣಿ ಮೇಲೆ ಸೋಲಾರ್ ಸಂಪರ್ಕಕ್ಕೆ ನೆರವು ನೀಡುವ ಬಗ್ಗೆ ಪ್ರಸ್ತುತಪಡಿಸಿದ್ದು, ಅದನ್ನು ಈ ಬಜೆಟ್ ಮೂಲಕ ಅನುಷ್ಠಾನಗೊಳಿಸುತ್ತಿದ್ದೇವೆ. ಈ ಯೋಜನೆಯಿಂದ ಆಯಾ ಕುಟುಂಬಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗುವುದರೊಂದಿಗೆ, ವಾರ್ಷಿಕವಾಗಿ 15 ರಿಂದ 18 ಸಾವಿರ ರೂಪಾಯಿ ಉಳಿತಾಯ ಮಾಡಲು ನೆರವಾಗಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಮಹತ್ವದ ಯೋಜನೆಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ.

Narendra Modi

ನಾಲ್ಕು ಪ್ರಮುಖ ಜಾತಿಗಳ ಕಲ್ಯಾಣಕ್ಕಾಗಿ ವಿಶೇಷ ಆದ್ಯತೆ: ಆ ಜಾತಿಗಳು ಯಾವುವು?

2047 ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಮಾಡುವ ಗುರಿಯನ್ನಿಟ್ಟುಕೊಂಡಿದ್ದು, ಅದಕ್ಕನುಗುಣವಾಗಿ ಕೆಲವೊಂದು ನೂತನ ಯೋಜನೆಗಳನ್ನು ತರಲಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ಪ್ರಮುಖ ಜಾತಿಗಳಾದ ಗರೀಬ್ (ಬಡವರು), ಮಹಿಳಾ (ಮಹಿಳೆಯರು), ಯುವ (ಯುವಕರು) ಮತ್ತು ಅನ್ನದಾತ (ರೈತರು)ರನ್ನು ಕೇಂದ್ರೀಕರಿಸಿ ವಿಶಿಷ್ಟ ಯೋಜನೆಗಳನ್ನು ತಂದಿದ್ದೇವೆ ಎಂದು ತಿಳಿಸಿದರು.

You might also like
Leave A Reply

Your email address will not be published.