ಫಸ್ಟ್ ಡೆವಲಪ್‌ಮೆಂಟ್ ಇಂಡಿಯಾ: ರಾಜ್ಯಗಳಿಗೆ ನೀಡುವ 50 ವರ್ಷದ ಬಡ್ಡಿ ರಹಿತ ಸಾಲ ಇನ್ನೂ ಒಂದು ವರ್ಷಕ್ಕೆ ಮುಂದೂಡಿಕೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಜನಪ್ರಿಯ ಘೋಷಣೆ ಮಾಡದೆ ಕೆಲ ಕೊಡುಗೆಗಳನ್ನು ಮಾತ್ರ ನೀಡುತ್ತಿದ್ದಾರೆ. ಅದರಲ್ಲಿ ಫಸ್ಟ್ ಡೆವಲಪ್‌ಮೆಂಟ್ ಇಂಡಿಯಾ ಅಡಿಯಲ್ಲಿ ರಾಜ್ಯಗಳಿಗೆ ನೀಡುವ 50 ವರ್ಷಗಳ ಕಾಲದ ಬಡ್ಡಿ ರಹಿತ ಸಾಲವನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು, ಇದರಿಂದ ರಾಜ್ಯಕ್ಕಾಗಲಿ, ಜನರಿಗಾಗಲಿ ಏನು ಲಾಭ? ಎಂಬುದನ್ನು ನೋಡೋಣ.

ಅಮೃತ ಕಾಲದಲ್ಲಿರುವ ಭಾರತಕ್ಕೆ ಮೂಲಸೌಕರ್ಯ ವರ್ಗೀಕರಣ, ಹಣಕಾಸು ಚೌಕಟ್ಟು ನಿರ್ವಹಿಸಲು ತಜ್ಞರ ಸಮಿತಿಯನ್ನು ಸ್ಥಾಪಿಸಲಾಗುತ್ತಿದ್ದು, ಮೂಲಸೌಕರ್ಯ ಹಣಕಾಸು ಸಚಿವಾಲಯವು ಖಾಸಗಿ ಹೂಡಿಕೆ ಆಕರ್ಷಿಸಲು ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂಪಾಯಿ ಮೀಸಲಿಡುವ ಮೂಲಕ, ವರ್ಧಿತ ಕ್ಯಾಪೆಕ್ಸ್ ಜಿಡಿಪಿಯ ಶೇ 3.3 ರಷ್ಟಿದೆ. ಅಲ್ಲದೇ ಈ ಬಾರಿಯ ಬಜೆಟ್ ನಲ್ಲಿ ಮೂಲಭೂತ ಸೌಕರ್ಯವಲ್ಲದೇ ತಂತ್ರಜ್ಞಾನ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಿದ್ದು, ರಾಜ್ಯ ಸರ್ಕಾರಗಳು 50 ವರ್ಷಗಳ ಅವಧಿವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ ಎಂದು ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ.

First Development India: 50-year interest-free loan to states postponed for one more year!

ಫಸ್ಟ್ ಡೆವಲಪ್ ಇಂಡಿಯಾದಡಿ ಮೂಲಸೌಕರ್ಯ ಅಭಿವೃದ್ಧಿಯತ್ತ ಹೆಚ್ಚು ಒತ್ತು:

2023ರ ಅಕ್ಟೋಬರ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರಿಗೆ ಸಂಪರ್ಕದಲ್ಲಿ ಎದುರಾಗುತ್ತಿರುವ ವೆಚ್ಚ ಕಡಿಮೆ ಮಾಡಲು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಗತಿ ಶಕ್ತಿ ಯೋಜನೆ ಜಾರಿಗೆ ತಂದಿದ್ದರು. ಈ ಮೂಲಕ ಲಾಜಿಸ್ಟಿಕ್ಸ್ ಮತ್ತೆ ಸಂಪರ್ಕ ಮೂಲಸೌಕರ್ಯ ಯೋಜನೆಗಳು ಕನಿಷ್ಠ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಳ್ಳಲಿದೆ ಎಂದು ಘೋಷಿಸಿದ್ದರು.

ಫಸ್ಟ್ ಡೆವಲಪ್ ಇಂಡಿಯಾ ಎಂಬ ಧ್ಯೇಯ ವಾಕ್ಯದೊಂದಿಗೆ ವಿದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ತಂತ್ರಜ್ಞಾನಗಳ ಅಭಿವೃದ್ಧಿ, ರೈಲ್ವೇ ಬೋಗಿಗಳ ಅಭಿವೃದ್ಧಿ ಸೇರಿದಂತೆ ಹಲವು ಉಪಕ್ರಮಗಳನ್ನು ಇದೇ ಯೋಜನೆಯಡಿ ವಿಕಸಿತ ಭಾರತದ ಭವಿಷ್ಯಕ್ಕೆ ಅಡಿಪಾಯ ಹಾಕಲು ಯೋಜನೆ ರೂಪಿಸಲಾಗಿದೆ.

ಇದೀಗ ನಿರ್ಮಾಲಾ ಸೀತಾರಾಮನ್ ಫಸ್ಟ್ ಡೆವೆಲಪ್‌ಮೆಂಟ್ ಇಂಡಿಯಾ ಅಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಮಹತ್ತರ ಬದಲಾವಣೆಗೆ ಕ್ರಮ ಕೈಗೊಂಡಿದ್ದು, ಆಯಾ ರಾಜ್ಯ ಸರ್ಕಾರಗಳು 50 ವರ್ಷ ಬಡ್ಡಿ ರಹಿತ ಸಾಲ ಪಡೆದು ರಾಜ್ಯದಲ್ಲಿನ ಮೂಲಭೂತ ಸೌಕರ್ಯಗಳನ್ನು ಸುಲಭವಾಗಿ ಅಭಿವೃದ್ಧಿಪಡಿಸಬಹುದಾಗಿದೆ.

You might also like
Leave A Reply

Your email address will not be published.