ಅಬುದಾಭಿಯ ನೂತನ ಹಿಂದೂ ಮಂದಿರ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಮುಸ್ಲಿಂ ದೇಶ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ‌ ಸಾಂಪ್ರದಾಯಿಕ ಹಿಂದೂ ಮಂದಿರ “ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆ” (BAPS) ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉದ್ಘಾಟನೆಗೆ ಆಮಂತ್ರಣ ಬಂದಿದ್ದು, ಇದೇ ಬರುವ 2024ರ ಫೆಬ್ರವರಿ 14ರಂದು ಮಂದಿರವು ಲೋಕಾರ್ಪಣೆಗೊಳ್ಳಲಿದೆ.

ನವದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿಯವರ ನಿವಾಸಕ್ಕೆ ಈಶ್ವರ ಚಂದ್ರ ದಾಸ್ ಅವರ ನೇತೃತ್ವದಲ್ಲಿ ತೆರಳಿದ ತಂಡವು ಪ್ರಧಾನಮಂತ್ರಿಯವರನ್ನು ಉದ್ಘಾಟನಾ ಸಮಾರಂಭಕ್ಕೆ ಸಾಂಪ್ರದಾಯಿಕ ಆಮಂತ್ರಣ ನೀಡಿದೆ. ತದನಂತರ ಬಾಪ್ಸ್ ಮಂದಿರ ನೀಡಿದ ಹೇಳಿಕೆಯ ಪ್ರಕಾರ, ಅಬುಧಾಬಿಯ BAPS ಹಿಂದೂ ಮಂದಿರದ ಪರವಾಗಿ, ಪೂಜ್ಯ ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್, ಮತ್ತು ನಿರ್ದೇಶಕರ ಮಂಡಳಿಯೊಂದಿಗೆ, 14 ಫೆಬ್ರವರಿ 2024 ರಂದು ನಟೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಆಹ್ವಾನವನ್ನು ನೀಡಿದರು. ಹಾಗೂ ಪ್ರಧಾನಮಂತ್ರಿ ಶ್ರೀ ಮೋದಿಯವರು ಆಮಂತ್ರಣವನ್ನು ವಿನಯದಿಂದ ಸ್ವೀಕರಿಸಿದ್ದು, ಈ ದೇಗುಲಕ್ಕೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಉತ್ಸಾಹವನ್ನು ತೋರಿಸಿದರು ಎಂದು ಹೇಳಿಕೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2015ರ ಸಾಲಿನಲ್ಲಿ ದುಬೈ (UAE)ಗೆ ಭೇಟಿ ನೀಡಿದ ಸಂದರ್ಭದಲ್ಲಿ UAE ಸರ್ಕಾರವು ಮಂದಿರದ ನಿರ್ಮಾಣಕ್ಕೆ 14 ಎಕರೆ ಜಾಗ ನೀಡಿತ್ತು. ಈ ಮಂದಿರದ ಕಾರ್ಯ 2019 ರಿಂದ ಆರಂಭವಾಗಿದ್ದು, ರಾಜಸ್ಥಾನದ ಪಿಂಕ್ ಸ್ಯಾಂಡ್ ಸ್ಟೋನ್ ಕಲ್ಲುಗಳಿಂದ ಸಾಂಪ್ರದಾಯಿಕ ಹಿಂದು ಮಂದಿರಗಳ ಮಾದರಿಯಲ್ಲೇ ಕಟ್ಟಲಾಗಿದೆ.

ಈ ಮೂಲಕ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಿರ್ಮಾಣವಾದ ಸಂಪ್ರದಾಯಿಕ ಮೊದಲ ಹಿಂದೂ ದೇವಾಲಯ ಇದಾಗಲಿದೆ.

You might also like
Leave A Reply

Your email address will not be published.