2024 Holidays List : ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ

ಕರ್ನಾಟಕ ರಾಜ್ಯ ಸರ್ಕಾರವು 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು (2024 Holidays List) ಈಗಾಗಲೇ ಬಿಡುಗಡೆ ಮಾಡಿದೆ. ನವೆಂಬರ್‌ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. 2ನೇ. 4ನೇ ಹಾಗೂ ಭಾನುವಾರಗಳನ್ನು ಹೊರತುಪಡಿಸಿ 2024ರಲ್ಲಿ 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ ಹಾಗೂ 15 ಪರಿಮಿತ ರಜಾ ದಿನಗಳು ಇರಲಿವೆ.

2024ನೇ ಸಾಲಿನ ರಜಾ ದಿನಗಳ ಪಟ್ಟಿ :

ಈ ರಜಾ ದಿನಗಳ ಪಟ್ಟಿಯಲ್ಲಿ (2024 Holidays List) ಭಾನುವಾರಗಳಂದು ಬರುವ ಡಾ|| ಬಿ.ಆರ್ ಅಂಬೇಡ್ಕರ್ ಅವರ ಜಯಂತಿ (14-04-2024) ಹಾಗೂ ಮಹಾವೀರ ಜಯಂತಿ (21-04-2024) ಮತ್ತು ಎರಡನೇ ಶನಿವಾರದಂದು ಬರುವ ವಿಜಯದಶಮಿ (12-10-2024) ರಜಾ ದಿನಗಳನ್ನು ಈ ಮೇಳಿನ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ.

ಕೊಡಗು ಜಿಲ್ಲೆಗೆ ಮಾತ್ರ 3 ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ಸೇರ್ಪಡೆ (2024 Holidays List) ಮಾಡಲಾಗಿದೆ. ಮುಸ್ಲಿಂ ಸಮುದಾಯದ ಹಬ್ಬಗಳ ನಿಗದಿತ ದಿನಾಂಕದಂದು ಬರದಿದ್ದಲ್ಲಿ, ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

21 ದಿನಗಳ ಸಾರ್ವತ್ರಿಕ ರಜಾ ದಿನಗಳ ಹೊರತಾಗಿ 15 ದಿನಗಳ ಪರಿಮಿತ ರಜೆಯ ಪಟ್ಟಿಯನ್ನು ಸರ್ಕಾರ ಹೊರಡಿಸಿದೆ. ಈ ರಜಾ ದಿನಗಳ ಪಟ್ಟಿಯು ಸರ್ಕಾರಿ ಇಲಾಖೆಗಳು, ಶಾಲಾ/ಕಾಲೇಜುಗಳಿಗೆ ಅನ್ವಯವಾಗಲಿದೆ.

You might also like
Leave A Reply

Your email address will not be published.