ಪ್ರತಾಪ್ ಸಿಂಹ ಸಹೋದರನ ಬಂಧನದ ಸತ್ಯಾಸತ್ಯತೆಯೇನು? ಇಲ್ಲಿದೆ ಪ್ಯಾಕ್ಟ್ ಚೆಕ್

ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕಾಂಗ್ರೆಸ್ ಪಕ್ಷದ ನಾಯಕರುಗಳು ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಗಳಲ್ಲಿ ವೈಯಕ್ತಿಕ ದಾಳಿ ಮಾಡುತ್ತಿರುವುದನ್ನು ಇಡೀ ದೇಶವೇ ಗಮನಿಸುತ್ತಿದೆ. ಈ ಪಟ್ಟಿಗೆ ಇದೀಗ, ಹೊಸದಾಗಿ ಸೇರ್ಪಡೆಯಾಗಿರುವುದು ಅವರ ಸಹೋದರ ವಿಕ್ರಮ್ ಸಿಂಹ.

ರಾಜಕಾರಣ ವಾಗ್ದಾಳಿಯಲ್ಲಿ ರಾಜಕಾರಣಿಗಳು ಹಾಗೂ ಅವರ ಕುಟುಂಬವನ್ನು ಎಳೆದು ತರುವುದು ಹೊಸ ಪ್ರಕರಣವೇನಲ್ಲ. ಆದರೆ, ಸಂಸದ ಪ್ರತಾಪ್ ಸಿಂಹರ ವಿಷಯದಲ್ಲಿ ಮೊದಲ ಬಾರಿಗೆ ಅವರ ಕುಟುಂಬವನ್ನು ಎಳೆದು ತಂದಿರುವುದು ಬಹಳಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ. ಏಕೆಂದರೆ, ಪ್ರತಾಪ್ ಸಿಂಹ ಅವರ ಕುಟುಂಬದ ಬಗ್ಗೆ ಇದುವರೆಗೂ ರಾಜ್ಯದ ಜನತೆಗೆ ಒಂದು ಸಣ್ಣ ಮಾಹಿತಿಯೂ ಇರಲಿಲ್ಲ. ಸಂಸದರ ಸಹೋದರರು ರಾಜಕಾರಣದಲ್ಲಿ ಗುರುತಿಸಿಕೊಳ್ಳದೇ, ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದು, ರಾಜಕಾರಣದಿಂದ ಹೊರಗಡೆಯೇ ಉಳಿದಿದ್ದಾರೆ.

ಇದೀಗ, ಮೊದಲ ಬಾರಿ ಪ್ರತಾಪ್ ಸಿಂಹರ ಸಹೋದರ ವಿಕ್ರಮ್ ಸಿಂಹರ ಹೆಸರನ್ನು ರಾಜಕಾರಣಕ್ಕೆ ಎಳೆದು ತರುವ ಮೂಲ ಸಂಸದ ಪ್ರತಾಪ್ ಸಿಂಹರನ್ನು ಹೆದರಿಸುವ ಅಥವಾ ತಮ್ಮ ಭಯವನ್ನು ವ್ಯಕ್ತಪಡಿಸುವ ಮಾರ್ಗವನ್ನು ಕಾಂಗ್ರೆಸ್ ಕಂಡುಕೊಂಡಂತಿದೆ.

ಕಾಂಗ್ರೆಸ್ ಆರೋಪವೇನು?

ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ಮಾಡುವ ಮೂಲಕ ಮರಗಳ್ಳತನದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್‌ ಇದೇ ಡಿಸೆಂಬರ್‌ 23 ರಂದು ಯಾವುದೇ ದಾಖಲೆಗಳನ್ನು ತೋರಿಸದೇ ಆರೋಪಿಸಿತ್ತು. ಈ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ, ಅವರ ಸುಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಸಿಂಹ ಅವರ ಮೇಲೆ ಮುಗಿಬೀಳುವ ಕೆಲಸ ಮಾಡಿದ್ದರು.

ಸಂಸದ ಪ್ರತಾಪ್‌ ಸಿಂಹರ ಸ್ಪಷ್ಟನೆ ಏನು?

ಕಾಂಗ್ರೆಸ್ ಪಕ್ಷದ ಈ ನಿರಾಧಾರ ಆರೋಪಕ್ಕೆ ಸಂಸದ ಪ್ರತಾಪ್ ಇಂದು ತಿರುಗೇಟು ಕೊಟ್ಟಿದ್ದಾರೆ. ಸಂಸತ್ʼನಲ್ಲಿ ನಡೆದ ಘಟನೆಯನ್ನು ಹಿಡಿದುಕೊಂಡು ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿತ್ತು. ಅವರ ಆರೋಪಕ್ಕೆ ನಾನು ಈಗಾಗಲೇ ಉತ್ತರಕೊಟ್ಟಿದ್ದೇನೆ. ಇದೀಗ, ನನ್ನ ಕುಟುಂಬದ ಮೇಲೆ ತೀರಾ ಅವ್ಯಾಹತ ದಾಳಿ ಮಾಡುತ್ತಿದ್ದಾರೆ. ಪ್ರಸ್ತುತ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. FIR ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಪ್ರಾಥಮಿಕ ವಿಚಾರಣೆಯನ್ನೂ ನಡೆಸಿಲ್ಲ. ಆದಾಗ್ಯೂ, ನನ್ನ ತಮ್ಮನ ಹೆಸರನ್ನು ಸುಖಾಸುಮ್ಮನೆ ಎಳೆದು ತರುವ ಮೂಲಕ ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಕೆಲಸ ಈ ಕಾಂಗ್ರೆಸ್ ಮಾಡುತ್ತಿದೆ.

ನನ್ನ ಸಹೋದರ ವಿಕ್ರಮ್ ಸಿಂಹ ಹಾಗೂ ಇನ್ನೊಬ್ಬ ಸಹೋದರ ಹಾಗೂ ಸಹೋದರಿ ತಮ್ಮ ಜೀವನ ತಾವು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಕೃಷಿಕ ಜೀವನ ನಡೆಸುತ್ತಿದ್ದಾರೆ ಎಂದು ಸಹೋದರರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ವಿಕ್ರಂ ಸಿಂಹರ ಸ್ಪಷ್ಟನೆ ಏನು?

ಕಾಂಗ್ರೆಸ್ʼನ ಈ ಆರೋಪದ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು ‘ಒಂದು ತಿಂಗಳಿನಿಂದ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತೀದ್ದೀರಾ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ಮೂಲಕ ನನ್ನ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತವಾದದ್ದು, ಮರ ಕಡಿದಿರುವುದರ ಹಿಂದೆ ನನ್ನ ಕೈವಾಡವಿಲ್ಲ. ಮರ ಕಡಿದಿರುವ ವಿಚಾರವೇ ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸತ್ಯಾಸತ್ಯತೆ ಏನು?

ಸಂಸದ ಪ್ರತಾಪ್ ಸಿಂಹರ ಸಹೋದರ ವಿಕ್ರಂ ಸಿಂಹ ಅವರು 2024ರ ಜನವರಿ 24 ರಿಂದ ಜುಲೈ 2025ರ ವರೆಗೆ ಶುಂಠಿ ಬೆಳೆಯನ್ನು ಬೆಳೆಯಲು ಭೂಮಿಯನ್ನು ಲೀಸ್ʼಗೆ ಪಡೆದಿದ್ದರು. ಆ ಬಗ್ಗೆ ಕರಾರು ಪತ್ರವನ್ನೂ ಮಾಡಿಸಿಕೊಂಡಿದ್ದಾರೆ. ಆದರೆ, ಈ ಭೂಮಿಯ ಒಡೆಯ ತನ್ನ ಹೊಲ ಸೇರಿದಂತೆ ಅರಣ್ಯ ಪ್ರದೇಶಕ್ಕೆ ಸೇರಿದ ಪ್ರದೇಶದಲ್ಲಿ ಮರ ಕಡಿಸಿದ್ದಾನೆ ಎಂದು ಪೊಲೀಸರು ದಾಖಲಿಸಿದ FIR ನಲ್ಲಿ ಹೇಳಲಾಗಿದೆ. ಈ FIR ನಲ್ಲಿ ಇರುವಂತೆಯೇ, ರಾಕೇಶ ಶೆಟ್ಟಿ ಮತ್ತು ಜಯಮ್ಮ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಸರ್ಕಾರವೇ ದಾಖಲಿಸಿರುವ ಈ FIR ನಲ್ಲಿ ಸಂಸದರ ಸಹೋದರ ವಿಕ್ರಂ ಸಿಂಹರ ಹೆಸರೇ ಇಲ್ಲ. FIR ಪ್ರತಿಯನ್ನು ಈ ಕೆಳಗೆ ಲಗತ್ತಿಸಲಾಗಿದೆ.

ಯತೀಂದ್ರರ ಪಟ್ಟಾಭಿಷೇಕದ ಪೂರ್ವಸಿದ್ಧತೆಯೇ?

ಪತ್ರಕರ್ತರಾಗಿದ್ದ ಪ್ರತಾಪ್‌ ಸಿಂಹ 2014ರ ತಮ್ಮ ಮೊದಲ ಲೋಕಸಭೆ ಚುನಾವಣೆಯಲ್ಲಿಯೇ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಮತಗಳಿಸಿ ವಿಜಯ ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2024ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಈ ಕ್ಷೇತ್ರದಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕು. ಆ ಅಭ್ಯರ್ಥಿ ಸಿದ್ದರಾಮಯ್ಯನವರ ಪುತ್ರ ಯತೀದ್ರ ಸಿದ್ದರಾಮಯ್ಯ ಆಗಿರಬೇಕು ಎನ್ನುವುದು ಸಿದ್ದರಾಮಯ್ಯ ಹಾಗೂ ಇತರೆ ಕಾಂಗ್ರೆಸಿಗರ ಕನಸಾಗಿರುವಂತಿದೆ.

ಈ ಕಾರಣದಿಂದಲೇ ಪ್ರತಾಪ್‌ ಸಿಂಹರ ವಿರುದ್ಧ ಯಾವುದೇ ಗಟ್ಟಿ ಕಾರಣಗಳಿಲ್ಲದೇ ಕಾಂಗ್ರೆಸ್‌ ನಾಯಕರು ಮುಗಿಬೀಳುವ ಕೆಲಸ ಮಾಡುತ್ತಿದ್ದಾರೆ. ಸಂಸತ್‌ʼನಲ್ಲಿ ನಡೆದ ಘಟನೆಯ ಮೇಲೆ ಪ್ರತಾಪ್‌ ಸಿಂಹರನ್ನು ಅಮಾನತು ಮಾಡಬೇಕೆಂದು ಇಡೀ ಕಾಂಗ್ರೆಸ್‌ ಪಕ್ಷವೇ ಹೋರಾಡಿತ್ತು. ಈ ಹೋರಾಟ ವಿಫಲವಾದ ತಕ್ಷಣವೇ ಪ್ರತಾಪ್‌ ಸಿಂಹರ ವೈಯಕ್ತಿಕ ತೇಜೋವಧೆ ಮಾಡಬೇಕು ಎನ್ನುವ ಕಾರಣದಿಂದ ಅವರ ಸಹೋದರನ್ನು ಎಳೆದು ತರುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ.

ಏನಕೇನ 2024 ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್‌ ಸಿಂಹರನ್ನು ಸೋಲಿಸಬೇಕು ಎನ್ನುವ ಕಾರಣವನ್ನಿಟ್ಟುಕೊಂಡು ಪ್ರತಾಪ್‌ ಸಿಂಹರ ಮೇಲೆ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ ಎಂದು ವೈಸೂರು-ಕೊಡಗಿನ ಜನತೆಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

2014ರ ನಂತರ ಸಂಸದರಾದ ಪ್ರತಾಪ್‌ ಸಿಂಹ ಮೈಸೂರು ಹಾಗೂ ಕೊಡಗಿನ ಪ್ರಗತಿಗಾಗಿ ಸಾಕಷ್ಟು ದುಡಿದಿದ್ದಾರೆ. ಕರ್ನಾಟಕದಲ್ಲಿ ಪ್ರಥಮ ವಂದೇ ಭಾರತ್‌ ಎಕ್ಸ್‌ʼಪ್ರೆಸ್‌ ರೈಲು ಬಂದಿದ್ದು ಮೈಸೂರಿಗೆ. ಇಡೀ ಕರ್ನಾಟಕದಲ್ಲಿ ಸುಸಜ್ಜಿತ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿರುವುದು ಬೆಂಗಳೂರು-ಮೈಸೂರು ನಡುವೆ. ಈ ರಸ್ತೆಯಿಂದಾಗಿ ಬೆಂಗಳೂರು ಹಾಗೂ ಮೈಸೂರಿನ ನಡುವಿನ ಅಂತರ ಕೇವಲ 1.5 ತಾಸಿಗೆ ಇಳಿಕೆಯಾಗಿದೆ. ಕೇವಲ 9 ವರ್ಷಗಳಲ್ಲಿಯೇ ಮೈಸೂರಿನ ಕೊಡುಗೆಗೆ ಪ್ರತಾಪ್‌ ಸಿಂಹರ ಕೊಡುಗೆ ಸಾಕಷ್ಟಿದೆ. ರಾಜ್ಯದಲ್ಲಿ ಅತ್ಯಂತ ಕ್ರಿಯಾಶೀಲ, ಅಭಿವೃದ್ಧಿಗಾಗಿ ಸದಾ ಹೋರಾಡುತ್ತಿರುವ ಸಂಸದರೆಂದರೆ ಪ್ರತಾಪ್‌ ಸಿಂಹ ಎಂದು ಇಡೀ ರಾಜ್ಯವೇ ಹೇಳುತ್ತಿದೆ.

ಸಿಎಂ ಸಿದ್ದರಾಮಯ್ಯಗೆ ಚಾಲೆಂಜ್ ಹಾಕಿದ ಪ್ರತಾಪ್‌ ಸಿಂಹ :

ತಮ್ಮ ಮೇಲೆ ಹಾಗೂ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಮಾಡುವ ಮೂಲಕ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ʼಗೆ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಇಡೀ ಕಾಂಗ್ರೆಸ್‌ ಅಭಿವೃದ್ಧಿಯ ವಿಷಯದಲ್ಲಿ ಚರ್ಚೆಗೆ ಬರಲಿ. ಅದಕ್ಕೆ ನಾನು ಸದಾ ಸಿದ್ಧ ಎಂದು ಗರ್ಜಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಮಾಡಿರುವ ಆರೋಪ ಹಾಗೂ ತಾವೇ ಹಾಕಿರುವ FIR ಪ್ರತಿಯಲ್ಲಿ ವಿಕ್ರಂ ಸಿಂಹರ ಹೆಸರು ಇಲ್ಲದ್ದನ್ನು ನೋಡಿದರೇ, ಪ್ರತಾಪ್‌ ಸಿಂಹರ ತೇಜೋವಧೆ ಮಾಡಲು ಈ ರಣತಂತ್ರ ಹೆಣೆದಂತೆ ಭಾಸವಾಗುತ್ತಿದೆ.

You might also like
Leave A Reply

Your email address will not be published.