ರಾಮ ಮಂದಿರ ನೋಡಲು ಹೊರಟಿದ್ದೀರಾ? ಇಲ್ಲಿದೆ ನೋಡಿ ದರ್ಶನದ ವಿಧಿವಿಧಾನ

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನವೇ ಸುಮಾರು 5 ಲಕ್ಷ ಜನರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬೆಳ್ಳಂ ಬೆಳಿಗ್ಗೆ ರಾಮನ ದರ್ಶನಕ್ಕಾಗಿ ಕಾದು ಕೂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಮೊದಲ ದಿನ ರಾಮ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿದ್ದರ ಪರಿಣಾಮ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಲಾಯ್ತು. ಅನೇಕ ಅಡೆತಡೆಗಳು ಎದುರಾದರು ದೇವಾಲಯ ಪ್ರವೇಶಿಸುವಾಗ ಸಂಪೂರ್ಣವಾಗಿ ಪರಿಶೀಲಿಸಿದ ನಂತರವಷ್ಟೇ ಒಳಬಿಡಲಾಯಿತು.

ಇನ್ನೂ ಟ್ರಸ್ಟ್ ವತಿಯಿಂದ ದೇವಾಲಯ ಪ್ರವೇಶಿಸಲು ಕೆಲ ನಿಯಮಗಳು ಹಾಕಿದ್ದು, ದರ್ಶನ ಪಡೆಯಲು ಬರುವ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಮನವಿ ಮಾಡಿದ್ದಾರೆ. ಅವುಗಳೆಂದರೆ,
1. ಮಂದಿರದ ಒಳ ಪ್ರವೇಶಿಸುವಾಗ ನೂಕುನುಗ್ಗಲು ಮಾಡದೇ ಸರದಿಯಲ್ಲಿ ಹೋಗಬೇಕು.
2. ಶಿಸ್ತು, ಸಂಯಮ ಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕು.
3. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಇದಕ್ಕಾಗಿ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭಕ್ತರಿಗೆ ಬಾಲ ರಾಮನ ದರ್ಶನಕ್ಕೆ ಸಮಯ ನಿಗದಿ:

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್ಸೈಟ್ನಲ್ಲಿ ನಿರ್ದಿಷ್ಟ ಸಮಯದ ಸ್ಲಾಟ್ಗಳನ್ನು ಒದಗಿಸಿರುವ ಮಾಹಿತಿ ಇದೆ. ಅದರಂತೆ ನಿತ್ಯ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಆರತಿ ಮತ್ತು ಅಲಂಕಾರ ಸಮಯ:

ಬೆಳಗ್ಗೆ 6:30ಕ್ಕೆ ಆರತಿ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 7:30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ. ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಆರತಿಗಾಗಿ ಪಾಸ್ಗಳನ್ನು ದೊರೆಯಲಿದೆ. ಆಫ್ಲೈನ್ ಪಾಸ್ಗಳು ಶ್ರೀ ರಾಮ ಜನ್ಮಭೂಮಿಯ ಕಚೇರಿಯಲ್ಲಿ ಲಭ್ಯವಿದ್ದು, ಗುರುತಿನ ಪುರಾವೆ ಒದಗಿಸಿ ಪಡೆಯಬಹುದಾಗಿದೆ.

You might also like
Leave A Reply

Your email address will not be published.