ಬೆಸ್ಕಾಂ‌ ಗ್ರಾಹಕರಿಗೂ ದೊರೆಯುತ್ತಿದೆ ಆಕರ್ಷಕ ರಿಯಾಯಿತಿ – ವಿವರಗಳು ಇಲ್ಲಿವೆ ನೋಡಿ!

ಬೆಸ್ಕಾಂ ತನ್ನ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಸುವುದರ ಜೊತೆಗೆ ಹಲವಾರು ಗ್ರಾಹಕಸ್ನೇಹಿ ಸೇವೆಗಳನ್ನು ನೀಡುತ್ತಾ ಬಂದಿದ್ದು, ಮುಂದಿನ ಸುಸ್ಥಿರ ಭವಿಷ್ಯಕ್ಕಾಗಿ ಹಾಗೂ ಜನಸಾಮಾನ್ಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಯಶಸ್ವಿಯಾಗಿದೆ ಮತ್ತು ರಿಯಾಯಿತಿ ಸೌಲಭ್ಯವನ್ನು ಒದಗಿಸುತ್ತಿದೆ.

ಗ್ರಾಹಕರಿಗೆ ನೀಡುತ್ತಿರುವ ರಿಯಾಯಿತಿ ಸೌಲಭ್ಯಗಳು:

ಎಲ್.ಟಿ-5 ಜಕಾತಿಯ ಎಂ.ಎಸ್.ಎಂ.ಇ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೌಲಭ್ಯ:
– ಬೆಸ್ಕಾಂನಿಂದ ಎಲ್.ಟಿ-5 ಗ್ರಾಹಕರಿಗೆ ವಿದ್ಯುತ್ ಶುಲ್ಕದ ಮೇಲೆ ಪ್ರತಿ ಯೂನಿಟ್’ಗೆ 50 ಪೈಸೆಯಷ್ಟು ರಿಯಾಯಿತಿ ಲಭಿಸಲಿದ್ದು. ಅರ್ಜಿಯನ್ನು ಸಲ್ಲಿಸಲು ಬೆಸ್ಕಾಂನ ಉಪವಿಭಾಗಕ್ಕೆ ಭೇಟಿ ನೀಡಬೇಕು.
-ವಿಶೇಷ ಸೂಚನೆ – ಅರ್ಜಿ ಸಲ್ಲಿಸುವ ಗ್ರಾಹಕರು ಭಾರತ ಸರ್ಕಾರದ ಎಂ.ಎಸ್.ಎಮ್.ಇ /ಉದ್ಯಮ್ ಪ್ರಮಾಣಪತ್ರವನ್ನು ಪಡೆದಿರಬೇಕು.

ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಪಾವತಿಸಿ ಮತ್ತು 0.25% ಆಕರ್ಷಕ ರಿಯಾಯಿತಿ:

ಗ್ರಾಹಕರು ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಪಾವತಿಸಿದ್ದಲ್ಲಿ, ವಿದ್ಯುತ್ ಬಿಲ್’ನಲ್ಲಿ 0.25% ರಿಯಾಯಿತಿಯನ್ನು ಈ ಕೆಳಕಂಡ ಸಂದರ್ಭಗಳಲ್ಲಿ ನೀಡಲಾಗುತ್ತದೆ:

– ಮಾಸಿಕ, 100000/-(ಒಂದು ಲಕ್ಷ) ರೂ.ಗಳಿಗೂ ಹೆಚ್ಚಿನ ಮೊಬಲಗಿರುವ ಬಿಲ್’ಗಳನ್ನು ನಿಗದಿತ ದಿನಾಂಕಕ್ಕಿಂತ 10 ದಿನಗಳ ಮುಂಚಿತವಾಗಿ ಪಾವತಿಸಿದಲ್ಲಿ.

– ತಿಂಗಳ ಬಿಲ್ ಮೊತ್ತಕ್ಕೆ ಮುಂಗಡವಾಗಿ ₹1,000 ಕ್ಕಿಂತ ಮೇಲ್ಪಟ್ಟು ಹಣ ಪಾವತಿಸಿದ್ದಲ್ಲಿ.

ಹೆಚ್.ಟಿ ಮತ್ತು ಎಲ್.ಟಿ ಗ್ರಾಹಕರಿಗಾಗಿ-ರಿಯಾಯಿತಿ ವಿದ್ಯುಚ್ಛಕ್ತಿ ದರ ಯೋಜನೆ!

ಹೆಚ್.ಟಿ ಮತ್ತು ಎಲ್.ಟಿ ಗ್ರಾಹಕರ ಮಾಸಿಕ ವಿದ್ಯುತ್ ಬಳಕೆಯಲ್ಲಿನ ಸರಾಸರಿ ಹೆಚ್ಚುವರಿ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್’ಗೆ ₹5 ರಿಯಾಯಿತಿ ವಿದ್ಯುಚ್ಛಕ್ತಿ ದರ (DERS) ಸೌಲಭ್ಯ ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: [email protected]

ಹೆಚ್.ಟಿ ವಿದ್ಯುತ್ ಗ್ರಾಹಕರಿಗೆ ಬೆಸ್ಕಾಂನ ವಿಶೇಷ ಪ್ರೋತ್ಸಾಹ ಯೋಜನೆ (SIS) !-

ಹೆಚ್.ಟಿ ಜಕಾತಿಯ ವಿದ್ಯುತ್ ಗ್ರಾಹಕರಿಗಾಗಿ ಬೆಸ್ಕಾಂ ವಿಶೇಷ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತಂದಿದ್ದು, ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯ ತನಕ ಬಳಸುವ ಹೆಚ್ಚುವರಿ ವಿದ್ಯುತ್ ಗೆ ₹ 1 ರಂತೆ ಹಾಗೂ ರಾತ್ರಿ 10.00 ರಿಂದ ಬೆಳಿಗ್ಗೆ 6 ಗಂಟೆಯ ತನಕ ಬಳಸುವ ವಿದ್ಯುತ್ ಗೆ ₹2 ರಂತೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: [email protected]

ಸೌರಗೃಹ ಯೋಜನೆ!

ಸೌರಘಟಕಗಳನ್ನು ನಿಮ್ಮ ಮನೆಗಳಲ್ಲಿ ಅಳವಡಿಸಿ ಸೌರ ಗೃಹ ಯೋಜನೆಯ ಮೂಲಕ ಆಕರ್ಷಕ ಮೊತ್ತದ ಎಂ.ಎನ್.ಆರ್.ಇ ಸಬ್ಸಿಡಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಉಪವಿಭಾಗ ಕ್ಕೆ ಭೇಟಿ ನೀಡಿ.

ವಿಶೇಷ ಚೇತನರಿಗೆ ರಿಯಾಯಿತಿ ಸೌಲಭ್ಯ!-

ವಿಶೇಷ ಚೇತನರು ಅಥವಾ ದಿವ್ಯಾಂಗರು ನಡೆಸುವ ಎಸ್.ಟಿ.ಡಿ/ಐ.ಎಸ್.ಡಿ/ಫ್ಯಾಕ್ಸ್ ಸೌಲಭ್ಯವಿರುವ ಸಾರ್ವಜನಿಕ ದೂರವಾಣಿ ಬೂತ್’ಗಳಿಗೆ ಮಾಸಿಕ ಬಿಲ್’ನಲ್ಲಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಶುಲ್ಕ ಬಳಕೆಯ ಮೇಲೆ ಶೇ.0.20 ರಷ್ಟು ರಿಯಾಯಿತಿ ಸೌಲಭ್ಯ ಲಭಿಸಲಿದೆ.

ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಉಪವಿಭಾಗಕ್ಕೆ ಭೇಟಿ ನೀಡಿ.

You might also like
Leave A Reply

Your email address will not be published.