Malpe: ಬೋಟ್ ಮುಳುಗಡೆ – 8 ಮೀನುಗಾರರ ರಕ್ಷಣೆ

ಮೀನುಗಾರಿಕಾ ಬೋಟ್ ನ ತಳ ಭಾಗಕ್ಕೆ ವಸ್ತುವೊಂದು ತಗುಲಿ, ನೀರು ಒಳನುಗ್ಗಿದ್ದ ಪರಿಣಾಮವಾಗಿ ಬೋಟ್ ಮುಳುಗಿದ್ದು, ಸುಮಾರು 18 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಬೋಟ್ ನಲ್ಲಿದ್ದ 8 ಮೀನುಗಾರರನ್ನು ರಕ್ಷಿಸಲಾಗಿದೆ.

ಶುಕ್ರವಾರ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ (Malpe) ಈ ದುರ್ಘಟನೆ ನಡೆದಿದ್ದು, ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್ ನವರ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತಾಲೂಕಿ‌ನ ಕಡೆಕಾರಿನ ರಕ್ಷಾ ಅವರಿಗೆ ಸೇರಿದ ಮೀನುಗಾರಿಕಾ ಬೋಟ್ ಅರಬ್ಬೀ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಮುಳುಗಡೆಯಾಗಿದೆ. ಮೀನುಗಾರಿಕಾ ಬೋಟ್ ನ ತಳ ಭಾಗಕ್ಕೆ ವಸ್ತುವೊಂದು ತಗುಲಿ, ಬೋಟಿನ ಒಳಗೆ ನೀರು ಬರಲಾರಂಭಿಸಿದೆ. ಈ ಸಂದರ್ಭ ಬೋಟ್ ನಲ್ಲಿದ್ದವರು ನೀರು ತಡೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು ಯತ್ನ ಕೈಗೂಡಿಲ್ಲ.

ತಕ್ಷಣವೇ ಎಚ್ಚೆತ್ತುಕೊಂಡ ಮೀನುಗಾರರು ವಯರ್ ಲೆಸ್ ಮೂಲಕ ಸಂಪರ್ಕ ಕಲ್ಪಿಸಿ, ಅಪಘಾತ ಸಂಭವಿಸಿದ್ದಾಗಿ ಮಾಹಿತಿ ನೀಡಿ ಸಹಾಯ ಯಾಚಿಸಿದ್ದರು. ರಕ್ಷಣೆ ಕರೆ ಬಂದ ಕಾರಣ, ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್ನವರು ತಕ್ಷಣ ಸ್ಥಳಕ್ಕೆ ಧಾವಿಸಿ ಮೀನುಗಾರರ ರಕ್ಷಣೆ ಮಾಡಿರುವುದು ಅಭಿನಂದನಾರ್ಹ.

You might also like
Leave A Reply

Your email address will not be published.