ಸೀಮಾ ಹೈದರ್ – ಹೆಸರು ನೆನಪಿದೆಯಾ? ಉತ್ತರ ಪತ್ರಿಕೆಯಲ್ಲಿ ಮರಳಿ ಬಂದಿದ್ದಾಳೆ. ಓದಿ

ಕೆಲ ತಿಂಗಳ ಹಿಂದೆ ಈಕೆಯ ಹೆಸರು ಭಾರೀ ಸುದ್ದಿಯಾಗಿದ್ದು, ತನ್ನ ಪ್ರೇಮಿ ಸಚಿನ್ ಗಾಗಿ ಪಾಕಿಸ್ತಾನ ತೊರೆದು ಭಾರತಕ್ಕೆ ಬರುವ ಮೂಲಕ ಗಮನ ಸೆಳೆದಿದ್ದಳು. ಪ್ರೇಮ ಕಥೆ ಮಾಸುತ್ತಿದ್ದಾಗೆ, ಪ್ರಶ್ನೆ ಪತ್ರಿಕೆ ಮೂಲಕ ಪುನಃ ಟ್ರೆಂಡ್ ಆಗುತ್ತಿದ್ದಾಳೆ ಸೀಮಾ ಹೈದರ್!

12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಬರೆದಿರುವ ಕುತೂಹಲಕಾರಿ ವಿಚಾರವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಬಸೇರಿಯಲ್ಲಿರುವ ಬಗ್ತಾರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಉತ್ತರ ಪತ್ರಿಕೆಯಾಗಿದೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆ ಏನು?

ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಮತ್ತು ಅದರ ಉದ್ದದ ಕುರಿತಾಗಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ನೋಡಿದ ಶಿಕ್ಷಕರೇ ಒಂದು ಬಾರಿ ದಂಗಾಗಿ ಹೋಗಿದ್ದು, ಎಲ್ಲರ ಗಮನ ಸೆಳೆದಿದೆ. “ಭಾರತ ಮತ್ತು ಪಾಕಿಸ್ತಾನದ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು” ಎಂದು ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಸದ್ಯ ಈ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣಗಳಲಂತೂ ಭಾರೀ ವೈರಲ್ ಆಗುತ್ತಿದೆ.

You might also like
Leave A Reply

Your email address will not be published.