ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದೀರಾ? ಚಾ.ವಿ.ಸ.ನಿ.ನಿ ತನ್ನ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನಕ್ಕೆ ವಿಧಿಸಲಿದೆ ಕಠಿಣ ಶಿಕ್ಷೆ!

ಚಾ.ವಿ.ಸ.ನಿ.ನಿ ಯು ತನ್ನ ಅತ್ಯುತ್ತಮ ಗ್ರಾಹಕಸ್ನೇಹಿ ಸೇವೆಗಳಿಂದ ಗ್ರಾಹಕರಿಂದ ಪ್ರಶಂಸೆ ಪಡೆದುಕೊಂಡಿದ್ದು, ದತ್ತಾಂಶ ಮತ್ತು ಗುಣಮಟ್ಟದ ಸೇವೆಗಾಗಿ ಐ.ಎಸ್.ಓ 9001:2015 ಮತ್ತು ಮಾಹಿತಿ ಮತ್ತು ಭದ್ರತಾ ನಿರ್ವಹಣೆಗೆ ಐ.ಎಸ್.ಓ 27001:2013 ಪ್ರಮಾಣಪತ್ರವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಇವುಗಳಲ್ಲದೇ, ತನ್ನ ಗ್ರಾಹಕರಿಗಾಗಿ ಕ್ಯೂ ಆರ್ ಕೋಡ್ ಮತ್ತು ವೆಬ್’ಸೈಟ್ ಮೂಲಕ ವಿದ್ಯುತ್ ಬಿಲ್ ಪಾವತಿಸುವ ಸೇವೆಯನ್ನು ಕೂಡ ಒದಗಿಸಿದೆ. ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಪಾವತಿಸಿದಲ್ಲಿ ವಿದ್ಯುತ್ ಬಿಲ್ ನಲ್ಲಿ 0.25 ರಷ್ಟು ರಿಯಾಯಿತಿ, ಕೃಷಿಕರ ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ 7 ಗಂಟೆಗಳ 3 ಫೇಸ್ ವಿದ್ಯುತ್ ಪೂರೈಕೆ, ಹೀಗೆ ಹಲವಾರು ಸೇವೆಗಳನ್ನು ಗ್ರಾಹಕರಿಗೆ ನಿಡುತ್ತಾ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದು, ವಿದ್ಯುತ್ ಕಳ್ಳತನ ಮಾಡುವುದು ದಿನೇ ದಿನೇ ಹೆಚ್ಚುತ್ತಿದ್ದು, ಚಾ.ವಿ.ಸ.ನಿ.ನಿ ಯ ಅಧಿಕೃತ ವಿದ್ಯುತ್ ಸಂಪರ್ಕ ಪಡೆಯಬೇಕಾಗಿ ಹಲವಾರು ಬಾರಿ ಗ್ರಾಹಕರಿಗೆ ಎಚ್ಚರಿಸಲಾಗಿದೆ. ವಿದ್ಯುತ್ ಜಾಲದಿಂದ ಅಕ್ರಮವಾಗಿ ವಿದ್ಯುತ್ ಪಡೆಯುವುದು ಅಪರಾಧವಾಗಿದ್ದು ವಿದ್ಯುತ್ ಕಳ್ಳತನ ಮಾಡಿದವರಿಗೆ ಶಿಕ್ಷೆ ಮತ್ತು ದಂಡವನ್ನೂ ವಿಧಿಸಲಾಗುತ್ತಿದೆ.

ಗ್ರಾಹಕರಿಗೆ ವಿವಿಧ ಕಾಮಗಾರಿಗಳಿಗೆ ಅಥವಾ ಯಾವುದೇ ಸಮಾರಂಭಗಳಿಗೆ ವಿದ್ಯುತ್ ಅವಶ್ಯಕತೆಯಿದ್ದಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದು ಅಪರಾಧವಾಗಿದ್ದು, ವಿದ್ಯುತ್ ಅವಶ್ಯಕತೆಯಿದ್ದಲ್ಲಿ ಚಾ.ವಿ.ಸ.ನಿ.ನಿ ಯ ಉಪವಿಭಾಗ ಕಚೇರಿ ಭೇಟಿ ನೀಡಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಚಾ.ವಿ.ಸ.ನಿ.ನಿ ಯು ತೀವ್ರವಾಗಿ ಪರಿಗಣಿಸಿದ್ದು, ಚಾ.ವಿ.ಸ.ನಿ.ನಿ ಯ ವಿಶೇಷ ಜಾಗೃತದಳವು ವಿದ್ಯುತ್ ಕಳ್ಳತನದ ಮಾಡುವವರ ವಿರುದ್ಧ ಕಾರ್ಯಚರಣೆ ನಡೆಸುತ್ತಿದೆ. ಚಾ.ವಿ.ಸ.ನಿ.ನಿ ಕಾರ್ಯವ್ಯಾಪ್ತಿಯ 5 ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಮತ್ತು ಹಾಸನ, ಮಡಿಕೇರಿಯಲ್ಲಿ ವಿಶೇಷ ಜಾಗೃತದಳವಿದ್ದು, ಅಕ್ರಮ ವಿದ್ಯುತ್ ಬಳಕೆ ಮಾಡುವವರನ್ನು ಪತ್ತೆಹಚ್ಚಿ, ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಭಾರತೀಯ ವಿದ್ಯುತ್ ಕಾಯ್ದೆ 2003 ರ ಅಡಿಯಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡವನ್ನು ಚಾ.ವಿ.ಸ.ನಿ.ನಿ ಯು ವಿಧಿಸುತ್ತಿದೆ.

ಏಪ್ರಿಲ್ – ಅಕ್ಟೋಬರ್ ವರೆಗಿನ ವಿದ್ಯುತ್ ಕಳ್ಳತನ ಪ್ರಕರಣದ ಅಂಕಿ- ಅಂಶಗಳು:

ತಪಾಸಣೆ ನಡೆಸಿದ ಒಟ್ಟು ಸ್ಥಾವರಗಳು- 6857

ದಾಖಲಿಸಲಾದ ಒಟ್ಟು ವಿದ್ಯುತ್ ಪ್ರಕರಣಗಳು – 1438

ವಿಧಿಸಲಾದ ಒಟ್ಟು ದಂಡದ ಮೊತ್ತ- 5,57,70,140

ಯಾವುದೇ ರೀತಿಯ ವಿದ್ಯುತ್ ಕಳ್ಳತನ ಕಂಡುಬಂದಲ್ಲಿ , ಚಾ.ವಿ.ಸ.ನಿ.ನಿ ಯ ಜಾಗೃತದಳದ ಎಸ್.ಪಿ ಸಂಪರ್ಕ ಸಂಖ್ಯೆ 9448499964 /0821-2342707 ಅಥವಾ ಚಾ.ವಿ.ಸ.ನಿ.ನಿ ಯ 24 x7 ಸಹಾಯವಾಣಿ 1912 ಕ್ಕೆ ಕರೆಮಾಡಿ.

You might also like
Leave A Reply

Your email address will not be published.