ಕುವೆಂಪು ವಿವಿ ವೆಬ್‌ಸೈಟ್ ಹ್ಯಾಕ್ – ಕಿಡಿಗೇಡಿಗಳ ಕೃತ್ಯ

ರಾಜ್ಯದ ಅಧಿಕೃತ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್ ಆಗಿರುವ ಘಟನೆ ಬುಧವಾರ ತಡರಾತ್ರಿ ಬೆಳಕಿಗೆ ಬಂದಿದ್ದು, ಈ ಹಿಂದೆಯೂ ಒಮ್ಮೆ ಹ್ಯಾಕರ್ಸ್’ಗಳು ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದರು.

ಕಲೀಮ ಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದ್ದು, ಸೇವ್ ಪ್ಯಾಲೆಸ್ಟೈನ್ – ಇಸ್ರೇಲ್ ಡಾಗ್ ಎಂದು ವೆಬ್‌ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಈ ಕೃತ್ಯವನ್ನು ಪ್ರೋ ಪ್ಯಾಲೆಸ್ಟೈನ್ ಎಸಗಿದೆ ಎಂದು ತಿಳಿಸಲಾಗಿದೆ.

ಹ್ಯಾಕ್ ಬಳಿಕ ವಿವಿ ತಾಂತ್ರಿಕ ತಂಡ ವೆಬ್‌ಸೈಟ್ ಅನ್ನು ಸ್ಥಗಿತಗೊಳಿಸಿದ್ದು, ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ತನಿಖೆಯಾದ ಬಳಿಕವಷ್ಟೇ ಹ್ಯಾಕ್ ಮಾಡಿರುವವರ ಕುರಿತಾದ ವಿವರಗಳು ತಿಳಿಯಲಿದೆ. ಈ ಹಿಂದೆಯೂ ಕುವೆಂಪು ವಿವಿ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದು, ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಜೊತೆಗೆ ಸೆಕ್ಯುರಿಟಿ ಈಸ್ ಜಸ್ಟ್ ಫ್ಯಾಂಟಸಿ ಎಂಬ ಘೋಷಣೆಗಳನ್ನು ಹಾಕಿದ್ದರು.

You might also like
Leave A Reply

Your email address will not be published.