ವ್ಯಕ್ತಿಯ ಜೀವನವನ್ನು ಬದಲಾಯಿಸಿದ ಬರ್ಗರ್ – ಈ ಸ್ಟೋರಿ ಓದಿ

ಐಟಿ ಉದ್ದಿಮೆ ಬಿಟ್ಟು 20 ಸಾವಿರ ರೂ. ಬಂಡವಾಳ ಹಾಕಿದ ಈತ ಇದೀಗ 100 ಕೋಟಿ ರೂ. ಕಂಪನಿ ಒಡೆಯ! ಪಕ್ಕಾ ದೇಸಿಯ ಸ್ವಾದ ಹೊಂದಿರುವ ಗ್ರಿಲ್ಡ್ ಬರ್ಗರ್ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸುತ್ತಿರುವ ಭಾರತೀಯ ಬ್ರ್ಯಾಂಡ್ ಯಾವುದು? ಅಂತರಾಷ್ಟ್ರೀಯ ಬ್ರ್ಯಾಂಡ್ ಗಳೊಂದಿಗೆ ಪೈಪೋಟಿ ನೀಡುತ್ತಿರುವ ಈ ವ್ಯಕ್ತಿ ಯಾರು? ಈ ವ್ಯಕ್ತಿಯ ಜೀವನ ಪ್ರಸ್ತುತತೆಯಲ್ಲಿ ಉದ್ಯಮಿಯಾಗಲು ಬಯಸುವವರಿಗೆ ಸ್ಪೂರ್ತಿದಾಯಕ!

ಬರ್ಗರ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ವ್ಯಕ್ತಿ ಯಾರು?
“ಬಿರಾಜ್ ರೌತ್” ಆತನ ಹೆಸರು. ನಾವಂದು ಕೊಂಡಂತೆ ಈತನ ಜೀವನವೇನು ಅಷ್ಟು ಸುಲಭವಾಗಿರಲಿಲ್ಲ. ನಮ್ಮಂತೆಯೇ ಆತನು ಕೂಡ ಸಾಮಾನ್ಯ ಮನುಷ್ಯ. ಭುವನೇಶ್ವರ್ ಸಮೀಪದ ಪುಟ್ಟ ಹಳ್ಳಿಯೊಂದರಿಂದ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದಿದ್ದರು.

21ನೇ ವಯಸ್ಸಿನವರೆಗೂ ಬರ್ಗರ್ ನೋಡಿಯೇ ಇರಲಿಲ್ಲ:
ತಮ್ಮ 21 ನೇ ವರ್ಷದಲ್ಲಿ ಇನ್ಫೋಸಿಸ್ ಕಂಪನಿಯ ಐಟಿ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಯವರೆಗೂ ಬರ್ಗರ್ ರುಚಿ ಕಾಣದ ಈತ ಮೊದಲ ಭಾರಿಗೆ ಬರ್ಗರ್ ತಿನ್ನುತ್ತಾರೆ. ಅದರ ರುಚಿಯನ್ನು ಸವಿಯಲು ಪದೇ ಪದೇ ಮೆಕ್ ಡೋನಾಲ್ಡ್ ಮತ್ತು ಕೆ.ಎಫ್.ಸಿ ಗೆ ಭೇಟಿ ನೀಡುತ್ತಾರೆ.

ಹೀಗೆ ಅವರೊಮ್ಮೆ ಬರ್ಗರ್ ತಿನ್ನುವಾಗ, ಮೆಕ್ಡೊನಾಲ್ಡ್ಸ್ ಮತ್ತು ಕೆಎಫ್ಸಿಯಂತಹ ವಿದೇಶಿ ಬ್ರ್ಯಾಂಡ್ಗಳು ಮಾತ್ರ ಬರ್ಗರ್ ಗಳನ್ನು ತಯಾರಿಸುತ್ತಿದ್ದು, ಇವುಗಳಿಗೆ ಯಾವುದೇ ಭಾರತೀಯ ಸ್ವದೇಶಿ ಬ್ರಾಂಡ್ ಇಲ್ಲ ಎಂಬುದನ್ನು ಅರಿತುಕೊಂಡರು.

ಬರ್ಗರ್ ಶಾಪ್ ಆರಂಭಿಸಲು 20,000 ಹೂಡಿಕೆ:
ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಇವರು ಬರ್ಗರ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಯೂಟ್ಯೂಬ್ ಮೂಲಕ ಬರ್ಗರ್ ಗಳನ್ನು ಸಿದ್ಧಪಡಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು.

ಸಮಯ ವ್ಯರ್ಥ ಮಾಡದೇ ಕೇವಲ 20,000 ಹೂಡಿಕೆಯೊಂದಿಗೆ ಬೆಂಗಳೂರಿನ ಇನ್ಫೋಸಿಸ್ ಕಚೇರಿಯ ಬಳಿಯಲ್ಲೇ ಸಣ್ಣ ಕಿಯೋಸ್ಕ್ ಎಂಬ ಹೆಸರಿನಲ್ಲಿ ಶಾಪ್ ತೆರೆದರು. ಕಡಿಮೆ ಬೆಲೆ, ವಿಭಿನ್ನ ರುಚಿ ಹಾಗೂ ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿದ ಬಿರಾಜ್ ಬರ್ಗರ್ ಗಳನ್ನು ಮಾರಾಟ ಮಾಡಲಾರಂಭಿಸಿದರು. ಕ್ರಮೇಣ ಜನರ ಬಾಯಿಯಿಂದ ಬಾಯಿಗೆ ಇವರ ಬರ್ಗರ್ ಶಾಪ್ ಮಾಹಿತಿ ವರ್ಗಾವಣೆಗೊಂಡು ದೊಡ್ಡ ಪ್ರಮಾಣದಲ್ಲಿ ಗ್ರಾಹಕರು ಬರಲು ಪ್ರಾರಂಭಿಸಿದರು.

ಇನ್ಫೋಸಿಸ್ ಸಂಸ್ಥೆಗೆ ರಾಜೀನಾಮೆ ನೀಡಿದ ಬಿರಾಜ್:
ಬರ್ಗರ್ ಶಾಪ್ ತೆರೆದ ಬಳಿಕ ಅವರ ಅಚಲವಾದ ಉತ್ಸಾಹ ಮತ್ತು ಸಂಕಲ್ಪವು ನಿಧಾನವಾಗಿ ಉದ್ಯಮ ಬೆಳೆಯಲು ಪ್ರಾರಂಭಿಸಿತು. ಈ ಉದ್ಯಮಕ್ಕಾಗಿ ಬಿರಾಜ್ ಇನ್ಫೋಸಿಸ್ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.

14 ರಾಜ್ಯಗಳ 28 ನಗರಗಳಲ್ಲಿ 130 ಶಾಖೆಗಳು:
ಬಿರಾಜ್ ಅವರ ‘ಬಿಗ್ಗೀಸ್ ಬರ್ಗರ್’ ಬೆಂಗಳೂರಿನಾದ್ಯಂತ ಹರಡಲಾರಂಭಿಸಿತು. ಬಳಿಕ ಇತರ ರಾಜ್ಯಗಳ ವಿವಿಧ ನಗರಗಳಲ್ಲಿ ಕೂಡ ಇದರ ಶಾಖೆಗಳು ಪ್ರಾರಂಭವಾದವು.

ಪ್ರಸ್ತುತತೆಯಲ್ಲಿ ‘ಬಿಗ್ಗೀಸ್ ಬರ್ಗರ್’ ದೇಶದ 14 ರಾಜ್ಯಗಳ 28 ನಗರಗಳಲ್ಲಿ ಒಟ್ಟು 130 ಶಾಖೆಗಳನ್ನು ಹೊಂದಿದೆ. ಈ ತನಕ 50 ಲಕ್ಷಕ್ಕೂ ಅಧಿಕ ಬರ್ಗರ್ ಗಳನ್ನು ಈ ಸಂಸ್ಥೆ ಮಾರಾಟ ಮಾಡಿದೆ. 2023ನೇ ಸಾಲಿನಲ್ಲಿ ಈ ಸಂಸ್ಥೆ 100 ಕೋಟಿ ರೂ ಆದಾಯ ಗಳಿಸಿರುವುದು ವಿಶೇಷನಿಯ. 2024ರಲ್ಲಿ ‘ಬಿಗ್ಗೀಸ್ ಬರ್ಗರ್’ ಶಾಪ್ ಗಳನ್ನು 350ಕ್ಕೆ ಹೆಚ್ಚಿಸುವ ಗುರಿಯನ್ನು ಬಿರಾಜ್ ಹೊಂದಿದ್ದಾರೆ.

ನಾವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಣ್ಣ ಕಿಯೋಸ್ಕ್ ಆಗಿ ಶಾಪ್ ಪ್ರಾರಂಭಿಸಿದ್ದು, ಅಲ್ಲಿ ನಮ್ಮ ಗ್ರಿಲ್ಡ್ ಬರ್ಗರ್ಗಳನ್ನು ಮಾರಾಟ ಮಾಡಲಾರಂಭಿಸಿದ್ದೆವು. ಹಾಗೂ ಬರ್ಗರ್ ನ ರುಚಿಗೆ ನಿರಂತರವಾಗಿ ಗ್ರಾಹಕರು ಬರಲಾರಂಭಿಸಿದರು. ನಾವು ಕೂಡ ನಮ್ಮ ರೆಗ್ಯೂಲರ್ ಗ್ರಾಹರನ್ನು ಮತ್ತಷ್ಟು ಹಿಡಿದಿಟ್ಟುಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಹಾಗೂ ಆಧುನಿಕತೆಯ ಮಾರುಕಟ್ಟೆಗೆ ತಕ್ಕಂತೆ ಹೊಸ ಹೊಸ ಶೈಲಿಯಲ್ಲಿ ವಿಭಿನ್ನವಾಗಿ ಗ್ರಾಹಕರಿಗೆ ರುಚಿ ತರಿಸುವತ್ತ ಗಮನಹರಿಸುತ್ತಿದ್ದೆವು ಎಂದು ರಾವುತ್ ಹೇಳಿದರು.

You might also like
Leave A Reply

Your email address will not be published.