Kangana Ranaut : ಖ್ಯಾತ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿ – ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಗೊತ್ತಾ?

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) 2024ರ ಲೋಕಸಭಾ ಚುನಾವಣೆಯಲ್ಲಿ (Lokasabha Election 2024) ಸ್ಪರ್ಧಿಸ್ತಾರೆ ಎನ್ನುವ ಸುದ್ದಿ ನಿಜವಾಗಿದೆ.

ನಟಿ ಕಂಗನಾ ರಣಾವತ್ (Kangana Ranaut) ಹಿಮಾಚಲ ಪ್ರದೇಶದ ಮನಾಲಿಯ ಕುಲುವಿನ ತಮ್ಮ ಮನೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ಬೆನ್ನಲ್ಲೇ, ಈ ಬಗ್ಗೆ ಚರ್ಚೆ ಆರಂಭವಾಗಿತ್ತು. ಇದೀಗ ಈ ಚರ್ಚೆಗೆ ಕಂಗಾನರ ತಂದೆ ತಿಲಾಂಜಲಿ ಹಾಡಿದ್ದು, ಕಂಗನಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಂಗನಾ ರಣಾವತ್ (Kangana Ranaut) ಹಾಗೂ ಜೆ.ಪಿ ನಡ್ಡಾರ (JP Nadda) ಮುಖಾಮುಖಿ ಭೇಟಿಯಾಗಿತ್ತು. ಈ ಬಗ್ಗೆ ಮಾತನಾಡಿರುವ ಕಂಗನಾರ ತಂದೆ ಮನೋಹರ್, ʼಕಂಗನಾ ರಣಾವತ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಯಾವ ಕ್ಷೇತ್ರದಿಂದ ಎನ್ನುವ ಬಗ್ಗೆ ಇನ್ನೂ ನಿಗದಿಯಾಗಿಲ್ಲ. ಬಿಜೆಪಿಯೇ ಈ ಬಗ್ಗೆ ನಿರ್ಧರಿಸಲಿದೆ ಎಂದಿದ್ದಾರೆ.ʼ

ಕಂಗನಾ ರಣಾವತ್ (Kangana Ranaut) ಆರಂಭದಿಂದಲೇ ಬಲಪಂಥೀಯ ವಿಚಾರ ಧಾರೆಗಳಿಂದಲೇ ಗುರುತಿಸಿಕೊಂಡವರು. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ ನಡೆದ ಆರ್ʼಎಸ್ʼಎಸ್ʼನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಜೆ.ಪಿ ನಡ್ಡಾರನ್ನು ಭೇಟಿಯಾಗಿದ್ದರು. ಈ ವೇಳೆಯೇ ಈಕೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ಸುಳಿವು ದೊರೆತಿತ್ತು. 2020ರಲ್ಲಿ ಎನ್‌ʼಡಿಎ ಮೈತ್ರಿಕೂಟ ತೊರೆದು ಕಾಂಗ್ರೆಸ್ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಗಾದಿಯೇರಿದ್ದ ಉದ್ದವ್ ಠಾಕ್ರೆ (Uddhav Thackeray) ಮೇಲೂ ಮುಗಿಬಿದ್ದಿದ್ದರು. ಈ ವೇಳೆ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಮತ್ತು ಕಂಗನಾ ರಣಾವತ್ ಮಧ್ಯೆ ಟಾಕ್ ವಾರ್ ಆಗಿದ್ದನ್ನು ಇಡೀ ದೇಶವೇ ಗಮನಿಸಿದೆ. ಇದಾದ ಮೇಲೆ ಕಂಗನಾ ರಣಾವತ್ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದರು.

ಮಂಡಿ ಲೋಕಸಭಾ ಕ್ಷೇತ್ರದ (Mandi Lokasabha Assembly) ಸರಹಾನ್ ಗ್ರಾಮದ ಮೂಲದವರಾದ ಕಂಗನಾ ರಣಾವತ್ ತಮ್ಮ ಸ್ವಂತ ಮಂಡಿ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

You might also like
Leave A Reply

Your email address will not be published.