IPL Auction : ಸಂಚಲನ ಸೃಷ್ಟಿಸುತ್ತಿರುವ ಸನ್ ರೈಸರ್ಸ್ ತಂಡದ ಮಾಲಕಿ ಯಾರು? ಅವರ ಆಸ್ತಿಯೆಷ್ಟು?

2024ನೇ ಸಾಲಿನ 17ನೇ ಐಪಿಎಲ್ ಸೀಸನ್ʼಗೆ ದುಬೈನ ಕೋಕಕೋಲಾ ಅರೇನಾದಲ್ಲಿ ನಡೆದ ಮಿನಿ ಐಪಿಎಲ್ ಹರಾಜು ಹಲವು ದಾಖಲೆಗಳನ್ನು ಬರೆದಿದೆ. ಈ ನಡುವೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಚಂದುಳ್ಳಿ ಚೆಲುವೆ ಸನ್ ರೈಸರ್ ಹೈದ್ರಾಬಾದ್ (SRH)ತಂಡದ ಸಹ ಮಾಲಕಿ ಕಾವ್ಯ ಮಾರನ್(Kavya Maran) ಪ್ರೇಕ್ಷಕರ ಹೃದಯ ಕೋಟೆಗೆ ಲಗ್ಗೆ ಹಾಕಿದ್ದಾರೆ.

2023ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರನ್ನು ಬರೋಬ್ಬರಿ 20.50 ಕೋಟಿಗೆ ಖರೀದಿಸಿದ್ದ ಕಾವ್ಯ ಮಾರನ್ (Kavya Maran) ಕ್ರಿಕೆಟಿಗರ ಗಮನವನ್ನು ತಮ್ಮತ್ತ ಸೆಳೆದಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಪೂರ್ತಿ ಲವಲವಿಕೆಯಿಂದಲೇ ಭಾಗವಹಿಸಿದ್ದ ಕಾವ್ಯ ಮಾರನ್ (Kavya Maran) ನೋಟಕ್ಕೆ ಕ್ರೀಡಾಭಿಮಾನಿಗಳು ಮನಸೋತದ್ದಂದೂ ಸುಳ್ಳಲ್ಲ.

ಶ್ರೀಲಂಕಾ ಕ್ರಿಕೆಟಿಗ ವನಿಂದ ಹಸರಂಗರನ್ನು ಮೂಲ ಹಣ (ಬೇಸ್ ಪ್ರೈಸ್) 1.5 ಕೋಟಿ ರೂ.ಗಳಿಗೆ ಖರೀದಿಸಿದಾಗ ಸಂತೋಷದಿಂದ ಬೀರಿದ ನಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯಾರು ಈ ಕಾವ್ಯ ಮಾರನ್(Kavya Maran)?

ಕಾವ್ಯ ಮಾರನ್ (Kavya Maran) ಸನ್ ರೈಸರ್ಸ್ ಹೈದ್ರಾಬಾದ್ (SRH) ತಂಡದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಓ) ಆಗಿದ್ದಾರೆ. ಸನ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷರಾದ ಕಲಾನಿಧಿ ಮಾರನ್ (KalaNidhi Maran) ಅವರ ಏಕೈಕ ಪುತ್ರಿಯೂ ಆಗಿದ್ದಾಳೆ. ಹಲವು ಮಾಧ್ಯಮ ವರದಿಗಳ ಪ್ರಕಾರ ಕಲಾನಿಧಿ ಮಾರನ್ ಅವರ ಜೊತೆಗೆ ಕಾವ್ಯ ಕಲಾನಿಧಿ ಮಾರನ್ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಸಹ ಮಾಲಕರಾಗಿದ್ದಾರೆ. ಇವರನ್ನು 2018 ರಲ್ಲಿ ಎಸ್ʼಆರ್ʼಹೆಚ್ (SRH) ಪ್ರಾಂಚೈಸಿಯ ಸಿಇಓ ಆಗಿ ನೇಮಕ ಮಾಡಲಾಗಿತ್ತು.

ಕಾವ್ಯ ಮಾರನ್ (Kavya Maran) ಕುಟುಂಬ :

ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ʼನ ಮಾಲೀಕ. ತಾತ ಮುರಸೋಲಿ ಮಾರನ್ ಅವರು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕಪ್ಪ ದಯಾನಿಧಿ ಮಾರನ್ ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಅಲ್ಲದೇ, ಕಾವ್ಯ ಮಾರನ್ ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಆಪ್ತ ಬಂಧುವರ್ಗದವರಾಗಿದ್ದಾರೆ.

ಕಾವ್ಯ ಮಾರನ್ (Kavya Maran) ವಿದ್ಯಾರ್ಹತೆ :

ಚೆನ್ನೈನ ಸ್ಟೆಲ್ಲ ಮೆರಿಸ್ ಕಾಲೇಜಿನಿಂದ ಕಾಮರ್ಸ್ ಪದವಿ ಹಾಗೂ ಇಂಗ್ಲೆಂಡ್ʼನ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್ʼನಿಂದ Master Of Business Administration (MBA) ಪದವಿ ಪಡೆದಿದ್ದಾರೆ.

ಕಾವ್ಯ ಮಾರನ್(Kavya Maran) ಆದಾಯ ಎಷ್ಟು ಗೊತ್ತೇ?

ಜನ್ ಭಾರತ್ ಟೈಮ್ಸ್ ಪ್ರಕಾರ ಕಾವ್ಯ ಮಾರನ್ ಅವರ ವಾರ್ಷಿಕ ಆದಾಯ ರೂ. 409 ಕೋಟಿಯಾಗಿದೆ. ಅವರ ತಂದೆ ಕಲಾನಿಧಿ ಮಾರನ್ ಅವರ ವಾರ್ಷಿಕ ಆದಾಯ ರೂ. 19,000 ಕೋಟಿ ಎಂದು ಹೇಳಲಾಗಿದೆ. ದಕ್ಷಿಣ ಭಾರತದಲ್ಲಿ ಕೇಂದ್ರೀಕೃತವಾಗಿರುವ ಸನ್ ಟಿವಿ ನೆಟ್ʼವರ್ಕ್ʼನ ವಾರ್ಷಿಕ ಆದಾಯ ರೂ.1,160.21 ಕೋಟಿ ರೂ. ಆಗಿದೆ.

You might also like
Leave A Reply

Your email address will not be published.