3 ಸಾವಿರ ವರ್ಷಗಳಷ್ಟು ಹಳೆಯ ವಿಗ್ರಹದ ತಲೆಯಲ್ಲಿ ಕ್ಯೂಆರ್ ಕೋಡ್ ಪತ್ತೆ!

ಮಾಯನ್ ನಾಗರೀಕತೆಯ ಕಾಲಘಟ್ಟಕ್ಕೆ ಸೇರಿದ ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ವಿಗ್ರಹವೊಂದರ ಮುಖದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಬಳಸುವ ಕ್ಯೂಆರ್ ಕೋಡ್ ರಚನೆ ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪೋಸ್ಟ್ ಹಲವರಲ್ಲಿ ಹಲವು ತರಹದ ಗೊಂದಲಗಳಿಗೆ ಜಾಗ ಮಾಡಿಕೊಟ್ಟಿದ್ದು, ಇಂದು ನಾವು ಬಳಸುವ ಕ್ಯೂಆರ್ ತಂತ್ರಜ್ಞಾನವೂ 3000 ವರ್ಷಗಳಷ್ಟು ಹಳೆಯದಾದ ಒಂದು ಮೂರ್ತಿಯ ತಲೆ ಮೇಲೆ ಇತ್ತೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ಮತ್ತಷ್ಟು ಜನ ಮಾಯಾ ನಾಗರೀಕತೆಯು ಕೆಲವು ಪ್ರಮುಖ ವಿಚಾರಗಳಿಗೆ ಇಂತಹ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇಲ್ಲಿ ಟೈಮ್ ಟ್ರ್ಯಾವೆಲ್ ನಡೆದಿದ್ಯಾ ಅಥವಾ ಅನ್ಯಗ್ರಹ ಜೀವಿಗಳು ಕೊಡುತ್ತಿರುವ ಎಚ್ಚರಿಕೆನ? ಎಂಬುದಾಗಿ ಹಂಚಿಕೊಂಡಿದ್ದಾರೆ.

ಅದೇನೆ ಇರಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಈಗಾಗಲೇ ಕಳೆದ ನಾಲ್ಕೈದು ವರ್ಷಗಳಿಂದೆಯು ಕೆಲವರು ಪೋಸ್ಟ್ ಮಾಡಿದ್ದರು. ಆದರೆ ಇತ್ತೀಚೆಗೆ ಈ ಫೋಟೋ ಹೆಚ್ಚು ಶೇರ್ ಆಗುತ್ತಿದ್ದು, ಸಾಕಷ್ಟು ಚರ್ಚೆಯು ನಡೆಯುತ್ತಿದೆ.

You might also like
Leave A Reply

Your email address will not be published.