Whatsapp: ಡಿಲೀಟ್ ಆದ ಮೆಸೇಜ್ ನೋಡಲು ಥರ್ಡ್ ಪಾರ್ಟಿ ಆ್ಯಪ್’ಗಳಿಗೆ ಹಾಕಿ ಬ್ರೇಕ್

ವಿಶ್ವದಲ್ಲೇ 2000 ಮಿಲಿಯನ್’ಗೂ ಅಧಿಕ ಗ್ರಾಹಕರನ್ನು ಹೊಂದಿರುವ Meta ದ ಅತೀ ಜನಪ್ರಿಯ Instant Messaging platform ಆದ ವಾಟ್ಸ್ಆ್ಯಪ್ ಪ್ರಸ್ತುತತೆಗೆ ತಕ್ಕಂತೆ ಹೊಸ ಹೊಸ ಬಗೆಯ ವಿಶೇಷ ಫೀಚರ್ಸ್’ಗಳನ್ನು ಪರಿಚಯಿಸುತ್ತಲೇ ಬಂದಿದೆ. ಮೆಸೆಂಜಿಗ್ ಫ್ಲಾಟ್’ಫಾರ್ಮ್’ಗಳಲ್ಲಿ ಬೇರೆ ಬೇರೆ ಆ್ಯಪ್’ಗಳು ಅದೆಷ್ಟೆ ಪರಿಣಾಮ ಬೀರಿದರೂ, ವಾಟ್ಸ್ಆ್ಯಪ್ ಮಾತ್ರ ತನ್ನ ವೈಶಿಷ್ಟ್ಯ, ಗುಣಮಟ್ಟವನ್ನು ಎಲ್ಲೂ ಕಳೆದುಕೊಂಡಿಲ್ಲ.

ವಾಟ್ಸ್ಆ್ಯಪ್ ಅಲ್ಲಿ ಯಾರಾದರು ಮೆಸೇಜ್ ಮಾಡಿ ನಾವು ನೋಡುವುದಕ್ಕೂ ಮುಂಚೆಯೇ ಡಿಲೀಟ್ ಮಾಡಿದ್ರೆ ಅದು ಏನು? ನಾವು ಹಾಕಿರುವ ಡಿಪಿ ಅನ್ನು ಯಾರೆಲ್ಲ ನೋಡಿದ್ದಾರೆ? ಹೀಗೆ ಬಳಕೆದಾರರಿಗೆ ಬೇಕಾಗಿರುವ ಮಾಹಿತಿಗಳನ್ನು ತಿಳಿದುಕೊಳ್ಳಲು ವಾಟ್ಸ್ಆ್ಯಪ್ ಅನುವುಮಾಡಿಕೊಟ್ಟಿಲ್ಲ. ಇದಕ್ಕಾಗಿ WAMR, Whats Deleted, Deleted Whatsapp Message ಆ್ಯಪ್ ಸೇರಿದಂತೆ ಅನೇಕ ಥರ್ಡ್ ಪಾರ್ಟಿ ಆ್ಯಪ್’ಗಳು ಬಳಕೆಯಲ್ಲಿದೆ.

ಈ ಆ್ಯಪ್ಗಳ ಸಹಾಯದಿಂದ ಬಳಕೆದಾರರು ಸುಲಭವಾಗಿ ತಮಗೆ ಬಂದ ಮೆಸೇಜ್’ಗಳ ಪೈಕಿ ಡಿಲೀಟ್ ಆದ ಮೆಸೇಜ್ಗಳು, ಡಾಕ್ಯೂಮೆಂಟ್’ಗಳು ಏನಿರಬಹುದು? ತಾವು ಡಿಪಿಗೆ ಹಾಕಿದ ಫೋಟೋಗಳನ್ನು ಯಾರೆಲ್ಲ ನೋಡಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳುತ್ತಿದ್ದಾರೆ. ಆದರೆ, ಈ ಆ್ಯಪ್’ಗಳು ಎಷ್ಟು ಸುರಕ್ಷಿತ ಎಂಬುದನ್ನು ನಾವು ಗಮನಿಸಬೇಕಿದೆ.

ಈ ನಿಟ್ಟಿನಲ್ಲಿ Whatsapp Removed ಎಂಬ ಅಪ್ಲಿಕೇಷನ್ ಬಂದಿದ್ದು, ಇದರಿಂದ ಸುಲಭವಾಗಿ, ಸುರಕ್ಷಿತವಾಗಿ ಡಿಲೀಟ್ ಆದ ಮೆಸೇಜ್, ಡಾಕ್ಯೂಮೆಂಟ್’ಗಳನ್ನು ನೋಡಬಹುದಾಗಿದೆ.

ಹಾಗಾದರೆ ಈ ಆ್ಯಪ್ ಅನ್ನು ಬಳಸುವುದು ಹೇಗೆ?

1. ಗೂಗಲ್ ಪ್ಲೆ ಸ್ಟೋರ್ ಮೂಲಕ Whatsapp Removed ಆ್ಯಪ್ ಡೌನ್’ಲೋಡ್ ಮಾಡಿಕೊಳ್ಳಿ.
2. ಸೆಟ್ಟಿಂಗ್ಸ್ ಅನ್ನು ಪೂರ್ಣಗೊಳಿಸಿ ಅನುಮತಿ ನೀಡಿ.
3. ವಾಟ್ಸ್ಆ್ಯಪ್ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ. NEXT ಎಂಬುದರ ಮೇಲೆ ಕ್ಲಿಕ್ ಮಾಡಿ.
4. ನಂತರ New screen ತೆರೆದುಕೊಳ್ಳುತ್ತದೆ.
5. Save File ಗೆ ಅನುಮತಿ ನೀಡಿ.

App Link : https://play.google.com/store/apps/details?id=color.dev.com.whatsremoved

ಥರ್ಡ್ ಪಾರ್ಟಿ ಆ್ಯಪ್’ಗಳನ್ನು ಬಳಸುವ ಮುನ್ನ ಇರಲಿ ಎಚ್ಚರ. ಯಾಕೆಂದರೆ, ಈ ಆ್ಯಪ್ ಗಳು ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ ಇಟ್ಟುಕೊಂಡಿರುವ ಎಲ್ಲಾ ಮಾಹಿತಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತವೆ. ಆದ್ದರಿಂದ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಬಳಸುವಾಗ ಸುರಕ್ಷಿತ ಆ್ಯಪ್ ಸ್ಟೋರ್ ಗಳಿಂದ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

You might also like
Leave A Reply

Your email address will not be published.