ಗ್ಯಾನವ್ಯಾಪಿ : ಹಿಂದೂಗಳಿಗೆ ದೊಡ್ಡ ಜಯ.

ಗ್ಯಾನವಾಪಿಯಲ್ಲಿರುವ ಮಸೀದಿಯ ಸರ್ವೇ ವಿಷಯದಲ್ಲಿ ಹಿಂದೂಗಳ ಅರ್ಜಿಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದ್ದು, ಹಿಂದೂಗಳ ಅರ್ಜಿಯನ್ನು ಎತ್ತಿ ಹಿಡಿದಿದೆ.

1991ರ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ 3 ಅರ್ಜಿಗಳನ್ನು ಹಾಗೂ ಗ್ಯಾನವಾಪಿಯ ಮಸೀದಿ ಸರ್ವೇ ಮಾಡಲು ನೀಡಿದ್ದ ಅವಕಾಶವನ್ನು ರದ್ದುಗೊಳಿಸುವಂತೆ 2 ಅರ್ಜಿಗಳನ್ನು ರದ್ದುಗೊಳಸಿಬೇಕೆಂದು ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿಯಿಂದ ಮೂರು ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯಿಂದ ಎರಡು ಅರ್ಜಿಗಳನ್ನು ಅಲಹಾಬಾದ್‌ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಈ ಅರ್ಜಿಗಳ ವಿಚಾಣೆ ನಡೆಸಿರುವ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ಏಕ ಸದಸ್ಯ ಪೀಠ ಇದೇ ಡಿಸೆಂಬರ್ 8 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಈ ತೀರ್ಪು ಹೊರಬಿದ್ದಿದೆ.

ಹಿಂದೂಗಳಾದ ಸೋಮನಾಥ ವ್ಯಾಸ್-ರಾಮನಾರಾಯಣ ಶರ್ಮಾ ಮತ್ತು ಹರಿಹರ ಪಾಂಡೆ ಅವರು 1991ರಲ್ಲಿ ವಿವಾದಿತ ಗ್ಯಾನವ್ಯಾಪಿ ಮಸೀದಿ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯಿದೆಯಡಿ ಆದಿ ವಿಶ್ವೇಶ್ವರ ದೇಗುಲ ಪ್ರಕರಣವನ್ನು ವಿಚಾರಣೆ ನಡೆಸುವಂತಿಲ್ಲ ಎಂದು ಗ್ಯಾನವ್ಯಾಪಿ ಮಸೀದಿ ಆಡಳಿತ ಸಮಿತಿಯಿಂದ ವಾದಿಸಲಾಗಿತ್ತು. ಈ ವಿವಾದವು ಸ್ವಾತಂತ್ರ್ಯ ಪೂರ್ವದಲ್ಲಿತ್ತು ಮತ್ತು ಜ್ಞಾನವ್ಯಾಪಿ ವಿವಾದದಲ್ಲಿ ಪೂಜಾ ಸ್ಥಳಗಳ ಕಾಯಿದೆಯು ಅನ್ವಯಿಸುವುದಿಲ್ಲ ಎಂದು ಹಿಂದೂಗಳ ಪರ ಅರ್ಜಿದಾರರು ವಾದಿಸಿದ್ದರು.

ಎರಡೂ ಕಡೆಯ ವಾದವನ್ನು ಆಲಿಸಿರುವ ಹೈಕೋರ್ಟ್‌ ನ್ಯಾಯಪೀಠವು, ವಿವಾದಿತ ಜಾಗದ ಹಸ್ತಾಂತರ ಪ್ರಕರಣದ ವಿಚಾರಣೆಯನ್ನು ನಡೆಸಬಹುದು ಎಂದು ಹಿಂದೂಗಳ ಅರ್ಜಿಯನ್ನು ಎತ್ತಿ ಹಿಡಿದಿದೆ. ಅಲ್ಲದೇ, ಗ್ಯಾನವ್ಯಾಪಿ ಮಸೀದಿಯ ಸರ್ವೇಗೆ ನೀಡಿದ್ದ ಆದೇಶ ರದ್ದು ಮಾಡಬೇಕು ಎಂದು ಸಲ್ಲಿಸಿದ್ದ ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದೆ.

ಈ ಮೂಲಕ ಕಾಶಿ ವಿಶ್ವನಾಥ ಮಂದಿರ ಹೋರಾಟ ಸಮಿತಿಗೆ ಕಾನೂನಿನ ಬಲ ದೊರೆತಂತಾಗಿದೆ. 1991 ರಿಂದಲೂ ನಿರಂತರವಾಗಿ ಈ ಬಗ್ಗೆ ಹೋರಾಟಗಳು ನಡೆಯುತ್ತಲೇ ಬಂದಿವೆ. ಕಳೆದ ವರ್ಷವಷ್ಟೇ ವಾರಣಾಸಿ ನ್ಯಾಯಾಲಯ ಗ್ಯಾನವ್ಯಾಪಿ ಮಸೀದಿಯ ಸರ್ವೆಗೆ ಅವಕಾಶ ನೀಡಿತ್ತು. ಈ ಸರ್ವೇಯಲ್ಲಿ ಗ್ಯಾನವ್ಯಾಪಿ ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿತ್ತು ಹಾಗೂ ಗೋಡೆಗಳ ಮೇಲೆ ಗಣೇಶ, ಲಕ್ಷ್ಮಿಯ ದೇವಿಯ ಮೂರ್ತಿಗಳು ಪತ್ತೆಯಾಗಿವೆ ಎಂಬ ಬಗ್ಗೆ ವರದಿಯಾಗಿತ್ತು.

You might also like
Leave A Reply

Your email address will not be published.