ವಿದ್ಯುತ್ ಉಳಿಸುವುದು ಹೇಗೆ?

ಈಗಿನ ಆಧುನಿಕ ಯುಗದಲ್ಲಿ ವಿದ್ಯುತ್ ಎಲ್ಲರಿಗೂ ಅನಿವಾರ್ಯವಾಗಿದ್ದು, ವಿದ್ಯುತ್ ಇಲ್ಲದ ಜೀವನವನ್ನು ಈಗ ಕಲ್ಪಿಸಿಕೊಳ್ಳುವುದು ಅಸಾಧ್ಯ. ವಿದ್ಯುತ್ ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಎಲ್ಲರೂ ವಿದ್ಯುತ್ ಗೆ ಅವಲಂಬಿತವಾಗಿದ್ದಾರೆ.

ಮನೆ ಮಾತ್ರವಲ್ಲದೆ ಕಚೇರಿಗಳು, ಆಸ್ಪತ್ರೆ ಹಾಗೂ ಇನ್ನಿತರ ಎಲ್ಲಾ ಸ್ಥಳಗಳಲ್ಲಿಯೂ ವಿದ್ಯುತ್ ಇಲ್ಲದೇ ಯಾವ ಕೆಲಸ ಕಾರ್ಯಗಳು ನಡೆಯುವುದಿಲ್ಲ, ಜೊತೆಗೆ, ವಿವಿಧ ಸಾರಿಗೆ ವಿಧಾನಗಳು ವಿದ್ಯುತ್ ಅನ್ನು ಮಾತ್ರ ಅವಲಂಬಿಸಿವೆ. ವಿದ್ಯುತ್ ಜನರಿಗೆ ಸಹಕಾರಿಯಾಗಿದೆ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ, ಜನರು ವಿದ್ಯುತ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನುವುದೂ ಸತ್ಯ.

ಹಾಗಾಗಿ, ನಾಳಿನ ಸುಸ್ಥಿರ ಭವಿಷ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ವಿದ್ಯುತ್ ಉಳಿತಾಯ ಮಾಡುವಲ್ಲಿ ಹೆಜ್ಜೆ ಇಡಬೇಕಿದೆ. ವರ್ತಮಾನದ ಜೊತೆಗೆ ಭವಿಷ್ಯದ ಚಿಂತನೆಯ ಅಗತ್ಯ ಬಹಳಷ್ಟಿದೆ‌. ವಿದ್ಯುತ್ ಉಳಿಕೆಯತ್ತ ವಹಿಸಬೇಕಾದ ಸರಳ ಉಪಾಯಗಳು ಹೀಗಿವೆ:

– ಅಕ್ರಮ ವಿದ್ಯುತ್ ಸಂಪರ್ಕ ಪಡೆಯದಿರಿ.
​- ವಿದ್ಯುತ್ ಉಪಕರಣಗಳನ್ನು ಬಳಸದೇ ಇರುವಾಗ ಸ್ವಿಚ್ ಆಫ್ ಮಾಡಿ.
– ಸೋಲಾರ್ ವಿದ್ಯುತ್ ಘಟಕಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಸ್ಥಾಪಿಸಿ, ಸೌರವಿದ್ಯುತ್ ಅನ್ನು ಬಳಸಿ.
​- ರೆಫ್ರಿಜರೇಟರ್ ಗೆ ಥರ್ಮೋಸ್ಟಾಟ್ ಅನ್ನು ಅಳವಡಿಸಿ.
– ಪರಿಸರ ಸ್ನೇಹಿ ಎಲ್.ಇ.ಡಿ ಬಲ್ಬ್ ಗಳನ್ನು ಬಳಸಿ.
– ನೈಸರ್ಗಿಕ ಬೆಳಕಿನ‌ ಮೂಲಗಳನ್ನು ಬಳಸಿ.
– ನವೀನ ಸ್ಮಾರ್ಟ್ ತಂತ್ರಜ್ಞಾನದ ವಿದ್ಯುತ್ ಉಪಕರಣಗಳನ್ನು ಬಳಸಿ
​- ನಿಮ್ಮ ರೆಫ್ರಿಜಿರೇಟರ್’ನ ಬಾಗಿಲನ್ನು ಅನಗತ್ಯವಾಗಿ ತೆರೆದಿಡಬೇಡಿ.
-ಅಗತ್ಯವಿಲ್ಲದ ಸಮಯದಲ್ಲಿ ಲೈಟ್ಸ್ ಮತ್ತು ಫ್ಯಾನ್ ಸ್ವಿಚ್’ಗಳನ್ನು ಆಫ್ ಮಾಡಿಕೊಳ್ಳಿ.
-ಸೆನ್ಸರ್ ತಂತ್ರಜ್ಞಾನದ ವಿದ್ಯುತ್ ಉಪಕರಣಗಳನ್ನು ಬಳಸಿ.

ವಿದ್ಯುತ್ ಉಳಿಕೆ, ಮತ್ತು ಇನ್ನಿತರ ಸುರಕ್ಷತಾ ಕ್ರಮಗಳನ್ನು ಅರಿಯಲು ನಮ್ಮ ಸಾಮಾಜಿಕ ಜಾಲತಾಣಗಳನ್ನು ಫಾಲೋ ಮಾಡಿ ಮತ್ತು ಅನುಸರಿಸಿ.

You might also like
Leave A Reply

Your email address will not be published.