Breaking News : ರಾಜ್ಯಕ್ಕೆ ಮತ್ತೆ ಕೊರೋನಾ ಭೀತಿ – ಮಾಸ್ಕ್ ಕಡ್ಡಾಯ!

ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಸಾಂಕ್ರಾಮಿಕ ರೂಪಾಂತರಿ ತಳಿಯ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಜಾಗ್ರತೆ ವಹಿಸಿದ್ದು 60 ವರ್ಷ ಮೇಲ್ಪಟ್ಟ ಹಿರಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ.

ಕೊರೋನ ವೈರಸ್ ರೂಪಾಂತರಿ ತಳಿ ಜೆ.ಎನ್.1 ಕೇರಳದ 79 ವರ್ಷದ ಮಹಿಳೆಯೋರ್ವಳಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಠಿಯಾಗಲು ಕಾರಣವಾಗಿದೆ. ಶಬರಿಮಲೆ ಮತ್ತು ಅದರ ಸುತ್ತಮುತ್ತಲೂ ಅಯ್ಯಪ್ಪ ಮಾಲಾಧಾರಿಗಳ ನೂಕುನುಗ್ಗಲು ಸೃಷ್ಠಿಯಾಗಿದೆ. ಈ ವರ್ಷ ಲಕ್ಷಾಂತರ ಜನ ಭಕ್ತಾಧಿಗಳು ಶಬರಿಮಲೆಗೆ ಪ್ರಯಾಣಿಸಿದ್ದು, ಇದೇ ವೇಳೆ ಕೊರೋನಾದ ಹೊಸ ರೂಪಾಂತರಿ ತಳಿ ಪತ್ತೆಯಾಗಿರುವುದು ಭಕ್ತರಲ್ಲಿ ಆತಂಕವನ್ನುಂಟುಮಾಡಿದೆ.

ಶಬರಿಮಲೆಗೆ ಕರ್ನಾಟಕದಿಂದಲೇ ಸಾಕಷ್ಟು ಜನ ಮಾಲಾಧಾರಿಗಳು ಪ್ರಯಾಣಿಸಿದ್ದು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ಪ್ರಸ್ತುತ ಕೊರೋನಾದ ಬಗ್ಗೆ ಜನತೆ ಚಿಂತಿಸಬೇಕಾದ ಅಗತ್ಯವಿಲ್ಲ. ಆದಾಗ್ಯೂ, 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಕೊರೋನಾ ಲಕ್ಷಣಗಳು ಕಂಡುಬಂದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

You might also like
Leave A Reply

Your email address will not be published.