ದೇಶದ 15 ಶ್ರೀಮಂತ ದೇವಾಲಯಗಳಿವು – ಈ ದೇವಾಲಯಗಳ ಆಸ್ತಿ ಎಷ್ಟು ಗೊತ್ತೇ?

ಭಾರತವು ಸನಾತನ ಹಿಂದೂ ಸಂಸ್ಕೃತಿಯ ಶ್ರೀಮಂತ ಪರಂಪೆಯ ಪ್ರತೀಕವಾಗಿದೆ. ಹಿಂದೂ ಸಂಸ್ಕೃತಿಯು ಮುಕ್ಕೋಟಿ ದೇವತೆಗಳ ಇರುವಿಕೆಯನ್ನು ನಂಬುತ್ತದೆ. ಇದರಲ್ಲಿ ಪ್ರಮುಖವಾಗಿ ಶಿವ ಹಾಗೂ ವಿಷ್ಣುವಿನ 11 ಅವತಾರಗಳು, ಗಣಪತಿ, ಲಕ್ಷ್ಮೀ, ಸರಸ್ವತಿ, ಗೌರಿ ದೇವರುಗಳನ್ನು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಆಚರಿಸುವ ಶ್ರೀ ದೇವಿ, ತಾಯಮ್ಮ, ಗಂಗಮ್ಮ, ಭೈರವೇಶ್ವರ, ವೀರಭದ್ರ, ಶನಿ ದೇವರನ್ನು ಪೂಜಿಸಲಾಗುತ್ತದೆ.

ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ದೇವಾಲಯಗಳಿದ್ದು, ಇವುಗಳ ಹಿಂದೂ ಸಂಸ್ಕೃತಿಯ ಹೆಮ್ಮೆಯಾಗಿವೆ. ಅಲ್ಲದೇ, ದೇವಸ್ಥಾನಗಳು ಆದಾಯದ ಮೂಲಗಳು ಆಗಿವೆ. ದೇವಸ್ಥಾನಗಳಿಗೆ ಬರುವ ಭಕ್ತರಿಂದ ದೇವಾಲಯದ ಸುತ್ತ ಮುತ್ತ ವಾಸಿಸುವ ಕುಟುಂಬಗಳ ವ್ಯಾಪಾರ ವ್ಯವಹಾರ ನಡೆಯುತ್ತದೆ. ಈ ಹಿಂದೆ ರಾಜ ಮಹಾರಾಜರು ತಮ್ಮ ರಾಜ್ಯ ಆದಾಯವನ್ನು ದೇವಲಾಯಗಳಲ್ಲಿ ಸಂಗ್ರಹಿಸಿಡುತತಿದ್ದರೂ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ.

ಪ್ರಸ್ತು, ದೇಶದಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನಗಳು ಪ್ರಸಿದ್ಧಿಯಲ್ಲಿದ್ದು, ಸಾಗರೋಪಾದಿಯಲ್ಲಿ ಭಕ್ತರು ದೇವಸ್ಥಾನಗಳ ದರ್ಶನ ಪಡೆಯುತ್ತಿದ್ದಾರೆ. ಈ ಮೂಲಕ ಹಾಗೂ ಭಕ್ತಾಧಿಗಳು ನೀಡುವ ಹಣದ ಮೂಲಕ ಶ್ರೀಮಂತ ದೇವಸ್ಥಾನಗಳು ಸೃಷ್ಠಿಯಾಗಿವೆ. ನಾವೀಗ ದೇಶದ 15 ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ನೋಡೋಣ.

1) ಪದ್ಮನಾಭ ಸ್ವಾಮಿ ದೇವಾಲಯ ಕೇರಳ. ಆದಾಯ ರೂ. 1,20,000 ಕೋಟಿ.

2) ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಆಂಧ್ರಪ್ರದೇಶ. ಸ್ಥಿರಾಸ್ತಿ ಮೌಲ್ಯ 37 ಸಾವಿರ ಕೋಟಿ ರೂ. ವಾರ್ಷಿಕ ದೇಣಿಗೆ ರೂ. 650 ಕೋಟಿ.


3) ಗುರುವಾಯೂರು ದೇವಸ್ಥಾನ, ಕೇರಳ. ಆಸ್ತಿ ಮೌಲ್ಯ ರೂ. 2,500 ಕೋಟಿ


4) ಶ್ರೀ ವೈಷ್ಣೋ ದೇವಿ ದೇವಾಲಯ ಜಮ್ಮು. ಆದಾಯ ರೂ. 500 ಕೋಟಿ.


5) ಶಿರಡಿ ಸಾಯಿಬಾಬಾ ಮಂದಿರ ನಾಸಿಕ್, ಮಹಾರಾಷ್ಟ್ರ. ಆದಾಯ ರೂ.320 ಕೋಟಿ


6) ಗೋಲ್ಡನ್ ಟೆಂಪಲ್ ಅಮೃತಸರ್, ಪಂಜಾಬ. ಆದಾಯ ರೂ. 500 ಕೋಟಿ


7) ಶಬರಿಮಲೆ ದೇವಸ್ಥಾನ, ಕೇರಳ. ಆದಾಯ ರೂ. 250 ಕೋಟಿ


8) ಸಿದ್ಧಿ ವಿನಾಯಕ ದೇವಸ್ಥಾನ, ಮುಂಬೈ. ಆದಾಯ ರೂ. 125 ಕೋಟಿ


9) ಮೀನಾಕ್ಷಿ ದೇವಸ್ಥಾನ ಮಧುರೈ, ತಮಿಳುನಾಡು ಆದಾಯ ರೂ. 6 ಕೋಟಿ


10) ಜಗನ್ನಾಥ ಪುರಿ ದೇವಸ್ಥಾನ ಪುರಿ, ಒಡಿಸ್ಸಾ. ಆದಾಯ ರೂ. 150 ಕೋಟಿ


11) ಕುಕ್ಕೆ ಸುಬ್ರಮಣ್ಯ ದೇವಸ್ಥಾನ, ಕರ್ನಾಟಕ. ಆದಾಯ ರೂ. 90 ಕೋಟಿ


12) ಮಹಾಬೋಧಿ ದೇವಸ್ಥಾನ ಬೋಧ ಗಯಾ, ಬಿಹಾರ. ಆದಾಯ ರೂ. 106 ಕೋಟಿ


13) ಮಹಾಲಕ್ಷ್ಮಿ ದೇವಸ್ಥಾನ ಕೋಲ್ಹಾಪುರ, ಮಹಾರಾಷ್ಟ್ರ. ಆದಾಯ ರೂ. 14 ಕೋಟಿ


14) ಸೋಮನಾಥ ದೇವಸ್ಥಾನ ಸೋಮನಾಥ, ಗುಜರಾತ್. ಆದಾಯ ರೂ. 11 ಕೋಟಿ


15) ಕಾಶಿ ವಿಶ್ವನಾಥ ದೇವಸ್ಥಾನ ಕಾಶಿ, ಉತ್ತರ ಪ್ರದೇಶ. ಆದಾಯ ರೂ. 6 ಕೋಟಿ

You might also like
Leave A Reply

Your email address will not be published.