ದುಡಿಮೆಗಿಂತ ಹೆಚ್ಚು ಹಣ ಸಂಪಾದಿಸಬಹುದೇ? ಮನೆಯಲ್ಲಿ ಎಷ್ಟು ಹಣ ಸಂಗ್ರಹಿಸಿಡಬಹುದು? ಮಿಸ್ ಮಾಡ್ದೆ ಓದಿ

ಕಾಲಮಾನ ಬದಲಾದ ಹಾಗೆ ಮಾನವನ ಜೀವನದ ಮಟ್ಟವು ಬದಲಾಗುತ್ತ ಹೋಗುತ್ತಿದೆ. ಇಂದು ಸಿರಿವಂತಿಕೆಯಲ್ಲಿ ಮೆರೆಯುತ್ತಿದ್ದ ವ್ಯಕ್ತಿ ಕಾರಣಾಂತರಗಳಿಂದ ಬಡತನದಲ್ಲಿ ಬೇಯುತ್ತಿದ್ದಾನೆ. ಹಾಗೆಯೇ ಬಡತನದಲ್ಲಿ ಬೇಯುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಎಂಬಂತೆ ಸಿರಿವಂತನಾಗಿದ್ದಾನೆ. ಹೀಗೆ ಕಾಲಚಕ್ರ ಉರುಳುತ್ತಿರುವ ಅದೆಷ್ಟೋ ನಿದರ್ಶನಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ ಕೂಡ.

ಯಾವ ವಿಷಯದ ಬಗ್ಗೆ ಪೀಠಿಕೆ ಹಾಕ್ತಿದ್ದಾರೆ ಅಂತೀರ? ಹೌದು! ಇತ್ತೀಚಿನ ದಿನಮಾನಗಳಲ್ಲಿ ಐಟಿ, ಇಡಿ ದಾಳಿ ಆಗ್ತಿರೋ ವಿಚಾರಗಳನ್ನ ಇಲ್ಲಿ ವೈಭವಿಕರಿಸಿ ಹೇಳೊದೇನೂ ಬೇಡ. ಆದರೆ, ಪ್ರತಿ ಸಾರಿ ಈ ದಾಳಿ ಆದಾಗಲು ಸಾರ್ವಜನಿಕರಲ್ಲಿ ಮನೆ ಮಾಡೋ ವಿಚಾರಗಳೆಂದರೆ,

  • ಈ ಅಕ್ರಮ ಎನ್ನುವುದು ಹೇಗೆ ನಿರ್ಧಾರ ಆಗುತ್ತೆ?
  • ಹಾಗಿದ್ರೆ ನಮ್ಮ ಭವಿಷ್ಯತ್ ಗಾಗಿ ಮನೆಯಲ್ಲಿ ದುಡ್ಡು ಕೂಡಿಡುವುದೇ ತಪ್ಪಾ?
  • ದುಡಿಮೆ ಸಾಮರ್ಥ್ಯಕ್ಕಿಂತ ಹೆಚ್ಚು ಹಣ ಸಂಪಾದಿಸೋದೆ ತಪ್ಪಾ?
  • ಮನೆಯಲ್ಲಿ ಎಷ್ಟು ಹಣದವರೆಗೂ ಸಂಗ್ರಹಿಸಿಡಬಹುದು?
  • ಹಣ ಹೆಚ್ಚು ಸಂಪಾದಿಸಿದರು ದಾಖಲಾತಿ ಇಟ್ಟುಕೊಳ್ಳಬೇಕೆ?

ಹೀಗೆ ಸಾರ್ವಜನಿಕರಲ್ಲಿ ನಾನಾ ರೀತಿಯ ಪ್ರಶ್ನೆಗಳು ಉದ್ಭವಿಸುವುದು ಸಹಜವೇ! ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತಂತೆ. ಹೀಗಿರುವಾಗ ಮನುಷ್ಯನ ಸ್ಥಿತಿ ಏನು? ಇದೇ ಹಣಕ್ಕಾಗಿ ಅಪ್ಪ-ಅಮ್ಮನನ್ನೆ ಬಿಡದಿರುವಾಗ, ಪರರನ್ನು ಬಿಡುವರೇ? ಇಂತಹದೊಂದು ಅತ್ಯಧಿಕ ಪ್ರಾಮುಖ್ಯತೆಯನ್ನ ಪ್ರಸ್ತುತ ದಿನಮಾನಗಳಲ್ಲಿ ಹಣ ಪಡೆಯುತ್ತಿದೆ.

ದುಡ್ಡಿದ್ರೆ ದೊಡ್ಡಪ್ಪ ಎಂಬಂತೆ ಪ್ರತಿ ಸನ್ನಿವೇಶದಲ್ಲೂ ಬಹುಮುಖ್ಯ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಮನುಷ್ಯ ತನ್ನ ಭವಿಷ್ಯದ ದೃಷ್ಟಿಯಿಂದ ಹಣ ಕೂಡಿಡಲು ಪ್ರಾರಂಭಿಸಿದ್ದಾನೆ. ಕೂಡಿಡುವುದರಲ್ಲೂ ಎರಡು ವಿಧಗಳಿವೆ. ಅದೇ ಅಕ್ರಮ-ಸಕ್ರಮ. ಸಾಮಾನ್ಯವಾಗಿ ಬಹುತೇಕ ಜನರು ಸಕ್ರಮವಾಗಿ ಹಣ ಕೂಡಿಡುವುದೇ ಹೆಚ್ಚು. ಈ ಅತೀ ಆಸೆ ಗತಿ ಗೇಡು ಎಂಬಂತೆ ಕೆಲವರು ದುಡ್ಡಿನ ವ್ಯಾಮೋಹಕ್ಕೆ ಸಿಲುಕಿ ಅಕ್ರಮವಾಗಿ ಸಂಪಾದಿಸಲೊರಟ್ಟಿದ್ದಾರೆ.

ಹಾಗಿದ್ರೆ ನಮ್ಮ ಮನೆಗಳಲ್ಲಿ ಎಷ್ಟು ಹಣದವರೆಗೆ ಸಂಗ್ರಹಿಸಬಹುದು?

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ನಮ್ಮ ಮನೆಗಳಲ್ಲಿ ಎಷ್ಟು ಹಣದವರೆಗೆ ಸಂಗ್ರಹಿಸಿಡಬಹುದು? ಎಂಬುದಾಗಿದೆ. ಈ ಪ್ರಶ್ನೆಗೆ ಉತ್ತರವನ್ನು ಎರಡು ರೀತಿಯಲ್ಲಿ ಗಮನಿಸೋಣ!
1. ಒಂದು ನಿಮ್ಮ ಆರ್ಥಿಕ ಸಾಮರ್ಥ್ಯ
2. ನಿಮ್ಮ ಹಣದ ವಹಿವಾಟಿನ ಅಭ್ಯಾಸ.

ನಮ್ಮ ಮನೆಗಳಲ್ಲಿ ಎಷ್ಟು ಮೊತ್ತದ ಹಣ ಸಂಗ್ರಹಿಸಿಡಬಹುದು ಎಂಬುದರ ಕುರಿತು ಯಾವುದೇ ಮಿತಿಯಿಲ್ಲ. ನಿಮಗೆಷ್ಟು ಅಗತ್ಯವೋ ಅಷ್ಟು ಹಣವನ್ನು ನೀವು ಸಂಗ್ರಹಿಸಿಡಬಹುದು. ಹೀಗೆಂದ ಮೇಲೆ ಈ ಐಟಿ, ಇಡಿ ದಾಳಿ ಏಕೆ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗುವುದು ಸಹಜವೇ.

ಆದಾಯ ತೆರಿಗೆ ನಿಯಮಗಳ ಪ್ರಕಾರ ನಿಮ್ಮ ಮನೆಗಳಲ್ಲಿ ಎಷ್ಟು ಹಣ ಬೇಕಾದರು ಸಂಪಾದಿಸಬಹುದು. ಆದರೆ ನೀವು ಕೂಡಿಟ್ಟ ಪ್ರತಿ ಪೈಸೆ ಎಲ್ಲಿಂದ ಬಂತು ಎಂಬ ದಾಖಲೆಯಿರಬೇಕು. ನಿಮ್ಮ ಆದಾಯದ ಮೂಲ ದಾಖಲೆ ಇರಬೇಕು. ನೀವು ತೆರಿಗೆ ಕಟ್ಟಿದಿರೋ ಇಲ್ಲವೋ ಎಂಬ ದಾಖಲೆ ಹೊಂದಿರೋದು ಕಡ್ಡಾಯ.

ಇದರೊಂದಿಗೆ ಐಟಿಆರ್ ಘೋಷಣೆ ಹೊಂದಿರಬೇಕು. ಒಂದು ವೇಳೆ ನೀವು ಇದನ್ನು ಹೊಂದಿಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ನೋಟು ಅಮಾನ್ಯೀಕರಣದ ಬಳಿಕ ನಿಮ್ಮ ಮನೆಯಲ್ಲಿ ದಾಖಲೆಗಳಿರದ ಅಥವಾ ಅಕ್ರಮ ನಗದು ಪತ್ತೆಯಾದ್ರೆ ಆ ಮೊತ್ತದ ಶೇ.137ರಷ್ಟನ್ನು ತೆರಿಗೆಯಾಗಿ ವಿಧಿಸಲು ಆದಾಯ ತೆರಿಗೆ ನಿಯಮಗಳಡಿಯಲ್ಲಿ ಅವಕಾಶವಿದೆ.

ಪ್ಯಾನ್ ಕಡ್ಡಾಯ:

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ನಿಯಮಗಳನ್ವಯ ಒಮ್ಮೆಗೆ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಠೇವಣಿಯಿಡಲು ಅಥವಾ ವಿತ್ ಡ್ರಾ ಮಾಡಲು ನೀವು ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಹಾಗೆಯೇ ನೀವು ವಾರ್ಷಿಕ 20 ಲಕ್ಷ ರೂ. ಗಿಂತ ಹೆಚ್ಚಿನ ಠೇವಣಿ ಇರಿಸಿದ್ರೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಒಂದು ವೇಳೆ ನೀವು ಇದನ್ನು ಮಾಡಲು ವಿಫಲರಾದ್ರೆ 20 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.

ಹಣದ ವಹಿವಾಟಿಗೆ ಮಿತಿ:

ಒಂದು ವರ್ಷದಲ್ಲಿ ಬ್ಯಾಂಕ್ ನಿಂದ ಒಂದು ಕೋಟಿ ರೂ.ಗಿಂತ ಅಧಿಕ ಮೊತ್ತದ ಹಣ ವಿತ್ ಡ್ರಾ ಮಾಡಿದ್ರೆ ಆಗ ಶೇ.2ರಷ್ಟು ಟಿಡಿಎಸ್ ಪಾವತಿಸಬೇಕು. ಒಂದು ವರ್ಷದಲ್ಲಿ 20 ಲಕ್ಷ ರೂ.ಗಿಂತ ಅಧಿಕ ಹಣ ವಹಿವಾಟು ನಡೆಸಿದ್ರೆ ಅದಕ್ಕೆ ದಂಡ ವಿಧಿಸಲಾಗುತ್ತದೆ. 30 ಲಕ್ಷ ರೂ.ಗಿಂತ ಅಧಿಕ ಮೊತ್ತದ ಆಸ್ತಿಯ ಖರೀದಿ ಹಾಗೂ ಮಾರಾಟ ನಡೆಸಿದ್ರೆ ತನಿಖೆ ನಡೆಸಲಾಗುವುದು.

ಬ್ಯಾಂಕ್ ನಲ್ಲಿ ವಹಿವಾಟು ನಡೆಸುವುದು ಹೇಗೆ?

ಒಬ್ಬ ವ್ಯಕ್ತಿ ಒಂದು ಬಾರಿಗೆ 50 ಸಾವಿರ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಇದಕ್ಕೆ ನೀವು ಪ್ಯಾನ್ ಕಾರ್ಡ್ ಅನ್ನು ತೋರಿಸಬೇಕಾಗುವುದು. ಒಂದು ವರ್ಷದಲ್ಲಿ 1 ಕೋಟಿಗಿಂತ ಅಧಿಕ ಮೊತ್ತ ಹಿಂತೆಗೆದುಕೊಂಡರೆ ಶೇ.2 ರಷ್ಟು GST ಆಗಲಿದೆ. ವರ್ಷದಲ್ಲಿ 20 ಲಕ್ಷ ರೂಪಾಯಿ ವರೆಗೆ ಬ್ಯಾಂಕಿನಲ್ಲಿ ನೀವು ಠೇವಣಿ ಇರಿಸಿದರೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಎರಡನ್ನೂ ಸಹ ತೋರಿಸಬೇಕಾಗುವುದು. ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (Central Board of Direct Taxes) ನಲ್ಲಿ ತಿಳಿಸಲಾಗಿದೆ.

ಡೆಬಿಟ್, ಕ್ರೆಡಿಟ್ ಕಾರ್ಡ್ ನಲ್ಲಿ ಒಂದು ಲಕ್ಷಕ್ಕೆ ಅಧಿಕ ಹಣ ಪ್ರತೀ ಬಾರಿ ವಹಿವಾಟು ನಡೆದರೆ ಅದು ತನಿಖೆಯ ವಿಚಾರದ ಅಡಿಯಲ್ಲಿ ಬರಲಿದೆ. 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನೀವು ನಗದು ರೂಪದಲ್ಲಿ ಏನಾದರೂ ಖರೀದಿ ಮಾಡಿದ್ದರೆ ಅದು ತನಿಖೆಯ ವಿಷಯಕ್ಕೆ ಬರಲಿದೆ. ಅದೇ ರೀತಿ ದತ್ತಿ ಹಾಗೂ ದಾನವಾಗಿ ಹೆಚ್ಚಿನ ಮೊತ್ತ ನೀಡಿದರೆ ಟ್ಯಾಕ್ಸ್ ಆಗೊಲ್ಲ, ಆದರೆ ಆ ಮೊತ್ತ ತನಿಖಾ ವಿಚಾರ ಸಹ ಆಗಲಿದೆ.

ಈ ಮಾಹಿತಿಗಳು ನಿಮ್ಮ ನೆನಪಿರಲಿ:

1. ಯಾವುದೇ ವಸ್ತುವನ್ನು ಖರೀದಿಸುವಾಗ 2 ಲಕ್ಷ ರೂ.ಗಿಂತ ಅಧಿಕ ಮೊತ್ತವನ್ನು ಹಣ (Cash) ರೂಪದಲ್ಲಿ ಪಾವತಿಸಬೇಡಿ. ಒಂದು ವೇಳೆ ಹೀಗೆ ಮಾಡುವುದಾದ್ರೂ ನಿಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ತೋರಿಸಿ.
2. ಒಂದು ದಿನದಲ್ಲಿ ಸಂಬಂಧಿಕರಿಂದ 2 ಲಕ್ಷ ರೂ.ಗಿಂತ ಅಧಿಕ ಮೊತ್ತದ ಹಣವನ್ನು ಪಡೆದುಕೊಳ್ಳಬೇಡಿ.
3. 20 ಸಾವಿರ ರೂ. ಗಿಂತ ಅಧಿಕ ಮೊತ್ತದ ಹಣವನ್ನು ಯಾರಿಂದಲೂ ಹಣ ರೂಪದಲ್ಲಿ ಸಾಲ ಪಡೆಯಬೇಡಿ.
4. 2 ಸಾವಿರ ರೂ. ಗಿಂತ ಅಧಿಕ ಮೊತ್ತದ ಹಣವನ್ನು ಹಣದ ರೂಪದಲ್ಲಿ ದಾನ ಮಾಡಬೇಡಿ. ಹಾಗೆ ಮಾಡುವುದಾದರು ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಿ.
5. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಒಮ್ಮೆಗೆ 1ಲಕ್ಷ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟು ವಹಿವಾಟು ನಡೆಸಿದ್ರೆ ಅದನ್ನು ತನಿಖೆಗೊಳಪಡಿಸಲಾಗುತ್ತದೆ.

You might also like
Leave A Reply

Your email address will not be published.