ಐಫೋನ್ ಬಳಕೆದಾರರೇ ಎಚ್ಚರ – ಕೇಂದ್ರ ಸರ್ಕಾರದ ಸಂದೇಶ ಓದಿ.

ಸ್ಯಾಮ್ಸಂಗ್ (Samsung) ಬಳಕೆದಾರರ ನಂತರ ಭಾರತೀಯ ಐಫೋನ್ ಬಳಕೆದಾರರಿಗೂ (I Phone Users) ಕೇಂದ್ರದ ಕಂಪ್ಯೂಟರ್ ತುರ್ತು ಪ್ರಕ್ರಿಯಾ ತಂಡ (CERT-in) ಭದ್ರತಾ ಸಲಹೆಯನ್ನು ನೀಡಿದ್ದು, ಬಳಕೆದಾರರ ಡೇಟಾ ಮತ್ತು ಸಾಧನದ ಸುರಕ್ಷತೆಗೆ ಧಕ್ಕೆಯುಂಟುಮಾಡುವ ತಂತ್ರಾಂಶದ ದುರ್ಬಲತೆಗಳ ( vulnerabilities) ಬಗ್ಗೆ ಜಾಗ್ರತೆವಹಿಸುವಂತೆ ಕೋರಿದೆ.

ಆ್ಯಪಲ್ ಉತ್ಪನ್ನಗಳಲ್ಲಿ (Apple Products) ಹಲವಾರು ದುರ್ಬಲತೆಗಳು (ತಾಂತ್ರಿಕ ವೈಫಲ್ಯತೆಗಳು) ವರದಿಯಾಗಿವೆ, ಇದು ಆನ್‌ʼಲೈನ್‌ ವಂಚಕರಿಗೆ ಮೊಬೈಲ್‌ʼನ ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು, ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು, ಸೇವಾ ನಿರಾಕರಣೆ (DoS) ಷರತ್ತುಗಳನ್ನು ಉಂಟುಮಾಡಲು, ದೃಢೀಕರಣವನ್ನು ಬೈಪಾಸ್ ಮಾಡಲು, ಉನ್ನತ ಸವಲತ್ತುಗಳನ್ನು ಪಡೆಯಲು ಮತ್ತು ವಂಚನೆಯ ದಾಳಿಯನ್ನು ಮಾಡಲು ಅನುಮತಿಸುತ್ತದೆ. ಎಂದು CERT-In ಹೇಳಿದೆ.

ಆ್ಯಪಲ್ ಉತ್ಪನ್ನಗಳಾದ ioS, iPadOS, macOS, tvOS, watchOS ಮತ್ತು ಸಫಾರಿ ಬ್ರೌಸರ್ʼಗಳು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕೇಂದ್ರವು ಬುಧವಾರವಷ್ಟೇ, ಸ್ಯಾಮ್ಸಂಗ್ ಗ್ಯಾಲಕ್ಷಿ (Samsung Galaxy) ಉತ್ಪನ್ನಗಳ ಮೇಲೂ ಇದೇ ರೀತಿಯ ಎಚ್ಚರಿಕೆ ನೀಡಿತ್ತು.

ಸ್ಯಾಮ್ಸಂಗ್ ಮೊಬೈಲ್ (Samsung Mobiles) ಆಂಡ್ರಾಯ್ಡ್ ವರ್ಶನ್ʼಗಳಾದ 11, 12, 13 ಮತ್ತು 14 ಉತ್ಪನ್ನಗಳ ಬಳಕೆದಾರರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿತ್ತು.

You might also like
Leave A Reply

Your email address will not be published.